ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಅಹ್ವಾನ

0
183

ಬಳ್ಳಾರಿ,ಮಾ.10 ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೊಸಪೇಟೆ: ಹೊಸಪೇಟೆ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ 02 ಅಂಗನವಾಡಿ ಕಾರ್ಯಕರ್ತೆಯರು ಮತ್ತು 28 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ ಎಂದು ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಯಲಿಗಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೂಡ್ಲಿಗಿ: ಕೂಡ್ಲಿಗಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ 2020-21ನೇ ಸಾಲಿನಲ್ಲಿ ಖಾಲಿಯಿರುವ ಮಾಲೂರು (ಮಿನಿ)ಮತ್ತು ಬೆಳ್ಳಗಟ್ಟ ಅಂಗನವಾಡಿಯಲ್ಲಿ 02 ಅಂಗನವಾಡಿ ಕಾರ್ಯಕರ್ತೆಯರ ಹುದ್ದೆ ಮತ್ತು ಚಿರಿಬಿ.ಬಿ, ಸಿದ್ದಾಪುರ ಗೊಲ್ಲರಹಟ್ಟಿ, ಬಿ.ಟಿ.ಗುದ್ದಿ-ಬಿ, ಕುಲುಮೆಹಟ್ಟಿ, ಗೆದ್ದಲಗಟ್ಟ-ಬಿ, ಕೊಟೂರು-ಎ,(ವಾರ್ಡ್ ನಂ.03) ಕೊಟ್ಟೂರು-ಜೆ, (ವಾರ್ಡ್ ನಂ.03) ಕೂಡ್ಲಿಗಿ-ಬಿ(ವಾರ್ಡ್ ನಂ.04), ಹನುಮನಹಳ್ಳಿ, ತೂಲಹಳ್ಳಿ.ಸಿ ಗ್ರಾಮಗಳಲ್ಲಿ 10 ಅಂಗನವಾಡಿ ಸಹಾಯಕಿಯರ ಹುದ್ದೆಗಳು ಸೇರಿದಂತೆ ತಾಲುಕಿನ 12 ಹುದ್ದೆಗಳಿಗೆ ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ ಕೂಡ್ಲಿಗಿ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹರಪನಹಳ್ಳಿ: ಹರಪನಹಳ್ಳಿ ವ್ಯಾಪ್ತಿಯ ನಂದಲ ಕ್ಯಾಂಪ್(ಮಿನಿ), ಬಂಡ್ರಿ, ಮತ್ತಿಹಳ್ಳಿ-ಎ, ನಿಟ್ಟೂರು-ಎ ಅಂಗನವಾಡಿಯಲ್ಲಿ 04 ಅಂಗನವಾಡಿ ಕಾರ್ಯಕರ್ತೆಯರ ಹುದ್ದೆ ಸೇರಿದಂತೆ ಅರಸಿಕೆರೆ ತಿಮ್ಮಲಾಪುರ, ಹಲವಾಗಲು-ಇ, ಹಿಪ್ಪಿತೋಟ(ವಾರ್ಡ್ ನಂ.13), ಚಿಕ್ಕಬಳ್ಳಿ, ಹೊನ್ನೇನಹಳ್ಳಿ, ಡಗ್ಗಿಬಸಾಪುರ, ಟಿ.ತುಂಬಿಗೆರೆ, ಸಾಸ್ವಿಹಳ್ಳಿ-ಎ, ಸಾಸ್ವಿಹಳ್ಳಿ-ಬಿ, ಸಾಸ್ವಿಹಳ್ಳಿ-ಸಿ, ಗೋವೇರಹಳ್ಳಿ-ಬಿ, ಯಲ್ಲಾಪುರ ಸೇರಿದಂತೆ 12 ಸಹಾಯಕಿಯರ ಹುದ್ದೆಗಳು ಒಳಗೊಂಡಂತೆ ಒಟ್ಟು 16 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಹರಪನಹಳ್ಳಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಅರ್ಜಿಗಳನ್ನು ಮಾ.06 ರಿಂದ ಏ.05 ರೊಳಗೆ ಸಲ್ಲಿಸಬೇಕು. ಅರ್ಜಿಗಳನ್ನು ಆನ್‍ಲೈನ್ ಲಿಂಕ್ www.anganwadirecruit.kar.nic.in ನಲ್ಲಿ ಮಾತ್ರ ಸಲ್ಲಿಸಬಹುದಾಗಿದೆ. ಲಕೋಟೆಯ ಮೂಲಕ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಹೊಸಪೇಟೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ 08394-228084, ಕೂಡ್ಲಿಗಿ ಶಿಶು ಅಭಿವೃದ್ಧಿ ಯೋಜನಾ ಕಚೇರಿ 08394-220240, ಹರಪನಹಳ್ಳಿ ಶಿಶು ಅಭಿವೃದ್ಧಿ ಯೋಜನಾ ಕಚೇರಿ 08398-280251 ಗೆ ಸಂಪರ್ಕಿಸಲು ಕೋರಿದೆ.

LEAVE A REPLY

Please enter your comment!
Please enter your name here