ವಿದ್ಯುತ್ ದರ ಪರಿಷ್ಕರಣೆಗಾಗಿ ಜರುಗಿದ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆ

0
87

ಧಾರವಾಡ.ಫೆ. 22: ಕರ್ನಾಟಕ ವಿದ್ಯುತ್‍ಚ್ಛಕ್ತಿ ನಿಯಂತ್ರಣ ಆಯೋಗದಿಂದ ವಿದ್ಯುಚ್ಛಕ್ತಿ ದರ ಪಟ್ಟಿ ನಿಗದಿ ಕುರಿತು ಸಾರ್ವಜನಿಕ ಆಕ್ಷೇಪಣಾ ಅರ್ಜಿಗಳ ಸಲ್ಲಿಕೆ ಮತ್ತು ವಿಚಾರಣಾ ಸಭೆಯು ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್ ಹಾಲ್‍ನಲ್ಲಿ ಇಂದು ಬೆಳಿಗ್ಗೆ ಜರುಗಿತು.

ಕರ್ನಾಟಕ ವಿದ್ಯುತ್‍ಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭು ದಯಾಳ ಮೀನಾ, ಸದಸ್ಯರಾದ ಎಮ್.ಡಿ. ರವಿ ಮತ್ತು ಎಚ್.ಎಮ್. ಮಂಜುನಾಥ ಅವರು ವಿದ್ಯುತ್ ದರ ಏರಿಕೆ ಕುರಿತು ನಾಗರಿಕರ ಅಹವಾಲುಗಳನ್ನು ಆಲಿಸಿದರು.

ವಿವಿಧ ವಿದ್ಯುತ್ ಬಳಕೆದಾರ ಸಂಘಗಳ ಸದಸ್ಯರು ಮತ್ತು ವಿದ್ಯುತ್ ಬಳಕೆ ಗ್ರಾಹಕರಾದ ಎ.ಎಸ್. ಕುಲಕರ್ಣಿ, ಬಿ.ಜಿ. ಹೆಗಡೆ, ಸಂದೀಪ, ಉದಯಕುಮಾರ, ಅರವಿಂದ ಪೈ. ವಿವೇಕ ಮೋರೆ ಮತ್ತಿತರರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಿದರು. ವಿದ್ಯುತ್ ದರ ಪರಿಷ್ಕರಣೆಗೆ ಒಟ್ಟು 26 ಅಹವಾಲುಗಳು ಸಲ್ಲಿಕೆಯಾಗಿವೆ.

ಸಭೆಯಲ್ಲಿ ಹೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಎಮ್. ಮುನಿರಾಜು, ತಾಂತ್ರಿಕ ನಿರ್ದೇಶಕ ಎ.ಎಚ್. ಕಾಂಬ್ಳೆ, ಹಣಕಾಸು ನಿರ್ದೇಶಕ ಸುರೇಶ್.ಆರ್. ತೇರದಾಳ ಸೇರಿದಂತೆ ಹೆಸ್ಕಾಂದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here