ಸಂಡೂರು ಸಾರಿಗೆ ಡಿಪೋ ಮ್ಯಾನೇಜರ್ ವೆಂಕಟೇಶ್ ರನ್ನು ಅಮಾನತುಗೊಳಿಸಿ

0
149

ಸಂಡೂರು ಸಾರಿಗೆ ಸಂಸ್ಥೆಯ ವ್ಯವಸ್ಥೆ ಹದಗೆಡಿಸಿರುವ ಡಿಪೋ ವ್ಯವಸ್ಥಾಪಕ ವೆಂಕಟೇಶರನ್ನು ಅಮಾನತು ಮಾಡುವಂತೆ ಶಾಸಕ ತುಕಾರಾಮ್ ಒತ್ತಾಯಿಸಿದರು.

ಸಂಡೂರು, ಹೊಸಪೇಟೆ ಬಸ್‌ ನಿಲ್ದಾಣದಲ್ಲಿ ಶುಕ್ರವಾರ ಸಂಜೆ 4.30 ರಿಂದ 6.30 ರವರೆಗೆ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು, 100ಕ್ಕೂ ಹೆಚ್ಚು ಪ್ರಯಾಣಿಕರು ಕಾದುಕುಳಿತ್ತಿದ್ದರೂ ಬಸ್‌ ಬರಲಿಲ್ಲ. ಈ ಬಗ್ಗೆ ಅಲ್ಲಿನ ಕೆಲವರು ಶಾಸಕ ಈ. ತುಕಾರಾಮ್ ಗೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ಹೊಸಪೇಟೆ ಬಸ್‌ ನಿಲ್ದಾಣಕ್ಕೆ ಬಂದ ಶಾಸಕ, ಅರ್ಧಗಂಟೆಗೂ ಹೆಚ್ಚು ಕಾಲು ಕಾದ ಬಳಿಕ ಬಸ್ ಬಂದಿದೆ. ಅದರೆ ಅಲ್ಲಿದ್ದವರು ಮೂರು ಬಸ್ಸಿನ ಜನ, ಇದರಿಂದ ಆಕ್ರೋಶಗೊಂಡ ಶಾಸಕರು, ಬೆಂಬಲಿಗರೊಂದಿಗೆ ಡಿಪೋಕ್ಕೆ ತೆರಳಿ ಧರಣಿ ಕುಳಿತರು. ಸ್ಥಳಕ್ಕೆ ಬಂದ ಕೆ ಎಸ್‌‌ ಆರ್ ಟಿ ಸಿ ಡಿಸಿ ದೇವರಾಜ್, ಡಿಟಿಓ, ಚಂದ್ರಶೇಖರ್, ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎಂದು ಮನವೊಲಿಸುವ ಪ್ರಯತ್ನ ಮಾಡಿದರು.

ಇದಕ್ಕೆ ಒಪ್ಪಿಕೊಳ್ಳದ ಶಾಸಕ, ಇದು ಒಂದು, ದಿನದ ಕಥೆಯಲ್ಲ. ಡಿಪೋ ಮ್ಯಾನೇಜರ್ ವೆಂಕಟೇಶ ಬಂದಾಗಿನಿಂದ ಇದೇ ಕಥೆಯಾಗಿದೆ. ವೀಠಲಾಪುರ, ಅಂತಾಪುರ, ಡಿ.ಮಲ್ಲಾಪುರ, ಚೋರುನೂರು ಹೋಬಳಿಯ ಅನೇಕ ಹಳ್ಳಿಗಳಿಗೆ ಈಗಲೂ ಬಸ್‌ ವ್ಯವಸ್ಥೆ ಇಲ್ಲ. ಇನ್ನೂ ಸಂಡೂರು ಹೊಸಪೇಟೆಯಡೆಗೆ ಹೋಗುವವರಿಗೂ ಬಸ್ ಗಳ ಸಮಸ್ಯೆ ಇದೆ. ಸುಶೀಲಾನಗರದಿಂದ 150-200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಬರುತ್ತಾರೆ, ಅದೇರೀತಿ ಸಿದ್ದಾಪುರ, ಜಯಸಿಂಗಪುರ, ವೆಂಕಟಗಿರಿ, ರಾಮಘಡದಿಂದಲೂ ಬಂದು ಹೋಗುತ್ತಾರೆ, ಆದರೆ ಸಂಜೆ ಆಯಿತೆಂದರೆ, ಬಸ್‌ ಗಳೇ ಇರುವುದಿಲ್ಲ. ಬೇರೆ ಸಂದರ್ಭದಲ್ಲಿ 5-6 ಬಸ್ ಗಳಿರುತ್ತವೆ ಎಂದು ದೂರಿದರು.

