ಮೂರನೇ ಸುತ್ತಿನ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಲಸಿಕಾ ಅಭಿಯಾನ ಯಶಸ್ವಿ ಗೊಳಿಸಿ; ಪುರಸಭೆ ಸದಸ್ಯ ಎರ್ರಿಸ್ವಾಮಿ,

0
166

ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ 21 ನೇ ವಾರ್ಡಿನಲ್ಲಿ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಲಸಿಕಾ ಅಭಿಯಾನದ ಮೂರನೇ ಸುತ್ತಿನ ಫಲಾನುಭವಿಗಳೊಂದಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮ ಉದ್ದೇಶಿಸಿ ಕುರೇಕುಪ್ಪ
ಪುರಸಭೆ ಸದಸ್ಯ ಎರ್ರಿಸ್ವಾಮಿ ಅವರು ಮಾತನಾಡಿ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಮಯಕ್ಕೆ ಸರಿಯಾಗಿ ಲಸಿಕೆ ಹಾಕಿಸ ಬೇಕೆಂದು ತಾಯಂದಿರಿಗೆ ಮನವಿ ಮಾಡಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಲಸಿಕೆ ಪಡೆಯದೆ ವಂಚಿತರಾದ ಮಕ್ಕಳಿಗಾಗಿ ಮೂರನೇ ಸುತ್ತಿನಲ್ಲೂ ಲಸಿಕೆ ನೀಡಲಾಗುತ್ತಿದ್ದು,ಈಗಾಗಲೆ ಎರಡೂ ಸುತ್ತಿನಲ್ಲಿ ಲಸಿಕೆ ನೀಡಲಾಗಿದೆ, ಈಗ ಮೂರನೇ ಸುತ್ತಿನಲ್ಲೂ ಬಾಕಿ ಉಳಿದ ಎಲ್ಲಾ ಲಸಿಕೆಯನ್ನು ಮಕ್ಕಳಿಗೆ ಕೊಡಿಸಬೇಕು, ಇನ್ನೂ ಮುಂದೆ ಈ ರೀತಿ ಲಸಿಕೆ ಕೊಡಿಸುವುದನ್ನು ತಪ್ಪಿಸ ಬಾರದು, ಸರಿಯಾಗಿ ಲಸಿಕೆ ಕೊಡಿಸಿದ ನಂತರ ಮಗುವಿಗೆ ಲಸಿಕೆ ಕೊಡಿಸಿದ್ದು ವೇಳಾ ಪಟ್ಟಿಯ ಪ್ರಕಾರ ಸರಿಯಾಗಿ ಕೊಡಿಸಿದ್ದೇವೆ ಎಂದು ಖಾತ್ರಿ ಪಡಿಸಿಕೊಳ್ಳುವಂತೆ ತಾಯಂದಿರಿಗೆ ತಿಳಿಸಿದರು, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮಕ್ಕಳಿಗೆ ಲಸಿಕೆ ಕೊಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ಶಿಶುಗಳಿಗೆ ಹನ್ನೆರಡು ಮಾರಕ ರೋಗಗಳ ವಿರುದ್ಧ ಹುಟ್ಟನಿಂದ ಐದು ವರ್ಷದೊಳಗೆ ಇಂದ್ರಧನುಷ್ ನ ಏಳು ಬಣ್ಣಗಳ ಹಾಗೆ ಒಟ್ಟು ಏಳು ಬಾರಿ ಲಸಿಕೆ ಕೊಡಿಸಿ ಮಕ್ಕಳ ಆರೋಗ್ಯ ವೃದ್ಧಿಗೆ ಸಹಕಾರ ನೀಡಲು ಎಲ್ಲರೂ ಕೈಜೋಡಿಸಿರಿ ಎಂದು ಮನವಿ ಮಾಡಿದರು,

ಈ ಸಂದರ್ಭದಲ್ಲಿ ಆರೋಗ್ಯ ಸುರಕ್ಷಣಾಧಿಕಾರಿ ಭಾಗ್ಯ ಲಕ್ಷ್ಮಿ, ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ಆಶಾ ಕಾರ್ಯಕರ್ತೆ ಶ್ರೀದೇವಿ,ಆಶಾ, ರಾಜೇಶ್ವರಿ,ಕಾವೇರಿ,ರೇಖಾ,ಹುಲಿಗೆಮ್ಮ ತಾಯಂದಿರಾದ ಕಲಾವತಿ,ಸುಬ್ಬಲಕ್ಷ್ಮಿ, ದೇವಿ,ಮಬೀನಾ,ಲಿಂಗಮಣಿ,ಪರಿವಿಂದರ್,ಕೃಷ್ಣವೇಣಿ,ಸುನಿತಾ ಹಾಗೂ ಶಿವಲಿಂಗಪ್ಪ, ರಾಮಾಂಜನಪ್ಪ,ಸುನಿಲ್ ಕುಮಾರ್ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here