ಪ್ರಶಿಕ್ಷಣಾರ್ಥಿಗಳು ಕಾರ್ಯಕ್ಷಮತೆ, ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು: ಉತ್ತರ ವಲಯ ಪೊಲೀಸ್ ಮಹಾ ನಿರೀಕ್ಷಕ ರಾಘವೇಂದ್ರ ಸುಹಾಸ್

0
186

ಧಾರವಾಡ . ಫೆ.01: ಪೊಲೀಸ್ ಹಾಗೂ ಕಾರಾಗೃಹ ಇಲಾಖೆಗೆ ಸೇರುವ ಪ್ರತಿಯೊಬ್ಬ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ಷಮತೆ, ಬದ್ಧತೆಯಿಂದ ಕರ್ತವ್ಯ ನಿರ್ವಹಿಸಿ, ವೃತ್ತಿಪರತೆ ಅಳವಡಿಸಿ ಕೊಳ್ಳಬೇಕೆಂದು ಉತ್ತರ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ರಾಘವೇಂದ್ರ ಸುಹಾಸ ಹೇಳಿದರು.

ಅವರು ಇಂದು ಬೆಳಿಗ್ಗೆ ಧಾರವಾಡ ಪೊಲೀಸ್ ಇಲಾಖೆ ಡಿ.ಎ.ಆರ್. ಕವಾಯತ ಮೈದಾನದಲ್ಲಿ ಆಯೋಜಿಸಿದ್ದ, ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 22 ನೇ ತಂಡದ ಹಾಗೂ ಎರಡನೇ ಕಾರಾಗೃಹ ಮಹಿಳಾ ವೀಕ್ಷಕಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಇಲಾಖೆಯಲ್ಲಿ ಸೇವೆ ಸಲ್ಲಿಸುವವರಿಗೆ ಮಾನಸಿಕ ಧೈರ್ಯ, ದೈಹಿಕ ಸದೃಡತೆ ಮತ್ತು ಪರಿಸ್ಥಿತಿಗಳನ್ನು ವ್ಯವಸ್ಥಿವಾಗಿ ನಿರ್ವಹಿಸುವ ಮನೋಬಲ ಇರಬೇಕು. ಪ್ರತಿ ಶಿಕ್ಷಣಾರ್ಥಿಗೆ ಆತ್ಮಸ್ಥೆöÊರ್ಯ ತುಂಬುವ, ಕೌಶಲ್ಯ ಕಲಿಸುವ ತರಬೇತಿ ನೀಡಲಾಗುತ್ತಿದೆ. ತಮ್ಮ ಸೇವಾವಧಿಯುದ್ದಕೂ ಅದನ್ನು ತಪ್ಪದೇ ಪಾಲಿಸಬೇಕೆಂದು ಅವರು ಹೇಳಿದರು.
ಇಲಾಖೆ ಸೇವೆಗೆ ವಿವಿಧ ರೀತಿಯ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಧರರು ಸೇರುತ್ತಿದ್ದಾರೆ. ಸೇರ್ಪಡೆ ಮೊದಲ ಮೆಟ್ಟಿಲಾಗಿದ್ದು, ಮುಂದೆ ಪೊಲೀಸ್ ಹಾಗೂ ಇತರ ಇಲಾಖೆಗಳಲ್ಲಿ ಸೇವೆಗೆ ಇಚ್ಚಿಸಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಇಚ್ಚಿಸಿದಲ್ಲಿ ಅವರಿಗೆ ಅವಕಾಶ ನೀಡಲಾಗುತ್ತಿದೆ. ಆಸಕ್ತರು ಈ ಅವಕಾಶಗಳನ್ನು ಬಳಸಿಕೊಂಡು ಉನ್ನತ ಹುದ್ದೆಗಳಿಗೆ ಆಯ್ಕೆಯಾಗಬೇಕು. ಇಲಾಖೆಯ ಶಿಸ್ತು, ಸಂಯಮ ಕಾನೂನುಗಳನ್ನು ಪಾಲಿಸಿ, ಅನುಷ್ಠಾನಗೊಳಿಸಿ, ಕರ್ತವ್ಯ ಪ್ರಜ್ಞೆ ಮೆರೆಯಬೇಕೆಂದು ಮಹಾ ನಿರೀಕ್ಷರು ಹೇಳಿದರು.

ಪೊಲೀಸ್ ಹಾಗೂ ಕಾರಗೃಹ ಸೇವೆಗೆ ಸೇರಲು ಪ್ರಶಿಕ್ಷಣಾರ್ಥಿಗಳಿಗೆ ಅವಕಾಸ ಮಾಡಿಕೊಟ್ಟ ಅವರ ಕುಟುಂಬ ಸದಸ್ಯರಿಗೆ ಕೃತಜ್ಞತೆ ತಿಳಿಸಿದ ಅವರು ಕಾರಾಗೃಹ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲು ಉತ್ತಮ ಸೌಕರ್ಯ, ಅವಕಾಶಗಳನ್ನು ನೀಡುವದರೊಂದಿಗೆ ಅವರಲ್ಲಿ ಇಲಾಖೆಯು ಆತ್ಮಸ್ಥೆöÊರ್ಯ ತುಂಬಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬುರಾಮ್, ಉತ್ತರ ವಲಯ ಕಾರಾಗೃಹಗಳ ಉಪ ಮಹಾ ನಿರೀಕ್ಷಕರಾದ ಎಂ. ಸೋಮಶೇಖರ, ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ಕೃಷ್ಣಕಾಂತ ಇದ್ದರು.

