ತಾಯಿ ಮಗು ಕಾಣೆ ಪ್ರಕರಣ ದಾಖಲು

0
70

ಬಳ್ಳಾರಿ,ಫೆ.03: ಬಳ್ಳಾರಿ ತಾಲೂಕಿನ ಬೆಣಕಲ್ಲು ಗ್ರಾಮದ ಶಿವಮ್ಮ ಎಂಬ 22 ವರ್ಷದ ಯುವತಿ ಮತ್ತು ತನ್ನ ಮಗಳಾದ 3 ವರ್ಷದ ರಾಧಿಕ ಎಂಬ ಮಗು ಕಾಣೆಯಾಗಿರುವ ಕುರಿತು ಬಳ್ಳಾರಿ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಎ.ಎಸ್.ಐ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕಾಣೆಯಾದ ಯುವತಿಯ ತಂದೆ ಮೂಕಣ್ಣ ನು ಫೆ.01 ರಂದು ಸಂಜೆ 4 ಕ್ಕೆ ತನ್ನ ಅಳಿಯನ ತಂದೆಯಾದ ಲಿಂಗನಗೌಡ ಫೋನ್ ಮಾಡಿ, ನಿಮ್ಮ ಮಗಳಾದ ಶಿವಮ್ಮ ಮತ್ತು ಮೊಮ್ಮಗಳಾದ ರಾಧಿಕಳೊಂದಿಗೆ ಬೆಳಗ್ಗೆ 8.30 ರಿಂದ 9 ರ ಅವಧಿಯಲ್ಲಿ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬರುತ್ತೇನೆ ಎಂದು ಗಂಡನ ಮನೆಯಿಂದ ಹೋದವಳು ಮನೆಗೆ ವಾಪಸ್ಸು ಬಂದಿರುವುದಿಲ್ಲ ಎಂದು ಹೇಳಿದಾಗ ನಾವು ಬಳ್ಳಾರಿ ಮತ್ತು ಇತರೆ ಕಡೆ ಹೋಗಿ ಹುಡುಕಿದರೂ ಪತ್ತೆ ಆಗಿರುವುದಿಲ್ಲ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಕಾಣೆಯಾದ ಮಹಿಳೆಯ ಚಹರೆಯ ವಿವರ: ಎತ್ತರ 5 ಅಡಿ, ದುಂಡನೆಯ ಮುಖ, ಗೋಧಿ ಮೈಬಣ್ಣ, ತೆಳುವಾದ ಮೈಕಟ್ಟು, ಬಲಗಡೆ ತುಟಿ ಹತ್ತಿರ ಒಂದು ಕಪ್ಪು ಮಚ್ಛೆ ಇರುತ್ತದೆ, ಗುಲಾಬಿ ಬಣ್ಣದ ಸೀರೆ ಮತ್ತು ಬಿಳಿ ಬಣ್ಣದ ಕುಪ್ಪಸ ಬಟ್ಟೆ ಧರಿಸಿರುತ್ತಾರೆ ಹಾಗೂ ತೆಲುಗು, ಕನ್ನಡ ಭಾಷೆ ಮಾತನಾಡುತ್ತಾರೆ.
ಕಾಣೆಯಾದ ಮಗುವಿನ ಚಹರೆ ಗುರುತು: ಎತ್ತರ 2 ಅಡಿ, ದುಂಡನೆಯ ಮುಖ, ಗೋಧಿ ಮೈಬಣ್ಣ, ತೆಳುವಾದ ಮೈಕಟ್ಟು, ಹಸಿರು ಬಣ್ಣದ ಗವನ್ ಬಟ್ಟೆ ಧರಿಸಿರುತ್ತಾಳೆ, ಕನ್ನಡ ಭಾಷೆ ಮಾತನಾಡುತ್ತಾಳೆ.
ಮೇಲ್ಕಂಡ ಚಹರೆಯುಳ್ಳ ಮಹಿಳೆ ಹಾಗೂ ಮಗುವಿನ ಮಾಹಿತಿ ದೊರೆತಲ್ಲಿ ಬಳ್ಳಾರಿ ಎಸ್.ಪಿ ದೂ.08392-258400, ಬಳ್ಳಾರಿ ಉಪವಿಭಾಗದ ಡಿ.ಎಸ್.ಪಿ ದೂ.08392-272322, ಮಹಿಳಾ ಪೋಲಿಸ್ ಠಾಣೆಯ ಪಿ.ಐ ಮೊ.9480803088 ಹಾಗೂ ಬಳ್ಳಾರಿ ಮಹಿಳಾ ಪೋಲಿಸ್ ಠಾಣೆ ದೂ.08392-268108 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here