ಗ್ರಾಪಂ ಸದಸ್ಯರ ಸಾಮಾಥ್ರ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ: ಉತ್ತಮ ರೀತಿಯಲ್ಲಿ ಆಡಳಿತ ನಿರ್ವಹಿಸಿ ಗ್ರಾಪಂ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಿ: ಜಿಪಂ ಸಿಇಒ ಕೆ.ಆರ್.ನಂದಿನಿ

0
157

ಬಳ್ಳಾರಿ,ಫೆ.16 : ಸದೃಢವಾದ ಅಧಿಕಾರ ಚಲಾವಣೆ ಹಾಗೂ ಉತ್ತಮ ರೀತಿಯಲ್ಲಿ ಆಡಳಿತ ನಿರ್ವಹಿಸುವ ಕುರಿತ ಗ್ರಾಮ ಪಂಚಾಯತಿ ಸದಸ್ಯರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಸಾಮರ್ಥಾಭಿವೃದ್ಧಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ತರಬೇತಿಯನ್ನು ಸಮರ್ಪಕವಾಗಿ ಪಡೆದುಕೊಂಡು ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗಬೇಕು ಎಂದು ಜಿಪಂ ಸಿಇಒ ನಂದಿನಿ ಕೆ.ಆರ್.ಅವರು ಸಲಹೆ ನೀಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತಿ ಸದಸ್ಯರಿಗೆ ಬಳ್ಳಾರಿ ತಾಪಂ ಕಚೇರಿ ಸಭಾಂಗಣದಲ್ಲಿ ಮಂಗಳವಾರದಿಂದ ಆರಂಭವಾದ ಸಾಮಥ್ರ್ಯಾಭಿವೃದ್ಧಿ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿಯಾಗಬೇಕಾದರೆ ಆಯಾ ಗ್ರಾಮ ಮಟ್ಟದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಂದ ಮಾತ್ರ ಸಾಧ್ಯ. ಗ್ರಾಮ ಪಂಚಾಯತಿಯಿಂದ ಅನುಷ್ಟಾನಗೊಳ್ಳುವ ಕಾರ್ಯಗಳನ್ನು ಸರಿಯಾದ ರೀತಿಯಲ್ಲಿ ಕಾರ್ಯ ರೂಪಕ್ಕೆ ತರುವಲ್ಲಿ ಗ್ರಾಮೀಣ ಮಟ್ಟದ ಜನಪ್ರತಿನಿಧಿಗಳು, ಅಧ್ಯಕ್ಷರು ಪ್ರಮುಖ ರೂವಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ಅಧ್ಯಕ್ಷರು ಮತ್ತು ಸದಸ್ಯರು ಸಹಕಾರದಿಂದ ಮುನ್ನಡೆದರೆ ಮುಂದಿನ ನಾಲ್ಕೈದು ವರ್ಷಗಳಲ್ಲಿ ಆಯಾ ಗ್ರಾಮಗಳು ಸರ್ವಾಂಗೀಣ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದರು.

