ಧಾರವಾಡ ಜಿಲ್ಲಾ ಪೋಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

0
115

ಧಾರವಾಡ ಮಾ.12: ಪೆÇಲೀಸ್ ವೃತ್ತಿ ಜೀವನದಲ್ಲಿ ಶಾರೀರಿಕ ಮತ್ತು ಮಾನಸಿಕವಾಗಿ ಸದೃಢವಾಗಿರಲು ಕ್ರೀಡೆ ಅತ್ಯಗತ್ಯ ಎಂದು ಹುಬ್ಬಳ್ಳಿ-ಧಾರವಾಡ ಪೆÇಲೀಸ್ ಆಯುಕ್ತರಾದ ಲಾಬೂರಾಮ್ ಹೇಳಿದರು.

ಇಂದು ಬೆಳಿಗ್ಗೆ ಡಿ.ಎ.ಆರ್ ಕವಾಯತ ಮೈದಾನದಲ್ಲಿ ಜಿಲ್ಲಾ ಪೆÇಲೀಸ್ ವಾರ್ಷಿಕ ಕ್ರೀಡಾಕೂಟ-2020 ನ್ನು ಪಾರಿವಾಳ ಮತ್ತು ಬಲೂನುಗಳನ್ನು ಹಾರಿ ಬಿಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಪೆÇಲೀಸ್ ವೃತ್ತಿ ಜೀವನ ದಿನದ 24 ತಾಸು ಕರ್ತವ್ಯ ನಿರ್ವಹಿಸುವುದರಿಂದ ಸಾಕಷ್ಟು ಒತ್ತಡಗಳನ್ನು ನಾವು ಎದುರಿಸಬೇಕಾಗಿರುತ್ತದೆ. ಸಮಯ ಸಿಕ್ಕಾಗ ಒಂದು ಗಂಟೆ ಕ್ರೀಡೆಗಳನ್ನು ಆಡುವುದರಿಂದ ಮಾನಸಿಕ ಮತ್ತು ಶಾರೀರಿಕವಾಗಿ ಸದೃಢವಾಗಿರಲು ಸಹಾಯವಾಗುತ್ತದೆ. ಇದರಿಂದ ನಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಬಹುದು. ತಂಡದ ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಆಡುವುದರಿಂದ ಹೇಗೆ ಆ ತಂಡ ಗೆಲವು ಸಾಧಿಸಲು ಸಹಾಯವಾಗುತ್ತಯೋ ಅದೇ ರೀತಿ ಪೆÇಲೀಸ್ ಇಲಾಖೆಯ ಎಲ್ಲ ಅಧಿಕಾರಿಗಳು ಒಗ್ಗಟಿನಿಂದ ಕರ್ತವ್ಯ ನಿರ್ವಹಿಸುವುದರಿಂದ ಸಮರ್ಥವಾಗಿ ಕರ್ತವ್ಯವನ್ನು ನಿರ್ವಹಿಸಬಹುದು ಎಂದು ಅವರು ಹೇಳಿದರು.

ಜಿಲ್ಲಾ ಪೆÇಲೀಸ್ ಅಧೀಕ್ಷರಾದ ಪಿ.ಕೃಷ್ಣಕಾಂತ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಎನ್.ಎ.ಮುತ್ತಣ್ಣ ಪೆÇಲೀಸ್ ಸ್ಮಾರಕ ಶಾಲೆ ಮಕ್ಕಳು, ಪೆÇಲೀಸ್ ಅಧಿಕಾರಿಗಳು, ನಿವೃತ್ತ ಪೆÇಲೀಸ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಕ್ರೀಡಾ ಜ್ಯೋತಿಯನ್ನು ಡಿ.ಎ.ಆರ್.ಪೆÇಲೀಸ್ ಪೇದೆ ಮಹಮ್ಮದ ಮುಸ್ತಾನ ಅತಿಥಿಗಳಿಗೆ ನೀಡಿದರು. ಡಿ.ಎ.ಆರ್.ಆರ್.ಪಿ.ಐ ಜಿ.ಸಿ ಡೂಗನವರ ಪ್ರತಿಜ್ಞಾ ವಿಧಿ ಬೋಧಿಸಿದರು. ಡಿ.ಎಸ್.ಪಿ.ವಿಜಯ ಬಿರಾದಾರ ವಂದನಾರ್ಪಣೆ ಮಾಡಿದರು. ಎನ್.ಎ.ಮುತ್ತಣ್ಣ ಸ್ಮಾರಕ ಶಾಲೆ ಪ್ರಾಚಾರ್ಯ ವೈ.ಪಿ.ಕಲ್ಲನಗೌಡರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here