ಕುರೆಕುಪ್ಪ ವ್ಯಾಪ್ತಿಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನ

0
109

ಬಳ್ಳಾರಿ,ಫೆ.23 : ಕುರೆಕುಪ್ಪ ಪುರಸಭೆ ಜಿಲ್ಲಾಧಿಕಾರಿಗಳಿಂದ 2018-19, 2019-20 ಹಾಗೂ 2020-21ನೇ ಸಾಲಿನ ಎಸ್.ಎಫ್.ಸಿ ಶೇ.24.10, ಶೇ.7.25 ಹಾಗೂ ಶೇ.5 ರ ಅನುಮೋದನೆಗೊಂಡ ಕಾರ್ಯಕ್ರಮಗಳನ್ನು ಸರ್ಕಾರದ ಮಾರ್ಗಸೂಚಿಗಳನ್ವಯ ಅನುಷ್ಠಾನಗೊಳಿಸುವುದಕ್ಕಾಗಿ ಅರ್ಹ ಪ.ಜಾತಿ/ಪ.ಪಂಗಡ, ಇತರೆ ಹಿಂದುಳಿದ ವರ್ಗ ಹಾಗೂ ವಿಕಲಚೇತನ ಆಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ.ಜಾತಿ/ಪ.ಪಂಗಡ ಜನಾಂಗದವರ ಶ್ರೇಯೋಭಿವೃದ್ಧಿಗಾಗಿ ಶೇ.24.10ರ ಯೋಜನೆಯಡಿ ನಿವೇಶನ ಹೊಂದಿದಂತಹ ಪ.ಜಾತಿ/ಪ.ಪಂಗಡ ಜನಾಂಗದವರಿಗೆ ಪಕ್ಕಾ ಮನೆ ನಿರ್ಮಾಣ ಮಾಡಿಕೊಳ್ಳಲು ಸಹಾಯಧನÀ ಬಿಡುಗಡೆ ಮಾಡುವುದು ಮತ್ತು ಕುರೇಕುಪ್ಪ ಪುರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವಂತಹ ಪೌರಕಾರ್ಮಿಕರಿಗೆ ನಿವೇಶನ ಖರೀದಿಗಾಗಿ ಧನ ಸಹಾಯ ಬಿಡುಗಡೆ ಮಾಡುವುದಾಗಿದೆ. ಇತರೆ ಹಿಂದುಳಿದ ಜನಾಂಗದವರ ಶ್ರೇಯೋಭಿವೃದ್ಧಿಗಾಗಿ ಶೇ.7.25 ರ ಯೋಜನೆಯಡಿ ಇತರೆ ಹಿಂದುಳಿದ ವರ್ಗದ ಜನಾಂಗದವರ ಸಣ್ಣುದ್ದಿಮೆದಾರರಿಗೆ ಸಹಾಯಧನ ನೀಡುವುದು. ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಶೇ.5.0 ರ ಯೋಜನೆಯಡಿ ವಿಕಲ ಚೇತನರಿಗೆ ಕೃತಕ ಅಂಗಜೋಡಣೆಗಾಗಿ ಸಹಾಯಧನ ನೀಡುವುದು ಹಾಗೂ ವಿಕಲ ಚೇತನರ ಸಣ್ಣ ಉದ್ದಿಮೆದಾರರಿಗೆ ಸಹಾಯಧನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಮನೆ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಮಹಿಳೆಯರಾರಬೇಕು. (ವಿಧುರ/ವಿಕಲಚೇತನರನ್ನು ಹೊರತುಪಡಿಸಿ) ಹಾಗೂ ನಿವೇಶನವು ಈ ನಗರ ಸ್ಥಳೀಯ ಸಂಸ್ಥೆಯ ಆಸ್ತಿ ತೆರಿಗೆ ವಹಿಯಲ್ಲಿ ದಾಖಲಾಗಿರಬೇಕು. ಅವಶ್ಯಕತೆ ದಾಖಲಾತಿಗಳು ಬೇಕಾದಲ್ಲಿ ಮೌಖಿಕ/ಲಿಖಿತ ರೂಪದಲ್ಲಿ ತಿಳಿಸುವಂತೆ ದಾಖಲಾತಿಗಳು ಮತ್ತು ನಿಯಮಗಳನ್ನು ಪಾಲಿಸಬೇಕು.
ಮಾ.25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ನಿಗದಿತ ಅವಧಿಯೊಳಗೆ ಬಂದಂತಹ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು ಹಾಗೂ ಅಪೂರ್ಣ ದಾಖಲಾತಿಹೊಂದಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಭರ್ತಿ ಮಾಡಿದ ಅರ್ಜಿಗಳನ್ನು ಪುರಸಭೆಯ ಕಛೇರಿಯಲ್ಲಿ ಸಲ್ಲಿಸಬೇಕು.
ಸಲ್ಲಿಸಬೇಕಾದ ದಾಖಲೆಗಳು : ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡ್,ಗುರುತಿನ ಚೀಟಿ,ಆಧಾರ್ ಕಾರ್ಡ್, ವಾಸಸ್ಥಳ ಪ್ರಮಾಣ ಪತ್ರ, ಇತ್ತೀಚಿನ ಮೂರು ಭಾವಚಿತ್ರಗಳನ್ನು ಸಲ್ಲಿಸಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ ಪುರಸಭೆ ಕಚೇರಿಗೆ ಭೇಟಿ ನೀಡಲು ಸೂಚಿಸಿದೆ.

LEAVE A REPLY

Please enter your comment!
Please enter your name here