ಹೂಡೇಂ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟ,ಭಂಡ ಕಂಪ್ಯೂಟರ್ ಆಪರೇಟರ್ ನನ್ನು ಬದಲಿಸಿ-ಕ.ರ.ಸೇನೆ ಆಗ್ರಹ

0
329

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹೂಡೇಂ ಗ್ರಾಮ ಪಂಚಾಯ್ತಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಎ.ತಿಪ್ಪೇಸ್ವಾಮಿ ಭ್ರಷ್ಟ ನಿದ್ದು, ಸಾರ್ವಜನಿಕರೊಂದಿಗೆ ಉದ್ಧಠತನದಿಂದ ವರ್ತಿಸುತ್ತಿದ್ದಾನೆ. ನೂರಾರು ಗ್ರಾಮಸ್ಥರು ತಮ್ಮ ಬಳಿ ಈತನ ವಿರುದ್ಧ ದೂರುಗಳನ್ನು ನೀಡಿದ್ದಾರೆ, ಕಾರಣ ಅಗತ್ಯ ಶಿಸ್ಥು ಕ್ರಮ ಜರುಗಿಸಬೇಕು ಎಂದು, ಕರ್ನಾಟಕ ರಕ್ಷಣಾ ಸೇನೆ ಕೂಡ್ಲಿಗಿ ತಾಲೂಕು ಅಧ್ಯಕ್ಷ ಕೆ.ನಾಗೇಂದ್ರಪ್ಪ ಜಿ.ಪಂ. ಅಧಿಕಾರಿಗಳಿಗೆ ದೂರು ನೀಡಿ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ.

ಅವರು ಈ ಕುರಿತು ತಮ್ಮ ಸಂಘಟನೆಕಾರರು ಹಾಗೂ ಕೆಲ ಗ್ರಾಮಸ್ಥರೊಡಗೂಡಿ, ಅಗತ್ಯ ದಾಖಲುಗಳ ಸಮೇತ ಹೇಳಿಕೆ ನೀಡಿದ್ದಾರೆ. ಹೂಡೇಂ
ಗ್ರಾ.ಪಂ ನಲ್ಲಿ ಹತ್ತಾರು ವರ್ಷಗಳಿಂದ ಕಂಪ್ಯೂಟರ್ ಆಪರೇಟರ್ ಕೆಲಸ ಮಾಡುತ್ತಿರುವ ಎ.ತಿಪ್ಪೇಸ್ವಾಮಿ, ಕೆಲ ವರ್ಷಗಳಿಂದ ನಿರಂತರಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾನೆ, ಸಾರ್ವಜನಿಕರೊಂದಿಗೆ ಹಾಗೂ ಗ್ರಾಮಗಳ ಗ್ರಾಮಸ್ಥರೊಂದಿಗೆ ಉದ್ಧಠತನದಿಂದ ವರ್ತಿಸುತ್ತಿದ್ದಾನೆ.

ಪ್ರತಿಯೊಂದು ಯೊಜನೆಗಳ ಹಣದ ಚೆಕ್ ಅಥವಾ ಬಿಲ್ಲ್ ಹಾಗೂ ನರೇಗಾ ಕೂಲಿ ಕಾರ್ಮಿಕರಿಂದ, ಶೌಚಾಲಯ ಬಿಲ್ ಹಣ ಮಂಜೂರಾತಿಗೆ ಲಂಚವಾಗಿ ಹಣವಸೂಲಿ ಮಾಡುತ್ತಿದ್ದಾನೆ.

ಮೇಲಾಧಿಗಳಿಗೂ ಪಾಲು..!? ಪ್ರತಿಯೊಂದಕ್ಕೂ ತಲಾ ಶೇ10 ರಷ್ಟು ಹಣ ತನಗೆ ನೀಡುವಂತೆ ಪಲಾನುಭವಿಗಳಿಗೆ ಒತ್ತಾಯಿಸುತ್ತಾನೆ,ತಾನು ಪಡೆಯುವ ಲಂಚದಲ್ಲಿ ಜಿಲ್ಲಾ ಹಾಗೂ ತಾಲೂಕು ಮೇಲಾಧಿಕಾರಿಗಳಿಗೂ ತಾನು ನೀಡುತ್ತಿರುವುದಾಗಿ ಆತ ಹೇಳಿಕೊಂಡಿದ್ದಾನೆ. ಲಂಚ ಕೊಡಲು ನಿರಾ‍ಕರಿಸಿದರೆ ತರಲೆ ಮಾಡಿ ಹಣ ದೊರಕದಂತೆ ಮಾಡುತ್ತಾನೆ. ಇದಕ್ಕೆ ನೂರಾರು ಜೀವಂತ ಸಾಕ್ಷಿಗಳಿದ್ದಾವೆ ಎಂದು ಕೆ. ನಾಗೇಂದ್ರಪ್ಪ ಗಂಭೀರವಾಗಿ ದೂರಿದ್ದಾರೆ.