ಗ್ರಾಪಂ ಚುನಾವಣೆಯಲ್ಲಿ ಹೊಸದಾಗಿ ಆಯ್ಕೆಯಾದ ಸದಸ್ಯರಿಗೆ ಕೆಲಸ ಮಾಡುವ ಆಸಕ್ತಿ, ತಮ್ಮ ಗ್ರಾಮಗಳನ್ನು ಅಭಿವೃದ್ಧಿಪಡಿಸಬೇಕು ಎನ್ನುವ ಹುಮ್ಮಸ್ಸು, ಪ್ರೇರಣೆಯಿರುತ್ತದೆ ಅದನ್ನು ನಿಮ್ಮ ಅಧಿಕಾರದ ಅವಧಿ ಮುಗಿಯುವ ತನಕ ಮುಂದುವರೆಸಿಕೊಂಡು ಹೋಗಿ. ಕಾನೂನು ಮತ್ತು ಕಾಯ್ದೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆಯಿರಿ ಎಂದರು.
ಗ್ರಾಮ ಸಭೆ ಎಂದರೇನು? ಅದು ನಡೆಯುವ ವಿಧಾನ ಹೇಗೆ? ಅದರಿಂದ ಸಾರ್ವಜನಿಕರಿಗೆ ಆಗುವ ಅನುಕೂಲಗಳು ಏನು? ಗ್ರಾಮ ಪಂಚಾಯತಿಗೆ ಎಷ್ಟು ಅನುದಾನ ಬರುತ್ತೆ, ಬಂದ ಹಣವನ್ನು ಹೇಗೆ ಮತ್ತು ಯಾವ ಯಾವ ಕಾಮಗಾರಿ ಮತ್ತು ಯೋಜನೆಗಳಿಗಾಗಿ ಬಳಕೆ ಮಾಡಲಾಗುತ್ತದೆ ಎನ್ನುವ ಸಂಪೂರ್ಣವಾದ ವಿಷಯವನ್ನು ತಿಳಿದುಕೊಳ್ಳಿ; ಇದು ತಾವು ಕಾರ್ಯನಿರ್ವಹಿಸುವ ಸಮಯದಲ್ಲಿ ನೆರವಾಗುತ್ತದೆ ಎಂದು ಅವರು ತಿಳಿಸಿದರು.


ತರಬೇತಿಯ ಕಾರ್ಯಕ್ರಮದಲ್ಲಿ ಜಿಪಂ ಉಪಕಾರ್ಯದರ್ಶಿ ಶರಣಬಸಪ್ಪ ಅವರು ಮಾತನಾಡಿ, ನಿಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು, ಸರಿಯಾದ ವಿದ್ಯುತ್ ವ್ಯವಸ್ಥೆ ಮತ್ತು ನೈರ್ಮಲ್ಯ ವ್ಯವಸ್ಥೆ ಈ ಮೂರು ಮೂಲಭೂತ ಅವಶ್ಯಕತೆಗಳನ್ನು ಸಾರ್ವಜನಿಕರಿಗೆ ಒದಗಿಸಿದರೆ ಅವರು ಯಾವುದೇ ಸಮಸ್ಯೆಗಳನ್ನು ಹೊತ್ತು ಪಂಚಾಯತಿಯ ಕಡೆ ಬರುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಸದಸ್ಯರು ಕಾರ್ಯಪ್ರವೃತ್ತರಾಗಿ ಎಂದರು.