ಡಿ.ಎ.ಆರ್ ವಿಭಾಗದ ಡಿವೈಎಸ್‌ಪಿ ಹಾಗೂ ಉಪ ಪ್ರಾಂಶುಪಾಲ ಜಿ.ಸಿ.ಶಿವಾನಂದ ಅವರು ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ, ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ವಾರ್ಷಿಕ ವರದಿ ಮಂಡಿಸಿದರು.
ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಪಿ.ಐ. ಬಿ.ಸಿ.ಡೂಗನವರ ಹಾಗೂ ಆರ್.ಎಸ್.ಐ ರಾಜು ಗುಡನಟ್ಟಿ ನೇತೃತ್ವದಲ್ಲಿ ವನಿತಾ ಎಚ್, ಸಂಗೀತಾ ಲಮಾಣಿ, ಅನಿತಾ.ಪಿ ಮತ್ತು ರಾಣಮ್ಮ ಮುಂದಾಳತ್ವದ ದಳಗಳಿಂದ ಪರೇಡ ಮೂಲಕ ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರ ಉಪ ಪೊಲೀಸ್ ಆಯುಕ್ತರಾದ ರಾಮರಾಜನ್, ಆರ್.ಬಿ.ಬಸರಗಿ, ಡಿ.ವೈ.ಎಸ್.ಪಿ. ಎಂ.ಬಿ. ಸಂಕದ ಸೇರಿದಂತೆ ವಿವಿಧ ಅಧಿಕಾರಿಗಳು ಎಲ್ಲ ಪೊಲೀಸ್ ಠಾಣೆಗಳ ಸಿಪಿಐಗಳು, ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿಗಳು ಮತ್ತು ಪ್ರಶಿಕ್ಷಣಾರ್ಥಿಗಳ ಕುಟುಂಬಗಳ ಸದಸ್ಯರು ಉಪಸ್ಥಿತರಿದ್ದರು.
ಡಿ.ಸಿ.ಆರ್.ಬಿ ಯ ಡಿ.ವೈ.ಎಸ್.ಪಿ. ರಾಮನಗೌಡ ಹಟ್ಟಿ ವಂದಿಸಿದರು, ಎನ್.ಎ.ಮುತ್ತಣ್ಣ ಪೊಲೀಸ್ ಮಕ್ಕಳ ವಸತಿ ಶಾಲೆಯ ಡಾ. ವೈ.ಪಿ.ಕಲ್ಲನಗೌಡರ ಹಾಗೂ ಡಾ.ಎ.ಸಿ.ಅಲ್ಲಯ್ಯನಮಠ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಕ್ರೀಡಾ ವಿಜೇತ ಮಹಿಳಾ ಪ್ರಶಿಕ್ಷಣಾರ್ಥಿಗಳು : ಒಳಾಂಗಣ ವಿಭಾಗದಲ್ಲಿ ಚಿಕ್ಕಬಳ್ಳಾಪೂರ ಜಿಲ್ಲೆಯ ಅನೀತಾ ಎಸ್.ಕೆ, ವಿಜಯಪುರ ಜಿಲ್ಲೆಯ ಶೃತಿ ಪಾಟೀಲ, ಉತ್ತರ ಕನ್ನಡ ಜಿಲ್ಲೆಯ ಲಾವಣ್ಯಾ ನಾಯಕ ಹಾಗೂ ಬೆಳಗಾವಿ ಜಿಲ್ಲೆಯ ಗೀತಾ ಚಿಮ್ಮಡ ಮತ್ತು ಹೊರಾಂಗಣ ವಿಭಾಗದಲ್ಲಿ ಬೆಳಗಾವಿ ಜಿಲ್ಲೆಯವರಾದ ಪರವೀನ್‌ಬಾನು ಮುನವಳ್ಳಿ, ಅಕ್ಷತಾ ಮಮದಾಪೂರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಲಾವಣ್ಯಾ ನಾಯಕ ವಿಜೇತರಾಗಿದ್ದಾರೆ.
ಫೈರಿಂಗ್ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಯ ಸುಶ್ಮಿತಾ ಕೆ.ಎಸ್, ವಿಜಯಪುರ ಜಿಲ್ಲೆಯ ಭಾಗ್ಯಮ್ಮ ಕೋಟೆಗುಡ್ಡ ಹಾಗೂ ಧಾರವಾಡ ಜಿಲ್ಲೆಯ ಅಶ್ವಿನಿ ಹಿರೇಮಠ ವಿಜೇತರಾಗಿದ್ದಾರೆ. ಎಲ್ಲ ಕ್ರೀಡೆಗಳು ಸೇರಿದಂತೆ ಉತ್ತಮ ಪ್ರದರ್ಶನ ನೀಡಿದ ಉತ್ತರ ಕನ್ನಡ ಜಿಲ್ಲೆಯ ಮಹಿಳಾ ಪ್ರಶಿಕ್ಷಣಾರ್ಥಿ ಲಾವಣ್ಯಾ ನಾಯಕ ಅವರಿಗೆ ಸರ್ವೊತ್ತಮ ಪ್ರಶಸ್ತಿ ನೀಡಲಾಯಿತು..

LEAVE A REPLY

Please enter your comment!
Please enter your name here