ಮಮತಾ ಮಾನಸಿಕ ಭಿನ್ನ‌ ಸಾಮಥ್ಯ೯ದ ಮಕ್ಕಳ ಶಾಲೆಯಲ್ಲಿ ಕೊವಿಡ್ ಲಸಿಕೆ ಕಾರ್ಯಕ್ರಮ.

0
156

ಧಾರವಾಡ ಜೂ.14: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ಸಬಲೀಕರಣ ಇಲಾಖೆ, ಶ್ರೀಮತಿ ಥೆರೆಜಾ ಫೆರ್ನಾಂಡೀಸ್ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್, ಮಮತಾ ಮಾನಸಿಕ ಭಿನ್ನ‌ ಸಾಮಥ್ಯ೯ದ ಮಕ್ಕಳ ಶಾಲೆ, ಇವರ ಸಹಯೋಗದಲ್ಲಿ ಜೂನ್ 14 ರಂದು ಮಮತಾ ಮಾನಸಿಕ ಭಿನ್ನ‌ ಸಾಮಥ್ಯ೯ದ ಮಕ್ಕಳ ಶಾಲೆಯಲ್ಲಿ ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಚಿಣ್ಣನ್ನವರ ಆರ್.ಎಸ್. , ಇವರು ಈ ಕೊವಿಡ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ
ಮಾತನಾಡಿದ ಅವರು, ವಿಶೇಷಚೇತನರಿಗೆ ಕೋವಿಡ್ ಲಸಿಕೆಯನ್ನು ಹಾಕಿಸುವ ಕಾರ್ಯಕ್ರಮಗಳು ತೀವ್ರಗತಿಯಲ್ಲಿ ನಡೆಯುತ್ತಿದ್ದು, ಕೊವಿಡ್ ಲಸಿಕೆಯನ್ನು ಯಾವುದೇ ಭಯ ಅಥವಾ ಆತಂಕಕ್ಕೆ ಒಳಗಾಗದೇ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ.ಎಸ್.ಎಮ್. ಹೊನಕೇರಿ ಯವರು ಮಾತನಾಡಿ, ಧಾರವಾಡ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಆಯೋಜಿಸುವ ವಿಶೇಷ ಕೊವಿಡ್ ಲಸಿಕೆ ಶಿಬಿರಗಳಿಗೆ ಸಂಪೂರ್ಣ ಸಹಕಾರವನ್ನು ಕೊಡಲಾಗುತ್ತದೆ ಎಂದು ತಿಳಿಸಿದರು.

ಮಮತಾ ಮಾನಸಿಕ ಭಿನ್ನ ಸಾಮಥ್ಯ೯ದ ಮಕ್ಕಳ ಶಾಲೆಯ ಮುಖ್ಯಸ್ಥರಿಗೆ ಕೊವಿಡ್ ಲಸಿಕಾ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದ ಕಾರಣಕ್ಕೆ ಅಭಿನಂದನೆ ಸಲ್ಲಿಸಿದರು. ಈಗಾಗಲೇ ವಿಕಲಚೇತನರಿಗೆ ಆದ್ಯತೆಮೇರೆಗೆ ಕೊವಿಡ್ ಲಸಿಕೆಯನ್ನು ಕೊಡಲಾಗುತ್ತಿದ್ದು, ವಿವಿಧ ವಿಕಲಚೇತನರ ಸಂಘಟನೆಗಳು ಕೂಡ ಇಂತಹ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿವೆ ಎಂದು ತಿಳಿಸಿದರು. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೊವಿಡ್ ಲಸಿಕೆಯನ್ನು ಹಾಕಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಇದಕ್ಕೆ ಸಾರ್ವಜನಿಕರು ಕೂಡ ಸಹಕಾರವನ್ನು ನೀಡಬೇಕೆಂದು ವಿನಂತಿಸಿಕೊಂಡರು.

ಜಿಲ್ಲಾ ವಿಕಲಚೇತನರ ಅಧಿಕಾರಿಗಳಾದ ಡಿ.ಎನ್ ಮೂಲಿಮನಿ ರವರು ಮಾತನಾಡಿ ಧಾರವಾಡ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ 23,055 ವಿಕಲಚೇತನರನ್ನು ಗುರುತಿಸಿದ್ದು ಈಗಾಗಲೇ 5800 ಕ್ಕಿಂತಲೂ ಹೆಚ್ಚು ವಿಕಲಚೇತನರಿಗೆ ಕೊವಿಡ್ ಲಸಿಕೆಯನ್ನು ನೀಡಲಾಗಿದೆ. ವಿಕಲಚೇತನರು ಕೊವಿಡ್ ಲಸಿಕೆಯನ್ನು ಪಡೆಯಲು ಮುಂದಾಗಬೇಕು ಎಂದು ಹೇಳಿದರು. ಇದರ ಜೊತೆಗೆ ಕೋವಿಡ್ ಮುಂಜಾಗೃತೆ ಕ್ರಮಗಳನ್ನು ಸರಿಯಾಗಿ ಪಾಲನೆ ಮಾಡಬೇಕೆಂದು ತಿಳಿಸಿದರು.

ಮಮತಾ ಮಾನಸಿಕ ಭಿನ್ನ ಸಾಮಥ್ಯ೯ದ ಶಾಲೆಯ ಮುಖ್ಯಸ್ಥರಾದ ತಾರಾ ಫೆರ್ನಾಂಡಿಸ್, ಫಾದರ್ ವಿಜಯ್ ಸೋಜಾ, ಮಾರ್ಗರೇಟ್ ಫೆನಾ೯ಂಡಿಸ್, ಲಿಯೋ ಫೆನಾ೯ಂಡಿಸ್,
ತಾಲೂಕು ಆರೋಗ್ಯ ಅಧಿಕಾರಿ ಡಾ.ತನುಜಾ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಕಳಸೂರು ಮಠ, ಧಾರವಾಡ ಜಿಲ್ಲಾ ವಿಕಲಚೇತನರ ಅಧ್ಯಕ್ಷರಾದ ಶ ಕೇಶವ ತೆಲಗು,
ಪಿ.ಎಲ್.ವಿ ಸದಸ್ಯರಾದ ಅಶೋಕ ಕೋರಿ, ನಾಗರಾಜ ಹೂಗಾರ ಉಪಸ್ಥಿತರಿದ್ದರು.

ಸವಿತಾ ಕುಂಬಾರ ಕಾರ್ಯಕ್ರಮವನ್ನು ನಿರೂಪಿಸಿದರು. ಗೀತಾ ಕುಂಬಾರ ವಂದಿಸಿದರು.

LEAVE A REPLY

Please enter your comment!
Please enter your name here