ಸರಕಾರದ ಪ್ಯಾಕೆಜ್ ಹಣ ಫಲಾನುಭವಿಗಳಿಗೆ ಸಮರ್ಪಕವಾಗಿ ಮುಟ್ಟಬೇಕು : ಸಂಗಮೇಶ ಹಿರೇಮಠ ಒತ್ತಾಯ

0
163

ರಾಜ್ಯದಲ್ಲಿ ಮಹಾಮಾರಿ ಕೊರೊನಾ ಎರಡನೇ ಅಲೆ ಹಾಗೂ ಬ್ಲಾಕ್ ಪಂಗಸ್ ನಿಂದ ಜನರು ಕಂಗೆಟ್ಟು ಹೊಗಿದ್ದಾರೆ,ರಾಜ್ಯದ ಮುಖ್ಯಮಂತ್ರಿ ಗಳು ನಾಡಿನ ಜನತೆಗೆ ಪ್ಯಾಕೇಜ್ ಘೋಷಿಸಿದರೂ ,ಇನ್ನುವರೆಗೂ ಅದು ಕಾರ್ಯ ರೂಪಕ್ಕೆ ಬಂದಿಲ್ಲ ಬಡಜನರು ಹಲವು ಗುಂಪುಗಳಲ್ಲಿ ಸಾಲ ಮಾಡಿ ಸಂಕಷ್ಟದ ಸಮಯದಲ್ಲಿ ಬದುಕು ಅತಂತ್ರ ಪರಿಸ್ಥಿತಿಯಲ್ಲಿ, ಬ್ಯಾಂಕ್ ಸಿಬ್ಬಂದಿಗಳು ಮನೆಮನೆಗೆ ಹೊಗಿ ಕಿರುಕುಳ ಕೊಡತಿದ್ದಾರೆ, ದಯವಿಟ್ಟು ಸರ್ಕಾರ ಇದರ ಬಗ್ಗೆ ಗಮನಹರಿಸಬೇಕು. ಇಲ್ಲವಾದರೆ ಉಪವಾಸ ಸತ್ಯಾಗ್ರಹವನ್ನು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಯುವಸೈನ್ಯ ತಾಲ್ಲೂಕ ಘಟಕದಿಂದ ಮಾಡಲಾಗುವದು ಎಂದು ತಾಲ್ಲೂಕ ಅದ್ಯಕ್ಷರಾದ ಸಂಗಮೇಶ ಹಿರೇಮಠ ಸರ್ಕಾರಕ್ಕೆ ಆಗ್ರಹಿಸಿದರು

ಇದೆ ಸಂದರ್ಭದಲ್ಲಿ ರಾಜ್ಯದ ರೈತರ ಸಾಲ ಮಾನ್ನ ಮಾಡಬೇಕು, ಶಿಕ್ಷಕರು ಮತ್ತು ಪತ್ರಕರ್ತರು ಎರಡು ವರ್ಷದಿಂದ ಸಂಕಷ್ಟದಲ್ಲಿ ಇರುವುದರಿಂದ ವಿಶೇಷ ಪ್ಯಾಕೇಜ್ ಘೊಷಿಸಿ ಸಹಾಯಕ್ಕೆ ಸರ್ಕಾರ ಮುಂದಾಗಬೇಕೆಂದು ಈ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು.

ವರದಿ:ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here