ಹರಿದ್ವಾರದ ಸಾಧುಗಳು ಜಾತ್ರೆಗೆ ತೆರಳಿದ ಜೋಗಕೊಳ್ಳದ ಶ್ರೀರಾಜಾಭಾರತಿ ಸ್ವಾಮೀಜಿ

0
213


ಸರ್ವೇಜನಾ ಸುಖಿನಾ ಭವತು ಈ ಜಗತ್ತಿನಲ್ಲಿರುವ ಎಲ್ಲರಿಗೂ ಒಳ್ಳೆಯದಾಗ ಬೇಕು, ಮನುಷ್ಯನಾಗಿ ಜನಿಸಿದ ಮೇಲೆ ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡಿ ಪುಣ್ಯ ಕಟ್ಟಿಕೊಳ್ಳುವ ಕೆಲಸ ಸಕಲರಿಂದ ಆದಲ್ಲಿ ಜಗತ್ತೇ ನೆಮ್ಮದಿ ಶಾಂತಿಯಿಂದ ಇರುತ್ತದೆ ಎಂದು ದೇವರ ಕೊಳ್ಳದ ಶ್ರೀದಿಗಂಬರ ರಾಜಾಭಾರತಿ ಸ್ವಾಮೀಜಿ ಅಭಿಪ್ರಾಯ ಪಟ್ಟರು. ಅವರು ಭಾನುವಾರದಂದು ಶ್ರೀ ಅನ್ನಪೂರ್ಣೇಶ್ವರಿ ಆಶ್ರಮದಿಂದ ಹರಿದ್ವಾರದಲ್ಲಿ ಜರುಗುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಲು ತೆರಳುತ್ತಿರುವ ಸಮಯದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.

ಬದುಕಿನಲ್ಲಿ ಆಗಿದೆಲ್ಲ ಒಳ್ಳೆಯದಕ್ಕೆ ಆಗಿದೆ, ಆಗುವುದೆಲ್ಲ ಒಳ್ಳೆಯದಕ್ಕೆ ಆಗುತ್ತದೆ ರೋಧಿಸಲು ನೀನೇನು ಕಳಕೊಂಡಿರುವೆ, ನಿನ್ನೆ ಬೇರೆ ಯಾರದ್ದೋ ಆಗಿದ್ದು ಇಂದು ನಿನ್ನದಾಗಿದೆ ಮತ್ತೆ ನಾಳೆ ಯಾರದೋ? ಎಂಬುದಿ ಭಗವದ್ಗೀತೆಯ ಸಾರವಾಗಿದೆ ಇಡೀ ಪ್ರಪಂಚದಲ್ಲಿಯೇ ಹಿಂದುಗಳ ಸಂಪ್ರದಾಯ ಧಾರ್ಮಿಕತೆಗೆ ದೊಡ್ಡದಾದ ಇತಿಹಾಸವಿದೆ ಅದರಲ್ಲೂ ಸಾಧುಗಳ ಕೊಡುಗೆ ಅಪಾರವಾಗಿದೆ ಎಂದರು.

ಹರಿದ್ವಾರದಲ್ಲಿ ಫೆ.೨೭ರಿಂದ ಆರಂಭವಾಗಿರುವ ಕುಂಭಮೇಳದಲ್ಲಿ ನಾನಾ ಪಂಥಗಳ ಸಾಧುಗಳು ಸೇರಿ ಲೋಕ ಕಲ್ಯಾಣಕ್ಕೆ ಪೂಜೆ ನೆರವೇರಿಸುವರು ಶ್ರೀಪಂಚ ಜುನಾ ಆಖಾಡದಲ್ಲಿ ಭಾಗವಹಿಸಲು ಐದನೇ ಬಾರಿ ತೆರಳುತ್ತಿದ್ದೇನೆ ಎಂದರು. ಆಶ್ರಮದಲ್ಲಿ ಅನೇಕ ಪೂಜೆಗಳು ಜರುಗಿದವು ಒಂಬತ್ತು ಜನ ಅನುಯಾಯಿಗಳೊಂದಿಗೆ ರಾಜಾಭಾರತಿ ಶ್ರೀಗಳು ಹರಿದ್ವಾರದ ಕಡೆ ಪ್ರಯಾಣ ಬೆಳಸಿದರು.

ಈ ಸಂದರ್ಭದಲ್ಲಿ ಹೊನ್ನೂರಪ್ಪ, ಮುರಾರಿಪುರ ಕುಮಾರಸ್ವಾಮಿ,ಮರಿಯಮ್ಮನಹಳ್ಳಿ ಮೀಸೆ ನಾಗರಾಜ, ಸೋಮಲಾಪುರ ಶರಭನಗೌಡ, ಪರಶುರಾಮ್‌, ಪತ್ರಕರ್ತ ಆರ್.ಶಿವರಾಮ್‌, ಆರ್.ವಿಕಾಸ್‌, ಚಂದ್ರಶೇಖರ್‌, ಎಸ್ಸಾರ್ಪಿ ಬಸವರಾಜ್‌, ಸತೀಶ್‌, ಓಬಳೇಶ್‌,ನವೀನ್‌, ಗಾದಿಗನೂರು ಪಿಸಿ ಹೊನ್ನೂರಪ್ಪ, ಹೊಸಪೇಟೆ ಚಂದುಜೈನ್‌ ಇತರರಿದ್ದರು.

LEAVE A REPLY

Please enter your comment!
Please enter your name here