ತೋಕೇನಹಳ್ಳಿ ತಾಂಡದಲ್ಲಿ ನೀರಿಗಾಗಿ ಆಹಾಕಾರ, ಜನರ ಸಮಸ್ಯೆ ಆಲಿಸದ ಅಧಿಕಾರಿಗಳು

0
245

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಬೊಮ್ಮಘಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತೋಕೇನಹಳ್ಳಿ ತಾಂಡದಲ್ಲಿ, ಗ್ರಾಮಸ್ಥರು ನೀರಿಗಾಗಿ ನಿತ್ಯ ಪರದಾಡುವಂತಾಗಿದೆ ಹಲವು ತಿಂಗಳುಗಳಿಂದ ಅಭಾವ ಇದ್ದು.ಸಂಬಂದ ಪಟ್ಟ ಅಧಿಕಾರಿಗಳು ಜನ ಪ್ರತಿನಿಧಿಗಳು ಜನರ ಕಷ್ಟ ಆಲಿಸುತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಪ್ರಾರಂಭದಲ್ಲಿಯೇ ಪಿಡಿಓ ಗಮನಕ್ಕೆ ತರಲಾಗಿದೆ ಆದರೆ ಈವರೆಗೂ ಸ್ಥಳಕ್ಕಾಗಮಿಸಿಲ್ಲ,ತಾಲೂಕು ಪಂಚಾಯ್ತಿ ಅಧಿಕಾರಿಗಳಿಗೂ ತಿಳಿಸಿದೆಯಾದರೂ ಅವರೂ ಸ್ಪಂಧಿಸುತಿಲ್ಲ ಎಂದು ಗ್ರಾಮದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಡೀ ಗ್ರಾಮಕ್ಕೆ ಬೆರಳೆಣಿಕೆಯಷ್ಟು ನಲ್ಲಿಗಳಿದ್ದು ಸಾಕಷ್ಟು ನೀರು ಸರಬರಾಜಾಗುತಿಲ್ಲ, ನೀರಿಗಾಗಿ ಹಗಲು ರಾತ್ರಿ ಕಾಯಬೇಕಿದೆ ಪರಸ್ಪರ ಹೊಡೆದಾಡುವ ದುಸ್ಥಿತಿ ನಿರ್ಮಾಣವಾಗಿದೆ.ಅನಿವಾರ್ಯವಾಗಿ ಬಹು ದೂರದ ಪಂಪ್ ಸೆಟ್ ಗಳಿಗೆ ಹೋಗಿ ತರಬೇಕಾಗಿದೆ,ವಿಕಲ ಚೇತನರು ವಾಹನ ಇಲ್ಲದವರು,ಮಹಿಳೆಯರು,ವೃದ್ಧರು ನೀರಿಗಾಗಿ ನಿತ್ಯ ಹರಸಹಾಸ ಮಾಡುವಂತಾಗಿದೆ.

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ತೋಕೇನಹಳ್ಳಿ ಗ್ರಾಮದ ನೀರಿನ ಬವಣೆ ನೀಗಿಸುವಲ್ಲಿ ಶೀಘ್ರವೇ ಮುತುವರ್ಜಿ ವಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಈ ಮೂಲಕ ಅವರಲ್ಲಿ ಕೋರಿದ್ದಾರೆ

LEAVE A REPLY

Please enter your comment!
Please enter your name here