ಜೇನುಕೃಷಿಗೆ ಉತ್ತೇಜನ ಅಗತ್ಯ : ಅನಂತ ಹೆಗಡೆ ಆಶೀಸರ

0
88

ಶಿವಮೊಗ್ಗ, : ಜಿಲ್ಲೆಯಲ್ಲಿ ಜೇನುಕೃಷಿಗೆ ವಿಫುಲ ಅವಕಾಶಗಳಿದ್ದು, ಜೇನುಕೃಷಿಯನ್ನು ಉತ್ತೇಜಿಸುವ ಅಗತ್ಯವಿದೆ ಎಂದು ಕರ್ನಾಟಕ ಜೀವವೈವಿದ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರು ಹೇಳಿದರು.
ಅವರು ಇಂದು ಜಿಲ್ಲಾ ಪಂಚಾಯಿತಿಯಲ್ಲಿ ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಯ ಅಧಿಕಾರಿಗಳೊಂದಿಗೆ ಜೇನುಕೃಷಿ ಕುರಿತು ಸಮಾಲೋಚನೆ ನಡೆಸಿದ ಅವರು, ಥಾಯ್‍ಸಾಕ್‍ಬ್ರೂಡ್ ಎಂಬ ಸೋಂಕಿನಿಂದ ಜೇನುಕೃಷಿಯ ವಿಸ್ತರಣೆಯಲ್ಲಿ ಎದುರಾಗಿರುವ ಸಮಸ್ಯೆ ಸವಾಲುಗಳನ್ನು ನಿಯಂತ್ರಿಸಿ, ರಾಜ್ಯ ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜೇನುಕೃಷಿಯನ್ನು ಕೈಗೊಳ್ಳಲು ಉತ್ತೇಜಿಸಬಹುದಾದ ಕಾರ್ಯಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಸೋಂಕನ್ನು ನಿಯಂತ್ರಿಸಿ, ಜೇನುಕೃಷಿಯನ್ನು ವಿಸ್ತರಿಸುವ ಬಗ್ಗೆ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು ಮತ್ತು ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದವರು ನುಡಿದರು.
ವಿಶೇಷವಾಗಿ ಜಿಲ್ಲೆಯಲ್ಲಿ 1500ಕ್ಕೂ ಹೆಚ್ಚಿನ ಜನ ಜೇನುಕೃಷಿಕರು ತೊಡಗಿದ್ದಾರೆ. ಆದರೆ ನಿರೀಕ್ಷಿತ ಆದಾಯ ಕಾಣುವುದು ಸಾದ್ಯವಾಗುತ್ತಿಲ್ಲ. ಅದಕ್ಕೆ ಪ್ರಮುಖ ಕಾರಣವೆಂದರೆ ನೆರೆಯ ಕೇರಳ ರಾಜ್ಯದಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ರೋಗಗ್ರಸ್ಥ ಜೇನುಕುಟುಂಬಗಳಿಂದಾಗಿ ಜೇನುಸಂತತಿ ನಾಶಗೊಳ್ಳುತ್ತಿದೆ. ಮಾತ್ರವಲ್ಲ ಸ್ಥಳೀಯ ಜೇನು ಪ್ರಬೇಧಗಳು ಅಳಿವಿನಂಚಿನಲ್ಲಿವೆ. ಇದರೊಂದಿಗೆ ಕೀಟನಾಶಕಗಳ ಸಿಂಪರಣೆಯೂ ಜೇನುಸಂತತಿ ನಾಶಕ್ಕೆ ಕಾರಣವಾಗಿದೆ. ಅಲ್ಲದೇ ಅರಣ್ಯಗಳಲ್ಲಿ ಸಾಂಪ್ರದಾಯಿಕವಾಗಿದ್ದ ಜೇನುಗಳಿಗೆ ಈ ಸೋಂಕು ಹರಡಿರುವುದನ್ನು ಖಚಿತಪಡಿಸಿ, ಅದರ ನಿವಾರಣೆಗಾಗಿ ಕ್ರಮವಹಿಸಬೇಕಾದ ಅಗತ್ಯವಿದೆ. ಇವುಗಳ ನಿಯಂತ್ರಣಕ್ಕಾಗಿ ಸಂಶೋಧನಾ ಕಾರ್ಯಗಳನ್ನು ಕೈಗೊಳ್ಳುವ ತುರ್ತು ಅಗತ್ಯವಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಸರ್ಕಾರದ ಗಮನಸೆಳೆಯುವುದಾಗಿ ಅವರು ತಿಳಿಸಿದರು.
ಪ್ರತಿವರ್ಷ ಜೇನುಕೃಷಿ ಕ್ಷೇತ್ರ ವಿಸ್ತರಣೆ ಆಗುತ್ತಿದೆ. ರೈತರ ಉಪಕಸುಬಾಗಿರುವ ಜೇನುಕೃಷಿಯಿಂದ ರೈತರ ಆದಾಯ ಹೆಚ್ಚಳವಾಗಲಿದೆ ಅಲ್ಲದೆ ಶೇ.25ರಷ್ಟು ಕೃಷಿ ಉತ್ಪಾದನೆಗೂ ಸಹಾಯಕವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಜೇನುಕೃಷಿಕ ನಾಗೇಂದ್ರ ಸಾಗರ್ ಅವರು ಮಾತನಾಡಿ, ಜೇನುಕೃಷಿಗೆ ಸರ್ಕಾರವು ಉತ್ತೇಜನ ನೀಡಬೇಕಾದ ಅಗತ್ಯವಿದೆ. ಸೋಂಕಿನಿಂದಾಗಿ ಇಳುವಳಿ ಕಡಿಮೆಯಾಗಲಿದೆ. ಜೇನುಕೃಷಿಕರಲ್ಲಿ ಆಸಕ್ತಿಯೂ ಕಳೆದು ಹೋಗುತ್ತಿದೆ. ಈ ಸಂಬಂಧ ವಿವಿಗಳು ಮತ್ತು ಇಲಾಖೆಗಳು ಸಂಶೋಧನೆಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಪ್ರಗತಿಪರ ಜೇನುಕೃಷಿಕ ನಾಗೇಂದ್ರ ಸಾಗರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಲ್ವಿನ್ ಉಪಸ್ಥಿತರಿದ್ದರು.

ಸಭೆಗೂ ಮುನ್ನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ, ಜಂಟಿ ಕೃಷಿ ನಿರ್ದೇಶಕ ಡಾ||ಕಿರಣ್‍ಕುಮಾರ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಮಚಂದ್ರ, ಜೇನುಕೃಷಿಕ ನಾಗೇಂದ್ರ ಸಾಗರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಲ್ವಿನ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here