ದರೋಜಿ ಹಾಗೂ ಹಳೆ ಮಾದಾಪುರ ಗ್ರಾಮಗಳಲ್ಲಿ ಕೋವಿಡ್ ಲಸಿಕೆ ಜಾಗೃತಿ ಅಭಿಯಾನ.

0
86

ಸಂಡೂರು ತಾಲೂಕಿನ ದರೋಜಿ ಹಾಗೂ ಹಳೇ ಮಾದಾಪುರ ಗ್ರಾಮಗಳಲ್ಲಿ ತಾಲೂಕು ಆರೋಗ್ಯ ಇಲಾಖೆಯಿಂದ ಕೋವಿಡ್-19ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ಕೋವಿಡ್ ಲಸಿಕೆ ಜಾಗೃತಿ ಅಂಗವಾಗಿ ಗ್ರಾಮಗಳಲ್ಲಿನ ಬೀದಿಗಳಲ್ಲಿ ಬ್ಯಾನರ್ ಹಿಡಿದುಕೊಂಡು ಪ್ರಚಾರ ಮಾಡಲಾಯಿತು.

ದರೋಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಮ್ಮೆ ಗಂಗಣ್ಣ ಹಾಗೂ ಅವರೊಂದಿಗೆ ಸದಸ್ಯರಾದ ಶ್ರೀಮತಿ ಹೆಚ್. ಆಶಾ, ಸಣ್ಣ ಮಾರೆಪ್ಪ, ಹಳೇ ಮಾದಾಪುರ ಗ್ರಾಮದಲ್ಲಿ ಕೋವಿಡ್ ಲಸಿಕೆಯನ್ನು ಪಡೆದರು

ಹಳೇ ಮಾದಾಪುರ ಗ್ರಾಮದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದ ಜನರಿಗೆ ಕೋವಿಡ್-19 ರ ಅಪಾಯ ಮತ್ತು ಮೂರನೇ ಅಲೆ ಬಗ್ಗೆ ವಿವರಿಸಿ ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸಿ ಇಂದು 103 ಜನರಿಗೆ ಲಸಿಕೆ ನೀಡಲಾಯಿತು, ಅತೀ ಹೆಚ್ಚಾಗಿ 45 ವರ್ಷ ಮೇಲ್ಪಟ್ಟವರು ಇಂದು ಲಸಿಕೆಯನ್ನು ಪಡೆದುಕೊಂಡರು

ಗ್ರಾಮಗಳಲ್ಲಿ ಹಲವು ಕಡೆ ಲಸಿಕೆಯ ಮಹತ್ವ ಕುರಿತು ಅರಿವು ಮೂಡಿಸಲಾಯಿತು,ಹಾಗೇ ರೂಪಾಂತರಿ ಕೊರೊನಾ ಮೂರನೇ ಅಲೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು

ಈ ಸಂಧರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಮ್ಮೆ ಗಂಗಣ್ಣ, ಸದಸ್ಯರಾದ ಸಣ್ಣ ಮಾರೆಪ್ಪ, ಶ್ರೀಮತಿ ಆಶಾ,ಮುಖಂಡರಾದ ಮಲಿಯಪ್ಪ, ಆರೋಗ್ಯ ನಿರೀಕ್ಷಾಧಿಕಾರಿ ವೀರ ಬಸಮ್ಮ, ಆಶಾ ಕಾರ್ಯಕರ್ತೆಯರಾದ ಸರಸ್ವತಿ, ಅಂಜಿನಮ್ಮ, ಹಾಗೂ ಅಂಗನವಾಡಿ ಕಾರ್ಯಕರ್ತೆಯರಾದ ಕೋಮಲಾ, ರೇಷ್ಮಾ, ಗಂಗಮ್ಮ, ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here