ಕೆನರಾ ಬ್ಯಾಂಕ್‍ನಿಂದ ಜಿಲ್ಲಾ ಆಸ್ಪತ್ರೆಗೆ ಕೊಡುಗೆ

0
94

ದಾವಣಗೆರೆ :ಕೆನರಾ ಬ್ಯಾಂಕ್ ವತಿಯಿಂದ ಜಿಲ್ಲಾ ಆಸ್ಪತ್ರೆಗೆ ಹಿರಿಯ ನಾಗರಿಕರ ಮತ್ತು ವಿಶೇಷ ಚೇತನ ರೋಗಿಗಳ ಅನುಕೂಲಕ್ಕಾಗಿ 10 ಗಾಲಿ ಕುರ್ಚಿ ಹಾಗೂ 10 ಆಕ್ಸಿಮೀಟರ್‍ಗಳನ್ನು ಕೊಡುಗೆಯಾಗಿ ನೀಡಲಾಗಿದೆ.
ಕೆನರಾ ಬ್ಯಾಂಕಿನ ದಾವಣಗೆರೆಯ ಕ್ಷೇತ್ರೀಯ ಕಾರ್ಯಾಲಯಾದ ಸಹಾಯಕ ಮಹಾ ಪ್ರಬಂಧಕ ಹೆಚ್.ರಘುರಾಜ ಅವರು ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ್ ಅವರಿಗೆ ಕೊಡುಗೆ ಸಾಮಗ್ರಿಗಳನ್ನು ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹೆಚ್.ರಘುರಾಜ ಅವರು ಕೆನರಾ ಬ್ಯಾಂಕ್ ಯಾವಾಗಲೂ ಸಾಮಾಜಿಕ ಕಳಕಳಿಯ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಸದ್ಯ ಜಾಗತಿಕವಾಗಿ ಬಂದೆರಗಿರುವ ಕರೋನಾ ವೈರಸ್ ಅನ್ನು ನಿರ್ಮೂಲನೆ ಮಾಡಲು ವೈದ್ಯಕೀಯ ಕ್ಷೇತ್ರದಿಂದ ಮಾತ್ರ ಸಾಧ್ಯ. ಆದ್ದರಿಂದ ವೈದ್ಯಕೀಯ ಕ್ಷೇತ್ರವನ್ನು ಉನ್ನತೀಕರಿಸುವುದು ಪ್ರಸ್ತುತ ಸನ್ನೀವೇಶದಲ್ಲಿ ಅಗತ್ಯವಾಗಿದೆ. ಕೆನರಾ ಬ್ಯಾಂಕ್ ದೇಶಾದ್ಯಂತ ಈ ರೀತಿಯ ಕೊಡುಗೆಗಳನ್ನು ನೀಡುತ್ತಿದೆ. ಜೊತೆಗೆ ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆ ಘಟಕ ನಿರ್ಮಾಣಕ್ಕಾಗಿ ‘ಕೆನರಾ ಜೀವನ್‍ರೇಖಾ’ ಎನ್ನುವ ಯೋಜನೆಯಲ್ಲಿ 2 ಕೋಟಿಯ ವರೆಗೆ ಸಾಲ ಸೌಲಭ್ಯವಿದೆ.
ಕರೋನಾ ಸಂತ್ರಸ್ತರಿಗೆ ಚಿಕಿತ್ಸಾ ವೆಚ್ಚವನ್ನು ಭರಿಸಲು ರೂ. 25 ಸಾವಿರ ದಿಂದ ರೂ.5 ಲಕ್ಷದ ವರೆಗೆ ‘ಕೆನರಾ ಸುರಕ್ಷಾ’ ಸಾಲ ಯೋಜನೆ, ಹಾಗೆಯೇ ಆಸ್ಪತ್ರೆಗಳ ಗುಣಮಟ್ಟವನ್ನು ಹಾಗೂ ಸೌಲಭ್ಯಗಳನ್ನು ಹೆಚ್ಚಿಸಲು ಆಸ್ಪತ್ರೆಗಳಿಗೆ ವಿಶೇಷ ಸಾಲ ಸೌಲಭ್ಯ ‘ ಕೆನರಾ ಚಿಕಿತ್ಸಾ’ ಯೋಜನೆ ಜಾರಿಗೆ ಬಂದಿದೆ. ಇದರಲ್ಲಿ ರೂ.50 ಕೋಟಿಯ ತನಕ ಸಾಲವನ್ನು ಪಡೆಯಬಹುದು. ಆಸ್ಪತ್ರೆಗಳನ್ನು ಕಟ್ಟಿಸಲು, ಬೆಡ್ ಸಾಮಥ್ರ್ಯ ಹೆಚ್ಚಿಸಲು, ಆಮ್ಲಜನಕ ಉತ್ಪಾದನಾ ಘಟಕಗಳನ್ನು ನಿರ್ಮಿಸಲು, ವೆಂಟಿಲೇಟರ್ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲು ಹಾಗೂ ಇನ್ನಿತರ ವೈದೈಕೀಯ ಸೌಲಭ್ಯಗಳಿಗಾಗಿ ಇದನ್ನು ವಿನಿಯೋಗಿಸಬಹುದು.
ಖಾಸಗಿ ಆಸ್ಪತ್ರೆಗಳು ಈ ಸೌಲಭ್ಯಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ಅತ್ಯುತ್ಕøಷ್ಟ ವೈದ್ಯಕೀಯ ಸೇವೆಯನ್ನು ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ್ ಮಾತನಾಡಿ ಕೆನರಾ ಬ್ಯಾಂಕ್ ದೇಶದ ಅಗ್ರಗಣ್ಯ ಬ್ಯಾಂಕುಗಳಲ್ಲೊಂದಾಗಿದೆ. ಗ್ರಾಹಕರ ಸೇವೆಯಲ್ಲಿಯೂ ಮುಂದಿದೆ. ಹಾಗೆಯೇ ಸಾಮಾಜಿಕ ಕಳಕಳಿಯನ್ನೂ ಹೊಂದಿದೆ ಎಂದು ಶ್ಲಾಘಿಸಿದರು.
ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕರಾದ ಸುಶೃತ ಡಿ. ಶಾಸ್ತ್ರಿ , ಜಿಲ್ಲಾಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ಡಾ. ಮಂಜುನಾಥ ಪಾಟೀಲ್, ಕೆನರಾ ಬ್ಯಾಂಕ್ ವಿಭಾಗೀಯ ಪ್ರಬಂಧಕ ಜಿ.ಆರ್.ನಾಗರತ್ನ , ಕೆ. ರಾಘವೇಂದ್ರ ನಾಯರಿ, ಜಿಲ್ಲಾಸ್ಪತ್ರೆಯ ವಿನಯ್ ಕುಮಾರ್, ಸುಭಾಷ್, ಶಿವಣ್ಣ, ಆಶಾ ಕಾಂಬ್ಳೆ, ಕೆನರಾ ಬ್ಯಾಂಕ್ ಹಿರಿಯ ಅಧಿಕಾರಿಗಳಾದ ಆರ್ ಶ್ರೀನಿವಾಸ್, ಬಿ.ಎ. ಸುರೇಶ್, ರಾಮಕೃಷ್ಣ ನಾಯ್ಕ್, ಹಂಪಣ್ಣ, ಕೆ. ವಿಶ್ವನಾಥ ಬಿಲ್ಲವ, ಎಂ.ಎಂ. ಸಿದ್ದವೀರಯ್ಯ ಮತ್ತಿತ್ತರು ಹಾಜರಿದ್ದರು.

LEAVE A REPLY

Please enter your comment!
Please enter your name here