ಡಿಪೋ ಮ್ಯಾನೇಜರ್ ಕೆಡಿಪಿ, ಸಾಮಾನ್ಯ ಸಭೆಗಳಿಗೆ ಬರುವುದಿಲ್ಲ. ಬಂದರೂ ಏನಾದರೊಂದು ನೆಪಹೇಳಿ ಹೊರಟು ಹೋಗುತ್ತಾರೆ; 7,800 ಕೋಟಿ ರೂ.ವಾರ್ಷಿಕ ಆದಾಯ ನೀಡುವ ತಾಲೂಕಿನ ಡಿಪೋದಲ್ಲಿ 65 ಬಸ್‌ಗಳಿವೆ: 186 ಸೆಕ್ಷನ್ ಗಳಲ್ಲಿ 164 ಜನ ಸಿಬ್ಬಂದಿ ಇದ್ದಾರೆ. 65 ಬಸ್ ಆಪರೇಟ್ ಮಾಡಲು 130 ಜನ ಬೇಕಾಗುತ್ತಾರೆ. ಆದರೆ, ಈ ವ್ಯವಸ್ಥಾಪಕ, ಅತಿ ಹೆಚ್ಚು ಆದಾಯ ನೀಡುವ ದೇವಗಿರಿಗೆ ಎಂತಹ ಬಸ್ ಬಿಟ್ಟಿದ್ದಾರೆ ನೀವೇ ನೋಡಿ ಎಂದು ಶಾಸಕರು ತರಾಟೆಗೆ ತೆಗೆದುಕೊಂಡ ಶಾಸಕರು 9 ಬಸ್‌ ಗಳಿಗಾಗಿ ಡಿಎಂಎಫ್‌ನಡಿ 3 ಕೋಟಿ ರೂ ಒಡಗಿಸುವುದಾಗಿ ತಿಳಿಸಿದರು.

ಇಸಿಒ ಬಸವರಾಜರನ್ನು ಕರೆಸಿ ಲಾಗ್‌ಬುಕ್ ಸೇರಿದಂತೆ ಪ್ರತಿಯೊಂದು ಕಡತಗಳನ್ನು ಪರಿಶೀಲಿಸಿದರು. ಇಂದು 3 ಶೆಡ್ಯೂಲ್‌ಗಳ ಬಸ್‌ ಬಿಟ್ಟಿಲ್ಲ, ಶೆಡ್ಯೂಲ್ ನಂ.59ರ ಬಸ್ 5,30ಕ್ಕೆ ಸಂಡೂರು-ಹೊಸಪೇಟೆಗೆ ಹೋಗಿಲ್ಲ. ಮೊದಲು ಆತನ ವಿರುದ್ಧ ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದ ಶಾಸಕ ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುವುದಾಗಿ ಹೇಳಿದರು.

ಕಂಟ್ರೋಲ್ ಚಾಟ್‌ನಲ್ಲಿ ಡಿ.1 ರಿಂದ 5ನೇ ತಾರೀಖಿನವರೆಗೆ ಎಂಟ್ರಿಯಾಗಿಲ್ಲ. ಕಾಟಾಚಾರಕ್ಕೆ 3-4 ಕಡೆ ಆಗಿದೆ. 9ನೇ ತಾರೀಕು ಖಾಲಿ ಬಿಡಲಾಗಿದೆ ಎಂದು ಡಿಸಿ ಎದುರೇ ಖಚಿತಪಡಿಸಿದರು. ಬಳಿಕ ತಾಪಂ ಷಡಕ್ಷರಯ್ಯ, ಬಿಇಒ ಮೈಲೇಶ್‌ ಬೇವೂರು,
ಇಸಿಒ ಬಸವರಾಜರನ್ನು ಕರೆಸಿ ಲಾಗ್‌ಬುಕ್ ಸೇರಿದಂತೆ ಪ್ರತಿಯೊಂದು ಕಡತಗಳನ್ನು ಪರಿಶೀಲಿಸಿದರು. ಇಂದು 3 ಶೆಡ್ಯೂಲ್‌ಗಳ ಬಸ್‌ ಬಿಟ್ಟಿಲ್ಲ, ಶೆಡ್ಯೂಲ್ ನಂ.59ರ ಬಸ್ 5,30ಕ್ಕೆ ಸಂಡೂರು-ಹೊಸಪೇಟೆಗೆ ಹೋಗಿಲ್ಲ. ಮೊದಲು ಆತನ ವಿರುದ್ಧ ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದ ಶಾಸಕ ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುವುದಾಗಿ ಹೇಳಿದರು.

ಈ ಸಂಧರ್ಭದಲ್ಲಿ ಪುರಸಭೆ ಉಪಾಧ್ಯಕ್ಷ, ಈರೇಶ ಹಿಂದೆ, ಸದಸ್ಯರಾದ ಎಲ್.ಎಚ್‌.ಶಿವಕುಮಾರ್, ಮುಖಂಡರಾದ ಮಲ್ಲಿಕಾರ್ಜುನ,ಸಿ. ಅಶೋಕ್, ಜಯರಾಮ್, ಜೆಬಿಟಿ ಬಸವರಾಜ, ಎಂ.ಶಿವಲಿಂಗಪ್ಪ ಇತರರಿದ್ದರು.

LEAVE A REPLY

Please enter your comment!
Please enter your name here