ನಿಮಗೆ ಬಿಟ್ಟದ್ದು

0
85

ಜೀವ ಉಸಿರಾಡಬೇಕೊ ಬದುಕಬೇಕೋ ನಿರ್ಧಾರ ನಿಮಗೆ ಬಿಟ್ಟದ್ದು
ಬದುಕು ನಡೆಯಬೇಕೋ ಅರಳಬೇಕೊ ನಿರ್ಧಾರ ನಿಮಗೆ ಬಿಟ್ಟದ್ದು

ಗುರಿ ಸೇರಲು ತೆವಳಬೇಕೊ ಹಾರಬೇಕೋ ನಿರ್ಧಾರ ನಿಮಗೆ ಬಿಟ್ಟದ್ದು
ಸಂಬಂಧಗಳಲ್ಲಿ ಜೀವಬೇಕೋ ನಿರ್ಜೀವ ಸಂಬಂದ ಬೇಕೋ ನಿರ್ಧಾರ ನಿಮಗೆ ಬಿಟ್ಟದ್ದು

ತಲೆಮಾರಿಗೆ ಅಂತರವೆನ್ನುವಿರೋ ವಿಚಾರ ವಿಭಿನ್ಯತೆ ಎನ್ನುವಿರೋ ನಿರ್ಧಾರ ನಿಮಗೆ ಬಿಟ್ಟದ್ದು
ಒಟ್ಟಿಗಿದ್ದು ದೂರ ಸರಿಯುವಿರೋ ದೂರವಿಲ್ಲದ ಸನಿಹವಿರುವಿರೋ ನಿರ್ಧಾರ ನಿಮಗೆ ಬಿಟ್ಟದ್ದು

ಭವಿಷ್ಯಕಾಗಿ ವರ್ತಮಾನ ವಿರೋಧಿಸುವಿರೋ ನೆಚ್ಚುವಿರೋ ನಿರ್ಧಾರ ನಿಮಗೆ ಬಿಟ್ಟದ್ದು
ಭೂತದ ಕನವರಿಕೆಯಲ್ಲಿ ಇಂದು ನಾಳೆಗಳ ಹಳಿಯುವಿರೋ ಬಿಡುವಿರೋ ನಿರ್ಧಾರ ನಿಮಗೆ ಬಿಟ್ಟದ್ದು

ಬೆಳಕಿಗಾಗಿ ಜ್ಯೋತಿಪ್ರಕಾಶ ನೆಚ್ಚುವಿರೋ ಸಿಡಿಲ ಹೊಳಪನೋ ನಿರ್ಧಾರ ನಿಮಗೆ ಬಿಟ್ಟದ್ದು
ನೆಮ್ಮದಿಗಾಗಿ ಅಂತರಂಗ ಆಶ್ರಯಿಸುವಿರೋ ಪರರ ಸಾಂತ್ವನವನ್ನೋ ನಿರ್ಧಾರ ನಿಮಗೆ ಬಿಟ್ಟದ್ದು

ಜ್ಯೋತಿ ಬಿ ದೇವಣಗಾವ.

LEAVE A REPLY

Please enter your comment!
Please enter your name here