ವಿದ್ಯಾರ್ಜನೆ ಯೊಂದಿಗೆ ಉತ್ತಮ ಹವ್ಯಾಸಗಳನ್ನು ರೂಡಿಸಿ ಕೊಳ್ಳಿ; ಮುಖ್ಯ ಶಿಕ್ಷಕಿ ಭಾಗ್ಯವತಿ,

0
212

ಸಂಡೂರು: ಸೆ: 16: ತಾಲೂಕಿನ ಜಿಂದಾಲ್ ಆದರ್ಶ ವಿದ್ಯಾಲಯ ಶಾಲೆಯಲ್ಲಿ ಪ್ರಾಂಶುಪಾಲ ಪ್ರಶಾಂತ್ ಮೂಲೆ ಅವರ ಮಕ್ಕಳ ಮೇಲಿನ ವಿಶೇಷ ಕಾಳಜಿಯೊಂದಿಗೆ ಹದಿಹರೆಯದವರ ಆರೋಗ್ಯ ಕಾರ್ಯಕ್ರಮದಡಿ “ಆರೋಗ್ಯ ಮತ್ತು ಶುಚಿತ್ವ” ಕುರಿತು ಅರಿವಿನ ಕಾರ್ಯಕ್ರಮ ಆಯೋಜಿಸಲಾಗಿತ್ತು,

ಕಾರ್ಯಕ್ರಮ ಉದ್ದೇಶಿಸಿ ವಿದ್ಯಾಲಯದ ಮುಖ್ಯ ಶಿಕ್ಷಕಿ ಭಾಗ್ಯವತಿ ಅವರು ಮಾತನಾಡಿ ಆಟ-ಪಾಠಗಳನ್ನು ಶಿಕ್ಷಕರಿಂದ ಕಲಿತರೂ ಅತಿಥಿಗಳ ವಿಶೇಷ ನುಡಿಗಳು ವಿದ್ಯಾರ್ಥಿಗಳಿಗೆ ಆಹ್ಲಾದಕರ ವಾಗಿರುತ್ತವೆ, ವಿವೇಕಾಂದ, ಕಲಾಂ,ವಿಶ್ವೇಶ್ವರಯ್ಯ ಅವರಂತಹ ಮಹನೀಯರ ಜೀವನ ಅರಿಯುವುದು ಹೊಸ ಹೊಸ ಆವಿಷ್ಕಾರದ ಕಡೆ ಗಮನ ಹರಿಸುವ ಹವ್ಯಾಸ ಬೆಳೆಸಿಕೊಳ್ಳುವುದು ರೂಢಿ ಮಾಡಿಕೊಳ್ಳ ಬೇಕು, ಹದಿಹರೆಯದ ವಯಸ್ಸಿನಲ್ಲಿ ಆಗುವ ಎಲ್ಲಾ ಬದಲಾವಣೆಗಳಿಗೆ ಒಗ್ಗಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ವೈದ್ಯರ ಸಲಹೆಗಳು ಉಪಯುಕ್ತವಾಗಿವೆ ಎಂದು ತಿಳಿಸಿದರು,

ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಾದಿಯ ಅವರು ಮಾತನಾಡಿ ಉತ್ತಮ ಆರೋಗ್ಯ ಇದ್ದರೆ ಉತ್ತಮ ಆಲೋಚನೆಗಳು ಇರುತ್ತವೆ,ವಿಶಾಲ ಮನೋಭಾವನೆಯೊಂದಿಗೆ ಉತ್ತಮ ಅವಿಷ್ಕಾರಗಳು ಉದಯಿಸುತ್ತವೆ, ತಂಬಾಕು, ಮಾದಕ ವಸ್ತು ಲೇಪಿತ ಚುಯಿಂಗ್‌ಗಮ್ ನಂತಹವುಗಳಿಂದ ದೂರವಿರಬೇಕು, ವೈಯಕ್ತಿಕ ಶುಚಿತ್ವದ ಜೊತೆಗೆ ಮಾನಸಿಕ ಆರೋಗ್ಯವನ್ನು ಸುಸ್ಥರವಾಗಿ ಇಟ್ಟು ಕೊಳ್ಳಬೇಕು, ದಂತ ರಕ್ಷಣೆ, ಸಾಂಕ್ರಾಮಿಕ ರೋಗಗಳಿಂದ ಆರೋಗ್ಯವನ್ನು ಸಂರಕ್ಷಣೆ ಮಾಡಿಕೊಳ್ಳ ಬೇಕು, ಸೂಕ್ತ ಸಲಹೆ,ಸೂಚನೆಗಳಿಗೆ ನಮ್ಮ ಕೇಂದ್ರಕ್ಕೆ ಬನ್ನಿ ಎಂದು ತಿಳಿಸಿದರು, ಈ ಸಂದರ್ಭದಲ್ಲಿ ಅರೋಗ್ಯ ಕುರಿತು ಕೆಲವು ವಿಡಿಯೋ ಗಳನ್ನು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು,

ಕಾರ್ಯಕ್ರಮದಲ್ಲಿ ವಿದ್ಯಾಲಯದ ಸಹ ಶಿಕ್ಷಕರಾದ ಎಮ್.ರವಿ,ಜಗದೀಶ್,ಶ್ವೇತಾ, ತೇಜೇಶ್ವರಿ,ಜೋನಾ,ಸಂಗೀತಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಅರೋಗ್ಯ ನಿರೀಕ್ಷಕ ಶಕೀಲ್ ಮತ್ತು ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು

LEAVE A REPLY

Please enter your comment!
Please enter your name here