ಜನ ಸಂಪರ್ಕ ಕೇಂದ್ರದ ಗ್ರೂಪ್ ಡಿ ನೌಕರ ಸಿದ್ಧಪ್ಪ ನಿಧನ

0
143

ಬಳ್ಳಾರಿ : ಬಳ್ಳಾರಿಯ ಕೇಂದ್ರ ಜನ ಸಂಪರ್ಕಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್ ಡಿ ನೌಕರ ಸಿದ್ದಪ್ಪ ವಗ್ಗಣ್ಣವರ್ ಅವರು ಗುರುವಾರ ತಮ್ಮ ವಾಸಸ್ಥಾನ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಸಿದ್ದಪ್ಪ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ.
ಕೇಂದ್ರ ಜನಸಂಪರ್ಕ ಇಲಾಖೆಯಲ್ಲಿ 40 ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದರು. ಸಿದ್ದಪ್ಪ ಅವರ ಕುಟುಂಬ ವರ್ಗಕ್ಕೆ ಭಗವಂತ ದುಃಖ ಬರಿಸುವ ಶಕ್ತಿ ನೀಡಲಿ ಎಂದು ಇಲಾಖೆಯ ಉಪನಿರ್ದೇಶಕರಾದ ಡಿ.ಜಿ.ಹಳ್ಳಿಕೇರಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ..

LEAVE A REPLY

Please enter your comment!
Please enter your name here