ಸಂಡೂರಿನ ಶಂಕರ ಮಠದಲ್ಲಿ ಕಂಚಿ ಶ್ರೀಗಳ ಉಪನ್ಯಾಸ

0
175

◆ಸಂಡೂರಿನಲ್ಲಿ ಕಂಚಿ ಶ್ರೀಗಳ ವಿಜೃಂಭಣೆಯ ಮೆರವಣಿಗೆ

ಸಂಡೂರು:ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಂಚಿ ಶ್ರೀಗಳಾದ ಶಂಕರ ವಿಜಯೇಂದ್ರ ಸರಸ್ವತಿ ಮಾಹಾಸ್ವಾಮಿಗಳ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.

ಮಾಜಿ ಸಚಿವ ದಿ.ಎಂ.ವೈ.ಘೋರ್ಪಡೆಯವರ ಮೊಮ್ಮಗ ಹಾಗೂ ಸ್ಮಯೋರ್ ಸಂಸ್ಥೆಯ ಎಂಡಿ ಬಹಿರ್ಜಿ ಘೋರ್ಪಡೆ, ಏಕಾಂಬರ್ ಘೋರ್ಪಡೆಯವರು ಮೆರವಣಿಗೆಯ ಮುಂಚೂಣಿಯಲ್ಲಿದ್ದರು.

ಶಿವಪುರದ ಈಶ್ವರ ದೇಗುಲದಿಂದ ಸಂಜೆ ಪ್ರಾರಂಭವಾದ ಮೆರವಣಿಗೆ ಪಟ್ಟಣದ ವಿಜಯ ವೃತ್ತ, ವಾಲ್ಮೀಕಿ ವೃತ್ತ, ರಾಘವೇಂದ್ರ ಸ್ವಾಮಿಗಳ ಮಠ, ವಿಠ್ಠಲ ಮಂದಿರ, ಮರಾಠ ಸಮಾಜ, ಶಂಕರ ಮಠದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಕಂಚಿ ಕಂಚಿ ಶ್ರೀಗಳಾದ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿ ಮಾತನಾಡಿ, ಕಂಚಿ ಪೀಠದ ಈ ಹಿಂದಿನ ಚಂದ್ರಶೇಖರ ಸ್ವಾಮಿಗಳು 1978 ರಲ್ಲಿ ಸತತ ಒಂದು ತಿಂಗಳ ಕಾಲ ಸಂಡೂರಿನಲ್ಲಿ ವಾಸ್ತವ್ಯ ಹೂಡಿದ್ದರು. ಈ ಬಾಗದಲ್ಲಿ ಐತಿಹಾಸಿಕ ಕುಮಾರಸ್ವಾಮಿ,ಪಾರ್ವತಿ ದೇಗುಲ, ಹರಿಶಂಕರ ತೀರ್ಥಗಳಿಗೆ ಭೇಟಿ ನೀಡಿದ್ದು ಅತ್ಯಂತ ಸುಂದರವಾಗಿವೆ. ಆದಿ ಶಂಕರಾಚಾರ್ಯರು ದೇಶಾದ್ಯಂತ ಸಂಚರಿಸಿ ಅದ್ವೈತ ತತ್ವವನ್ನು ಉಪನ್ಯಾಸ ನೀಡಿದರು.ಆ ತತ್ವಕ್ಕೆ ಅನುಗುಣವಾಗಿ ಇಲ್ಲಿನ ಶಂಕರ ಮಠ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಮಾನವನಿಗೆ ಅತಿಯಾಸೆ, ನಿರಾಸೆ ಎರಡೂ ಬೇಡ ಇದ್ದಿದ್ದರಲ್ಲೇ ಸಂತೃಪ್ತ ಬಾವ ಹೊಂದಬೇಕು ಎಂದು ಶಂಕರಾಚಾರ್ಯರು ಪ್ರತಿಪಾದಿಸಿದರು.ಹಿಂದಿನ ಜನ್ಮ ಹಾಗೂ ಮುಂದಿನ ಜನ್ಮ ನಮಗಾರಿಗೂ ಗೊತ್ತಿಲ್ಲ, ಈಗಿರುವ ಜೀವನವನ್ನು ಚೆನ್ನಾಗಿ ಬದುಕಬೇಕು ಸಂಪತ್ತಿನ ಸಂಪಾದನೆಗಿಂತ ಪುಣ್ಯದ ಸಂಪಾದನೆ ಬಹುಮುಖ್ಯ ದೇವರ ಪೂಜೆಯ ಜತೆಗೆ ಅನ್ನಸಂತರ್ಪಣೆ ಮಾಡಬೇಕು. ನಮ್ಮ ಶಕ್ತಿಗನುಸಾರ ಅತಿಥಿ ಸತ್ಕಾರ ಮಾಡಬೇಕು. ದಾನದ ವಸ್ತುವಿನ ಪ್ರಮಾಣಕ್ಕಿಂತ ಶ್ರದ್ಧೆ, ಭಕ್ತಿ ದೊಡ್ಡದು ಎಂದರು.

ಇದೇ ಸಂಧರ್ಭದಲ್ಲಿ ಸ್ಮಯೋರ್ ಸಂಸ್ಥೆಯ ಎಂಡಿ ಬಹಿರ್ಜಿ ಘೋರ್ಪಡೆಯವರಿಗೆ ಕಂಚಿ ಪೀಠದಿಂದ ಪೇಟ ತೊಡಿಸಿ ಸನ್ಮಾನಿಸಿ, ಗೌರವಿಸಿಲಾಯಿತು.ಬ್ರಾಹ್ಮಣ ಸಮಾಜದ ಮುಖಂಡರು ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here