ಸಾರ್ವಜನಿಕರ ಹಿತದೃಷ್ಠಿಯಿಂದಾಗಿ ಭ್ರಷ್ಟ ಎ.ತಿಪ್ಪೇಸ್ವಾಮಿಯ ವಿರುದ್ಧ ಅಗತ್ಯ ಶಿಸ್ಥು ಕ್ರಮಕ್ಕಾಗಿ,ಕೆಲ ತಿಂಗಳುಗಳ ಹಿಂದೆಯೇ ದಕ್ಷಾಧಿಕಾರಿ ಬಳ್ಳಾರಿ ಜಿಪಂ ಸಿಓರವರು ಹಾಗೂ ಕೂಡ್ಲಿಗಿ ತಾಪಂ ಈಓ ರವರ ಬಳಿ ಸಾಕಷ್ಟು ಬಾರಿ ದೂರು ನೀಡಿದ್ದು ಏನೂ ಪ್ರಯೋಜನವಾಗಿಲ್ಲ,ಇದು ಅವರ ಕರ್ಥವ್ಯ ನಿಷ್ಠೆ ಜನಪರ ಕಾಳಜಿಯನ್ನೇ ಪ್ರೆಶ್ನಿಸುವಂತಿದೆ ಎಂದು ಕೆ. ನಾಗೇಂದ್ರಪ್ಪ ಆಕ್ರೋಶವ್ಯಕ್ತಪಡಿಸಿದ್ದಾರೆ.

ಗ್ರಾಪಂಗೆ ಬೀಗ:- ಸಂಬಂಧಿಸಿದ ಇಲಾಖಾಧಿಕಾರಿಗಳು ಭ್ರಷ್ಟ ಬಂಡುಕೋರ ಕಂಪ್ಯೂಟರ್ ಆಪರೇಟರ್ ಎ.ತಿಪ್ಪೇಸ್ವಾಮಿ ವಿರುದ್ಧ ಶಿಸ್ಥು ಕ್ರಮ ಜರುಗಿಸಬೇಕಿದೆ. ಅಧಿಕಾರಿಗಳು ಒಂದು ವಾರದೊಳಗೆ ಖುದ್ದು ಬೆಟ್ಟಿ ನೀಡಿ ದೂರುದಾರರ ಸಮಕ್ಷಮ ವಿಚಾರಿಸಬೇಕಿದೆ.ತಪ್ಪಿತಸ್ಥನ ವಿರುದ್ಧ ಸೂಕ್ತ ಶಿಸ್ಥು ಕ್ರಮವನ್ನು ಜರುಗಿಸಬೇಕಿದೆ, ನಿರ್ಲಕ್ಷಿಸಿದ್ದಲ್ಲಿ ಈ ಭ್ರಷ್ಟನಿಗೆ ಅಧಿಕಾರಿಗಳೇ ಬೆಂಗಾವಲು ಎಂದು ಅಧಿಕಾರಿಗಳೇ ಅರ್ಥೈಸಿದಂತಾಗುತ್ತದೆ.ಬೇಲಿಯೇ ಎದ್ದು ಹೊಲ ಮೇದಂತಾದಾಗ ಸಾರ್ವಜನಿಕರ ಹಿತಕ್ಕಾಗಿ ಹೋರಾಟ ಅನಿವಾರ್ಯವಾಗುತ್ತೆ, ವಿವಿದ ಸಂಘಟನೆಗಳೊಂದಿಗೆ ಹಾಗೂ ವಿವಿದ ಗ್ರಾಮಸ್ಥರೊಡಗೂಡಿ, ಕೆಲವೇ ದಿನಗಳಲ್ಲಿ ಗ್ರಾಪಂಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು, ಕರಸೇನೆ ಅಧ್ಯಕ್ಷ ಕೆ.ನಾಗೇಂದ್ರಪ್ಪ ಈ ಮೂಲಕ ಎಚ್ಚರಿಸಿದ್ದಾರೆ ಶಿವಣ್ಣ,ತಿಪ್ಪೇಸ್ವಾಮಿ ಸೇರಿದಂತೆ ಪತ್ತಿತರರು ಇದ್ದರು.

LEAVE A REPLY

Please enter your comment!
Please enter your name here