ರಾಜ್ಯ ಸರ್ಕಾರದ 99 ಇಲಾಖೆಗಳಿಗೆ ಇರದಂತಹ ನೇರವಾಗಿ ತೆರಿಗೆ ವಿಧಿಸುವ ಅಧಿಕಾರ ಗ್ರಾಮ ಪಂಚಾಯತಿಗಳಿಗೆ ನೀಡಲಾಗಿದೆ. ಇದನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿ. ಆಸೆ ಇರಲಿ ಆದರೆ ದುರಾಸೆ ಬೇಡ. ದುರಾಸೆ ಮನುಷ್ಯನ ಆಲೋಚನೆಗಳನ್ನು ಕೊಲ್ಲುತ್ತದೆ. ಅದನ್ನು ಬಿಟ್ಟು ನಿಸ್ವಾರ್ಥಿಯಾಗಿ ಕಾರ್ಯ ನಿರ್ವಹಿಸಿ. ನಿರ್ಗತಿಕರಿಗೆ, ಮನೆಯಿಲ್ಲದವರಿಗೆ ವಸತಿ ಕೊಡಿ, ಉದ್ಯೋಗ ಖಾತ್ರಿಯನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ಎಲ್ಲರಿಗೆ ಕೆಲಸ ಕೊಡಿ, ನಿಮ್ಮ ನಿಮ್ಮ ಸಮಸ್ಯೆಗಳನ್ನು ಕೇಳುವ ಮೂಲಕ ಸಂಪನ್ಮೂಲ ವ್ಯಕ್ತಿಗಳಿಂದ ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳಿ; ತರಬೇತಿಯ ಸದುಪುಯೋಗ ಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಮಂಗಳವಾರದಿಂದ ಶುರುವಾದ ತರಬೇತಿಯಲ್ಲಿ ಸಂಗನಕಲ್ಲಿನ 23 ಸದಸ್ಯರು ಮತ್ತು ಕಾರೇಕಲ್ಲಿನ 17 ಸದಸ್ಯರು. ರೂಪನಗುಡಿಯ 22 ಸದಸ್ಯರುಗಳು, ಕಪ್ಪಗಲ್ಲಿನ 19 ಸದಸ್ಯರುಗಳು ಭಾಗಿಯಾಗಿದ್ದರು. ಇವರಿಗೆ ಫೆ.16ರಿಂದ 20ರವರೆಗೆ ತಾ.ಪಂ ಸಭಾಂಗಣ ತರಬೇತಿ ನೀಡಲಾಗುತ್ತದೆ.ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ, ತಾಪಂ ಸಿಬ್ಬಂದಿ,ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ನೂತನವಾಗಿ ಆಯ್ಕೆಯಾದ ಗ್ರಾಪಂ ಅಧ್ಯಕ್ಷರು, ಸದಸ್ಯರು, ಹಾಗೂ ಇತರರು ಇದ್ದರು.

