ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ : ಧಾರವಾಡ ಜಿಲ್ಲೆಗೆ 9 ಪದಕ ಮತ್ತು ಪ್ರಶಸ್ತಿಗಳು

0
107

ಧಾರವಾಡ:ಮಾ.24: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬಾನಗಿತ್ತಿ ಗುಡಿಹಾಳ ಗ್ರಾಮದಲ್ಲಿ ಮಾರ್ಚ್ 19 ರಿಂದ ಮಾರ್ಚ್ 21 ರವರೆಗೆ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಸತಿ ಶಾಲೆಯ ಕ್ರೀಡಾಪಟುಗಳು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ 2 ಚಿನ್ನ, 2 ಬೆಳ್ಳಿ ಹಾಗೂ 5 ಕಂಚಿನ ಪದಕಗಳನ್ನು ಪಡೆದಿದ್ದಾರೆ.

ಭಜರಂಗಿ ದೊಡಮನಿ ಹಾಗೂ ಪುಷ್ಪ ನಾಯಕ ಚಿನ್ನದ ಪದಕ, ಶಿವಾಜಿ ಗಾಯಕವಾಡ ಮತ್ತು ಗಂಗಮ್ಮ ಹಡಪದ ಬೆಳ್ಳಿಯ ಪದಕ, ಚೇತನ ತುಕ್ಕೋಜಿ, ದಾದಾಫೀರ ಸಲಿಯಾದನವರ, ಮಾದೇಶ ಭಟ್ಟೆಸು, ದೀಪ ನೇಸರಗಿ, ಮಡಿವಾಳೇಶ ಚಿಲ್ಲಣ್ಣನವರ ಇವರು ಕಂಚಿನ ಪದಕಗಳನ್ನು ಪಡೆದು ಧಾರವಾಡ ಜಿಲ್ಲೆಗೆ ಹಾಗೂ ಇಲಾಖೆಗೆ ಕೀರ್ತಿಯನ್ನು ತಂದಿದ್ದಾರೆ.

ವಿಜೇತ ಕುಸ್ತಿಪಟುಗಳಿಗೆ ಕುಸ್ತಿ ತರಬೇತುದಾರ ಶಿವಪ್ಪಾ ಪಾಟೀಲ ಇವರಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಶುಭ ಕೋರಿದ್ದಾರೆ.

LEAVE A REPLY

Please enter your comment!
Please enter your name here