ಯಶವಂತನಗರ: ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಲಸಿಕೆಗೆ ಚಾಲನೆ

0
306

ಸಂಡೂರು:ಫೆ:27- ತಾಲ್ಲೂಕಿನ ಯಶವಂತನಗರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸರೋಜಮ್ಮ, ಹಾಗೂ ಸದಸ್ಯರಾದ ಬುಡೆನ್, ಮಾಲನ್, ತಿಪ್ಪೇಸ್ವಾಮಿ, ಮತ್ತು ಕ್ಷೇತ್ರದ ಮೇಲ್ವಿಚಾರಕರಾದ ಅಂಬಿಕಾ ಕುಂಬಾರ್ ಅವರುಗಳು ಮಗುವಿಗೆ ಪೋಲಿಯೊ ಹನಿ ಹಾಕುವ ಮೂಲಕ ಚಾಲನೆ ನೀಡಿದರು.

ನಂತರ ಮೇಲ್ವಿಚಾರಕಿ ಅಂಬಿಕಾ ಕುಂಬಾರ್ ಮಾತನಾಡಿ, ಪೋಲಿಯೊ ಹನಿಗಳಿಂದ ಯಾವುದೇ ಅಡ್ಡಪರಿಣಾಮವಿಲ್ಲ ಐದು ವರ್ಷದವರೆಗೆ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಹನಿಗಳು ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು..
ಈಗಾಗಲೇ ನಮ್ಮ ದೇಶವನ್ನು ಪೋಲಿಯೊ ಮುಕ್ತ ರಾಷ್ಟ್ರವೆಂದು ಘೋಷಿಸಲಾಗಿದ್ದರೂ, ನೇರೆಯ ರಾಷ್ಟ್ರಗಳಲ್ಲಿ ಪಲ್ಸ್ ಪೋಲಿಯೊ ರೋಗ ಕಾಣಿಸಿರುವುದರಿಂದ ನಮ್ಮ ದೇಶದಲ್ಲಿ ಮುಂಜಾಗೃತೆ ವಹಿಸಿ ಪಲ್ಸ್ ಪೋಲಿಯೊ ಹನಿಗಳು ನೀಡಲಾಗುತ್ತಿದೆ ಎಂದರು.

ನಂತರ ಈ ಕುರಿತು ಮಾತನಾಡಿದ ಕೇಂದ್ರದ ಕಾರ್ಯಕರ್ತೆ ಕವಿತಾ ಅವರು, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಪೋಲಿಯೊದಿಂದ ರಕ್ಷಿಸಲು, ‘ಪೋಲಿಯೊ ರಾಷ್ಟ್ರೀಯ ರೋಗನಿರೋಧಕ ದಿನ – 2022’ ಅನ್ನು ಇಂದು ಪ್ರಾರಂಭಿಸಲಾಗಿದೆ ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಾದರೆ ಮಕ್ಕಳು ಆರೋಗ್ಯವಂತರಾಗಿರುವುದು ಅವಶ್ಯ.ಗ್ರಾಮದಲ್ಲಿನ ಸಾರ್ವಜನಿಕರು, ಜನರು ಮುಂದೆ ಬಂದು ತಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆಂದು ಹೇಳಿದರು.

ಈ ಸಂದರ್ಭದಲ್ಲಿ ಕವಿತಾ ಅಂಗನವಾಡಿ ಕಾರ್ಯಕರ್ತೆ ಆಶಾ ಕಾರ್ಯಕರ್ತರಾದ ಇಂದುಮತಿ, ಕಮಲಾಕ್ಷಿ,ಹಾಜರಿದ್ದರು ಹಾಗೂ ಪಂಚಾಯತಿ ಸದಸ್ಯರಾದ ಬುಡೇನ್, ಮಾಲನ್, ಇವರು ಪೋಲಿಯೋ ಹಾಕಿಸಿಕೊಳ್ಳಲು ಬರುವ ಮಕ್ಕಳಿಗೆ ಚಾಕ್ಲೆಟ್ ವಿತರಿಸಿ ನಿಮ್ಮ ಮನೆ ಅಕ್ಕಪಕ್ಕದಲಿನ ಮಕ್ಕಳನ್ನು ಕರೆದುಕೊಂಡು ಬಂದು ಪೋಲಿಯೋ ಹನಿ ಹಾಕಿಸಿಕೊಂಡು ಹೋಗುವಂತೆ ಹೇಳಿದರು ಮಕ್ಕಳಿಗೆ ಉತ್ಸಾಹ ಬರುವಂತೆ ಚಾಕಲೇಟನ್ನು ವಿತರಿಸುತ್ತ ಅವರುಗಳಿಗೆ ಪೋಲಿಯೋ ಬಗ್ಗೆ ಮನವರಿಕೆ ಮಾಡುತ್ತಿದ್ದುದು ವಿಶೇಷವಾಗಿತ್ತು.

LEAVE A REPLY

Please enter your comment!
Please enter your name here