ಸಂಡೂರು ಪುರಸಭೆ ಅಧ್ಯಕ್ಷೆ ಅನಿತಾ ವಸಂತ್ ಕುಮಾರ್ ರಿಂದ ವಾರ್ಡುಗಳ ಭೇಟಿ, ಸಮಸ್ಯೆಗಳ ಪರಿಶೀಲನೆ.

0
133

ಸಂಡೂರು ಪಟ್ಟಣದಲ್ಲಿ ಇಂದು 5ಮತ್ತು 6 ಹಾಗೂ 7 ನೇ ವಾರ್ಡ್ ಗಳಿಗೆ ಪುರಸಭೆಯ ಅಧ್ಯಕ್ಷರಾದ ಶ್ರೀಮತಿ ಅನಿತಾ ವಸಂತ್ ಕುಮಾರ್ ಅವರುಗಳು ಭೇಟಿನೀಡಿ ಸ್ಥಳೀಯ ವಾರ್ಡಗಳ ಸಮಸ್ಯೆಗಳಾದ ಷೋಚಾಲಯ ಸಮಸ್ಯೆ ಮತ್ತು ಆಯಾ ವಾರ್ಡ್ಗಳಲ್ಲಿನ ಕಾಲುವೆಗಳಲ್ಲಿ ಕಸಕಡ್ಡಿಗಳು ತುಂಬಿ ದುರ್ನಾತ ಬಿರುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮನವಿಯನ್ನು ಸ್ವೀಕರಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಈ ವಾರ್ಡ ಗಳ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷರಾದ ಅನಿತಾ ವಸಂತ್ ಕುಮಾರ್, ಉಪಾಧ್ಯಕ್ಷರಾದ ವೀರೇಶ್, ಪುರಸಭೆಯ ಮುಖ್ಯಾಧಿಕಾರಿ ಇಮಾಮ್ ಹುಸೇನ್ ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here