ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದಲ್ಲಿ 71 ನೇ ವಿಶ್ವ ಆರೋಗ್ಯ ದಿನಾಚರಣೆಯ ಜಾಗೃತಿ ಜಾಥಕ್ಕೆ ಪುರಸಭೆ ಉಪಾಧ್ಯಕ್ಷರಾದ ಶೀಮತಿ ನಾಗವೇಣಿ ಚಾಲನೆ

0
138

ಕುರೇಕುಪ್ಪ ಪುರಸಭೆ ವ್ಯಾಪ್ತಿಯ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದಲ್ಲಿ 71 ನೇ ವಿಶ್ವ ಆರೋಗ್ಯ ದಿನಾಚರಣೆಯ ಜಾಗೃತಿ ಜಾಥಕ್ಕೆ ಪುರಸಭೆ ಉಪಾಧ್ಯಕ್ಷರಾದ ಶೀಮತಿ ನಾಗವೇಣಿ ಚಾಲನೆ ನೀಡಿ ಮಾತನಾಡುತ್ತಾ ನನಗೆ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತೋಷವಾಗುತ್ತಿದೆ 71 ವರ್ಷದಿಂದ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ, ಕಳೆದ ವರ್ಷದಿಂದ ಆರೋಗ್ಯದ ಬಗ್ಗೆ ಜನರಿಗೆ ತುಂಬಾ ಕಾಳಜಿ ಬಂದಿರುವುದು ಆರೋಗ್ಯಕರ ಬೆಳವಣಿಗೆ ಎಂದು ನುಡಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ಏಪ್ರಿಲ್ 7 ರಂದು ‘ವಿಶ್ವ ಆರೋಗ್ಯ ದಿನ’ವೆಂದು ಆಚರಿಸುತ್ತದೆ. ಸಾರ್ವಜನಿಕರಿಗೆ ಆರೋಗ್ಯ ಮತ್ತು ಹಲವಾರು ಕೆಡುಕುಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ. ನೈರ್ಮಲ್ಯ ಯುಕ್ತ ಸಮಾಜಕ್ಕೆ ಅಗತ್ಯವಾದ ಸ್ವಚ್ಛತಾ ಅಭ್ಯಾಸಗಳು ನೀರಿನ ಸಂರಕ್ಷಣೆ ಪರಿಸರ ಸ್ವಚ್ಛತೆ ಹಾಗೂ ಸೂಕ್ತ ಕಾಲಕ್ಕೆ ತೆಗೆದುಕೊಳ್ಳಬೇಕಾದ ಔಷಧಿಗಳು ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಒದಗಿಸುವ ಕಾರ್ಯವನ್ನು ಇಲಾಖೆ ಹಮ್ಮಿಕೊಳ್ಳಲಾಗುತ್ತದೆ ನಿಟ್ಟಿನಲ್ಲಿ ಈ ವರ್ಷದ ಘೋಷಣೆ: ‘ಎಲ್ಲರಿಗೂ ಉತ್ತಮವಾದ, ಆರೋಗ್ಯಕರವಾದ ಜಗತ್ತನ್ನು ನಿರ್ಮಾಣ ಮಾಡುವುದು ‘ ಈ ಘೋಷ ವಾಕ್ಯದಲ್ಲಿ ಇರುವಂತೆ ಜಗತ್ತಿನ ಎಲ್ಲಾ ದೇಶಗಳಲ್ಲಿ ಕೋರೋನಾ ಬಂದು ವಕ್ಕಿರಸಿ ತಲ್ಲಣ ಗೊಳಿಸಿದೆ ಹಲವಾರು ಜನರ ಬದುಕನ್ನು ಕಸಿದು ಕೊಂಡಿದೆ, ಇದಕ್ಕೆ ಶೆಡ್ಡು ಹೊಡಿಯಲು ನಮ್ಮ ದೇಶ ಎರಡು ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳನ್ನು ಪರಿಚಯಿಸಿದೆ ಈಗಾಗಲೇ ಕಾರ್ಯಕರ್ತೆರು ಹಾಗೂ ನಲವತ್ತೈದು ವರ್ಷಗಳ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ನೀಡುವ ಕಾರ್ಯದಲ್ಲಿ ನಮ್ಮ ದೇಶ ಮುಂಚೂಣಿಯಲ್ಲಿದೆ, ಇದರೊಂದಿಗೆ ಪರಿಸರ ನೈರ್ಮಲ್ಯ, ಶುದ್ಧ ವಾತಾವರಣ, ಪೌಷ್ಟಿಕಾಹಾರ ಒದಗಿಸುವ ಕಾರ್ಯವನ್ನು ಕೈಗೊಳ್ಳಬೇಕಿದೆ, ಕೋರೋನಾ ಲಸಿಕೆಯನ್ನು ಪಡೆದು ಎಲ್ಲರೂ ನಿರೋಧಕ ಶಕ್ತಿಯನ್ನು ಬೆಳಿಸಿಕೊಳ್ಳಿ ಎಂದು ಹೇಳಿದರು,

ಈ ಜಾಗೃತಿ ಜಾಥದಲ್ಲಿ ಶ್ರೀಮತಿ ನಾಗವೇಣಿ ಉಪಾಧ್ಯಕ್ಷರು,ಸದಸ್ಯರಾದ ಎನ್.ವಿ ಸುರೇಶ್, ಮುಖಂಡರಾದ ಆಂಜನೇಯ, ಓಬಳೇಶ್, ಶಿವಪ್ಪ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ಶಕಿಲ್ ಅಹಮದ್ ಹಿರಿಯ ಆರೋಗ್ಯ ಸಹಾಯಕರು,
ಸಾಗರ್ ಕುಮಾರ್ ಎಮ್.ಟಿ.ಎಸ್ , ಬಸವರಾಜ, ರಿಚರ್ಡ್, ಆಶಾ ಕಾರ್ಯಕರ್ತೆಯರಾದ ವಿಜಯಶಾಂತಿ, ವೆಂಕಟಲಕ್ಷ್ಮಿ, ಕಾವೇರಿ, ಎನ್ ಆಶಾದೇವಿ,ಶ್ರೀದೇವಿ,ಗೋವಿಂದಮ್ಮ,
ಪದ್ಮಾವತಿ, ರಾಜೇಶ್ವರಿ ಇತರರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here