ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿ ಜಾಥಾ

0
104

ಬಳ್ಳಾರಿ,ಜ.01: ಬಳ್ಳಾರಿ ಮಹಾನಗರ ಪಾಲಿಕೆ ಮತ್ತು ನಗರದ ವಿವಿಧ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಸ್ವಚ್ಛ ಬಳ್ಳಾರಿ ಮತ್ತು ಸ್ವಸ್ಥ ಬಳ್ಳಾರಿ ಕಾರ್ಯಕ್ರಮ ಅಂಗವಾಗಿ ನಗರದಲ್ಲಿ ವೈಜ್ಞಾನಿಕ ಕಸ ವಿಂಗಡಣೆ, ಸ್ವಚ್ಛ ಬಳ್ಳಾರಿ ಮತ್ತು ಸ್ವಸ್ಥ ಬಳ್ಳಾರಿಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜಾಗೃತಿ ಜಾಥಾ ನಗರದಲ್ಲಿ ಶನಿವಾರ ನಡೆಯಿತು.
ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿ,ಕಸದ ವಿಲೇವಾರಿ,ಕಸದ ವಿಂಗಡಣೆ,ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಗಾಂಧಿನಗರದ ಎಂಬಿಎಸ್‍ಎಲ್ ಶಾಲೆ, ಕಾರ್ಕಳ ತೋಟದ ಜಿಎಚ್‍ಪಿಎಸ್ ಶಾಲೆ, ಪಟೇಲ್‍ನಗರದ ಜಿಎಚ್‍ಪಿಎಸ್ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಮತ್ತು ಮಹಾನಗರ ಪಾಲಿಕೆ ಸಿಬ್ಬಂದಿ ಜತೆಗೂಡಿ ನಗರದ ಮುಖ್ಯರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಜಾಥಾದ ಸಂದರ್ಭದಲ್ಲಿ ಸ್ವಚ್ಛ ಬಳ್ಳಾರಿ ಮತ್ತು ಸ್ವಸ್ಥ ಬಳ್ಳಾರಿ ಸಂದೇಶಗಳ ಫಲಕಗಳು ಗಮನಸೆಳೆದವು.
ಈ ಸಂದರ್ಭದಲ್ಲಿ ಪಾಲಿಕೆಯ ಆರೋಗ್ಯ ಅಧಿಕಾರಿ ಡಾ.ಹನುಮಂತಪ್ಪ, ಆರೋಗ್ಯ ನಿರೀಕ್ಷಕಿ ಶಹನಾಜ್ ಸೇರಿದಂತೆ ಪಾಲಿಕೆ ಸಿಬ್ಬಂದಿ ಮತ್ತು ಶಿಕ್ಷಕರು ಇದ್ದರು.

LEAVE A REPLY

Please enter your comment!
Please enter your name here