ಸಾಮಾಜಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳನ್ನು ಬೆಸೆಯುತ್ತಿರುವುದು ಸ್ವಾಗತಾರ್ಹ

0
96

ದಾವಣಗೆರೆ.ಮಾ.09.ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ತನ್ನದೇ ಆದ ಪ್ರತ್ಯೇಕ ಇತಿಹಾಸವಿದೆ. ಕೇವಲ ಅಂಕಪಟ್ಟಿಯ ಪದವಿ ನೀಡದೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ವಿಶ್ವವಿದ್ಯಾನಿಲಯವನ್ನು ಜೋಡಿಸಿಕೊಳ್ಳುತ್ತಿರುವುದು, ವಿದ್ಯಾರ್ಥಿಗಳನ್ನು ಬೆಸೆಯುತ್ತಿರುವುದು ಸ್ವಾಗತಾರ್ಹ ಸಂಗತಿ ಎಂದು ಮಹಾನಗರಪಾಲಿಕೆ ಮಹಾಪೌರರಾದ ಎಸ್.ಟಿ.ವೀರೇಶ್ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ದಾವಣಗೆರೆ ಪ್ರಾದೇಶಿಕ ಕೇಂದ್ರ ತನ್ನ ವ್ಯಾಪ್ತಿಯ ಎಂಬಿಎ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಶುಭಹಾರೈಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಗತ್ತಿನ ಬೇರೆ ಯಾವುದೇ ದೇಶದ ವಿದ್ಯಾರ್ಥಿಗಳಿಗೆ ಇಲ್ಲದ ಜವಾಬ್ದಾರಿ ಭಾರತೀಯ ವಿದ್ಯಾರ್ಥಿಗಳಿಗೆ ಇದೆ. ಕಾರಣ, ಭಾರತ ತನ್ನ ನಾಗರೀಕತೆ ಮತ್ತು ಸಂಸ್ಕøತಿಯ ಪ್ರಸರಣಕ್ಕಾಗಿ ವಿಶ್ವದಲ್ಲಿ ಪ್ರಸಿದ್ಧಿ ಹೊಂದಿದೆ. ನಿರ್ವಹಣಾಶಾಸ್ತ್ರದ ವಿದ್ಯಾರ್ಥಿಗಳಾದ ನೀವು, ಸಮಾಜದ ಜೊತೆಯಲ್ಲಿ ಹೇಗೆ ಬೆರೆÉಯಬೇಕೆಂಬ ಸೂಕ್ಷ್ಮ ಅವಲೋಕನ ಮಾಡುವ ಮೂಲಕ, ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಸಹಕಾರಿ ಆಗಬೇಕೆಂದು ಸಲಹೆ ನೀಡಿ, ದಾವಣಗೆರೆ ಮಹಾನಗರ ಪಾಲಿಕೆಯ ಯಾವುದೇ ಯೋಜನೆಗಳಿಗೆ ತಮ್ಮ ಸಲಹೆ ಸೂಚನೆ ನೀಡಬೇಕೆಂದು ಕೋರಿದರು.
ಮಾರ್ಗದರ್ಶಕರಾದ ದಾವಣಗೆರೆ ವಿಶ್ವವಿದ್ಯಾನಿಲಯ ಪ್ರಾಧ್ಯಾಪಕ ಡಾ.ಶಶಿಧರ್ ಮಾತನಾಡಿ, ಕರ್ನಾಟಕದ ಯಾವುದೇ ದೂರ ಶಿಕ್ಷಣ ಸಂಸ್ಥೆಯು ಕೆಎಸ್‍ಒಯು ರೀತಿಯ ಸೌಲತ್ತುಗಳನ್ನು ನೀಡಿಲ್ಲ. ಅದೇ ರೀತಿ ಇಂತಹ ಗುಣಮಟ್ಟದ ಸೌಕರ್ಯಗಳನ್ನು ಬೇರೆ ವಿವಿಗಳಿಗೆ ನಿರೀಕ್ಷೆ ಮಾಡುವುದು ಕಷ್ಟ ಸಾಧ್ಯ ಹಾಗಾಗಿ ಇಲ್ಲಿನ ಸವಲತ್ತುಗಳನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾದೇಶಿಕರಾದ ನಿರ್ದೇಶಕ ಡಾ.ಸುಧಾಕರ ಹೊಸಳ್ಳಿ ಕೆಎಸ್‍ಒಯುಗೆ, ಪ್ರೈಮರಿ ಶಾಲೆಯ ಶಿಕ್ಷಕರಿಂದ ಹಿಡಿದು, ರಾಷ್ಟ್ರಪತಿ ಭವನದವರೆಗೆ ವಿದ್ಯಾರ್ಥಿಗಳಿದ್ದಾರೆ. ಇದು ನಮ್ಮ ವಿವಿಯ ಹೆಮ್ಮೆ ಎಂದರು.
ಪ್ರಸ್ತುತ ಕುಲಪತಿಗಳಾದ ಪ್ರೊ. ವಿದ್ಯಾಶಂಕರ್ ಅವರು, ವಿವಿಯನ್ನು ಸಾಂಪ್ರದಾಯಿಕತೆಯ ಜೊತೆಗೆ ತಾಂತ್ರಿಕವಾಗಿ ಸದೃಢ ಮಾಡಲು ಪಣತೊಟ್ಟಿದ್ದಾರೆ. ವಿದ್ಯಾರ್ಥಿಗಳು ಹೊಸ ಶಿಕ್ಷಣ ನೀತಿಯ ಅನುಷ್ಠಾನದ ಸಂದರ್ಭದಲ್ಲಿ ವಿವಿಯ ಜೊತೆ ಕೈಜೋಡಿಸಬೇಕೆಂದು ಕೋರಿದರು.
ಕಾರ್ಯಕ್ರಮದಲ್ಲಿ ಕೆಎಸ್‍ಒಯು ಪ್ರಾಧ್ಯಾಪಕ ಡಾ.ಚಿನ್ನಯ, ಆರ್‍ಎಲ್ ಲಾ ಕಾಲೇಜಿನ ದೈಹಿಕ ಶಿಕ್ಷಣದ ನಿರ್ದೇಶಕ ಪವನ್ ಮತ್ತು ದಾವಣಗೆರೆ ವಿವಿಯ ಪ್ರಾಧ್ಯಾಪಕ ರಮೇಶ್ ಚಂದ್ರಹಾಸ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು ಹಾಗೂ ರವಿ, ಮಂಜುನಾಥ್ ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here