ತರಬೇತಿ ವಿವರ: ಸಂಜೀವರಾಯನ ಕೋಟೆಯ 19 ಸದಸ್ಯರು ಮತ್ತು ಶಂಕರಬಂಡೆಯ 21 ಸದಸ್ಯರು ಫೆ.22ರಿಂದ 26ರವರೆಗೆ ತಾ.ಪಂ ಸಭಾಂಗಣದಲ್ಲಿ, ಸಾಮಥ್ರ್ಯಸೌಧದಲ್ಲಿ ವಣೇನೂರು 20 ಸದಸ್ಯರುಗಳು, ಎತ್ತಿನಬೂದಿಹಾಳ 20 ಸದಸ್ಯರುಗಳು ತರಬೇತಿ ಪಡೆಯಲಿದ್ದಾರೆ.
ಚೇಳ್ಳಗುರ್ಕಿ 16 ಸದಸ್ಯರು ಮತ್ತು ಅಮರಾಪುರ 25 ಸದಸ್ಯರು ಮಾ.01ರಿಂದ 05ರವರೆಗೆ ತಾ.ಪಂ ಸಭಾಂಗಣ, ಸಾಮಥ್ರ್ಯಸೌಧದಲ್ಲಿ ಬೈರದೇವನಹಳ್ಳಿ 19 ಸದಸ್ಯರುಗಳು, ಬಸರಕೋಡು 20 ಸದಸ್ಯರುಗಳಿಗೆ ತರಬೇತಿ.
ಎಂ.ಗೋನಾಳ 26 ಸದಸ್ಯರು ಮತ್ತು ಪರಮದೇವನಹಳ್ಳಿ 14 ಸದಸ್ಯರು ಮಾ15ರಿಂದ 19ರವರೆಗೆ ತಾ.ಪಂ ಸಭಾಂಗಣದಲ್ಲಿ, ಸಾಮಥ್ರ್ಯಸೌಧದಲ್ಲಿ ಹಂದಿಹಾಳ 13 ಸದಸ್ಯರುಗಳು, ಶ್ರೀಧರಗಡ್ಡ 27 ಸದಸ್ಯರುಗಳಿಗೆ ತರಬೇತಿ.
ಸಿರವಾರ 16 ಸದಸ್ಯರು ಮತ್ತು ಯರ್ರಗುಡಿ 26 ಸದಸ್ಯರು ಮಾ.22ರಿಂದ 26ರವರೆಗೆ ತಾ.ಪಂ ಸಭಾಂಗಣ, ಬಾದನಹಟ್ಟಿ 22 ಸದಸ್ಯರುಗಳು, ಗೆಣಕಿಹಾಳ 18 ಸದಸ್ಯರುಗಳಿಗೆ ಸಾಮಥ್ರ್ಯಸೌಧದಲ್ಲಿ ತರಬೇತಿ.
ಕೊಳಗಲ್ಲು 29 ಸದಸ್ಯರು ಮತ್ತು ದಮ್ಮೂರು 14 ಸದಸ್ಯರು ಮಾ.29ರಿಂದ ಏ.03ರವರೆಗೆ ತಾ.ಪಂ ಸಭಾಂಗಣ, ಸಾಮಾಥ್ಯಸೌಧದಲ್ಲಿ ಹೆಚ್.ವೀರಾಪುರ್ 21ಸದಸ್ಯರುಗಳು, ಓರ್ವಾಯಿ 19 ಸದಸ್ಯರುಗಳಿಗೆ ತರಬೇತಿ.
ಕಲ್ಲುಕಂಭ 24 ಸದಸ್ಯರು ಮತ್ತು ಸಿದ್ದಮ್ಮನಹಳ್ಳಿ 16 ಸದಸ್ಯರಿಗೆ ಏ.05 ರಿಂದ 09ರವರೆಗೆ ತಾ.ಪಂ ಸಭಾಂಗಣ, ಕೋಳೂರು 15 ಸದಸ್ಯರುಗಳು, ಬೆಳಗಲ್ಲು 26 ಸದಸ್ಯರುಗಳಿಗೆ ಸಾಮಥ್ರ್ಯಸೌಧದಲ್ಲಿ ತರಬೇತಿ.
ಏಳುಬೆಂಚಿ 22 ಸದಸ್ಯರು ಮತ್ತು ಶಿಡಿಗಿನಮೊಳ 18 ಸದಸ್ಯರು ಏ.29 ರಿಂದ 23 ರವರೆಗೆ ತಾ.ಪಂ ಸಭಾಂಗಣ ಕೇಂದ್ರದಲ್ಲಿ, ಸಾಮಥ್ರ್ಯಸೌಧದಲ್ಲಿ ಹಲಕುಂದಿ 20 ಸದಸ್ಯರುಗಳು, ಸೋಮಸಮುದ್ರ 20 ಸದಸ್ಯರುಗಳಿಗೆ ತರಬೇತಿ.
ಚಾನಾಳ 18 ಸದಸ್ಯರು ಮತ್ತು ಯರ್ರಂಗಳಗಿ 24 ಸದಸ್ಯರಿಗೆ ಏ.26 ರಿಂದ 30ರವರೆಗೆ ತಾ.ಪಂ ಸಭಾಂಗಣ, ಸಾಮಥ್ರ್ಯಸೌಧದಲ್ಲಿ ಸಿಂದಿಗೇರಿ 13 ಸದಸ್ಯರುಗಳು, ಮೋಕಾ 30 ಸದಸ್ಯರುಗಳಿಗೆ ತರಬೇತಿ.
ನೆಲ್ಲುಡಿ 20 ಸದಸ್ಯರು ಮತ್ತು ಕೊರ್ಲಗುಂದಿ 18 ಸದಸ್ಯರು ಮೇ.03 ರಿಂದ 07ರವರೆಗೆ ತಾ.ಪಂ ಸಭಾಂಗಣ ಕೇಂದ್ರದಲ್ಲಿ, ಎಮ್ಮಿಗನೂರು 35 ಸದಸ್ಯರುಗಳಿಗೆ ಸಾಮಥ್ರ್ಯಸೌಧದಲ್ಲಿ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ.

LEAVE A REPLY

Please enter your comment!
Please enter your name here