ಸ್ವಚ್ಛತೆಗೆ ಆದ್ಯತೆ ನೀಡಿ ಅಧಿಕಾರಿಗಳೇ: ಬಾಬುವಲಿ ಪುರಸಭೆ ಸ್ಥಾಯಿಸಮಿತಿ ಅಧ್ಯಕ್ಷ

0
137

ಬಳ್ಳಾರಿ: ಹಗರಿಬೊಮ್ಮನಹಳ್ಳಿ ಪುರಸಭೆಯ ಬಹುತೇಕ ವಾರ್ಡ್‌ಗಳಲ್ಲಿ ಸ್ವಚ್ಛತೆಯಿಲ್ಲದೆ ಎಲ್ಲೆಂದರಲ್ಲಿ ತ್ಯಾಜ್ಯ ಸಂಗ್ರಹವಾಗಿದೆ ಎಂದು ಪುರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಉಲುವತ್ತಿ ಬಾಬುವಲಿ ವಾರ್ಡ್ ರೌಂಡ್ ಹಾಕುವುದರಮೂಲಕ ಪುರಸಭೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

14 ನೇ ವಾರ್ಡನ ಕೆಲವೆಡೆ ಭೇಟಿ ನೀಡಿ ನಂತರ ಅವರು ಮಾತನಾಡಿ, ಬಂಡಿಹಳ್ಳಿ ರಸ್ತೆ ಚರಂಡಿಗಳು ತುಂಬಿ ಸೊಳ್ಳೆ ಉತ್ಪಾದನೆ ಕೇಂದ್ರದಂತಾಗಿದ್ದು, ಕೂಡಲೆ ಸ್ವಚ್ಚತೆ ಕೈಗೆತ್ತಿಕೊಳ್ಳಬೇಕು. ಗಿಡಮರಗಳಿಂದಾಗಿ ಬಂಡಿಹಳ್ಳಿ ರಸ್ತೆಯ ಹಲವು ಚರಂಡಿಗಳು ಸ್ಥಗಿತವಾಗಿವೆ. ತ್ಯಾಜ್ಯ ತುಂಬಿದ ಚರಂಡಿಗಳಿಂದಾಗಿ ತ್ಯಾಜ್ಯ ನೀರು ಜನನಿಬೀಡ ಪ್ರದೇಶಗಳತ್ತ ನುಗ್ಗುವಂತಿದೆ. ಈ ಕುರಿತಂತೆ ಆರೋಗ್ಯ ನಿರೀಕ್ಷಕಿ ನಾಗರತ್ನ ಅವರ ಗಮನಸೆಳೆದರೂ ಪ್ರಯೋಜನವಾಗಿಲ್ಲ .
ಪುರಸಭೆಯ14 ಮತ್ತು 15ನೇ ಹಣಕಾಸು ಯೋಜನೆಯಡಿಯ ಉಳಿತಾಯದ ಅನುದಾನ ಬಳಕೆ ಕುರಿತಂತೆ ಕ್ರಿಯಾಯೋಜನೆ ರೂಪಿಸುವಲ್ಲಿ ಪುರಸಭೆ ಬೇಜವಾಬ್ದಾರಿ ಎಂಜಿನಿಯರ್ ಮಂಜುನಾಥ ಪಾಟೀಲ್ ನಿರ್ಲಕ್ಷ್ಯ ತೋರುತ್ತಿದ್ದಾರೆ.
ಅಧಿಕಾರಿಗಳು ಇಲ್ಲದ ನೆಪ ಹೇಳುವ ಮೂಲಕ ಅಭಿವೃದ್ಧಿ ಕಡೆಗಾಣಿಸಿದ್ದಾರೆ. ಶಾಸಕರು ಆನೇಕ ಬಾರಿ ಸ್ವಚ್ಛತೆ ಕಾಪಾಡಿ ಎಂದು ಹೇಳಿದರು ಅಧಿಕಾರಿಗಳ ನಿರ್ಲಕ್ಷತೆ ಮುಂದುವರೆದಿದೆ ಪ್ರೊಬೇಷನರಿ ಸಹಾಯಕ ಆಯುಕ್ತ ರಾಹುಲ್ ಅವರು ಸ್ವಚ್ಛತೆ ಕುರಿತಂತೆ ತಕ್ಷಣವೇ ಸೂಕ್ತ ಕ್ರಮ ಕೈಗೆತ್ತಿಕೊಳ್ಳಲು ಶಾಸಕರು ಒತ್ತಾಯಿಸಿದ್ದಾರೆ. ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬುವಲಿ ತ್ಯಾಜ್ಯವಸ್ತು ತುಂಬಿರುವ ಸ್ಥಳಗಳಿಗೆ ಭೇಟಿ ಮಾಡಿ ಪರಿಶೀಲಿಸಿದರು.

ವರದಿ:-ನಾಗಭೂಷಣ್ ಎಂಪಿ

LEAVE A REPLY

Please enter your comment!
Please enter your name here