ಖನಿಜ ನಿಧಿಯ ಸದ್ಭಳಕೆಯ ಮೂಲಕ ತಾಲೂಕು ಸಮಗ್ರ ಅಭಿವೃದ್ದಿ;ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ

0
141

ಹಾಯ್ ಸಂಡೂರ್, ವಾರ್ತೆ
ಸಂಡೂರು :ಜು: 18: ಸಂಡೂರು ತಾಲೂಕಿನಾದ್ಯಂತ ಜಿಲ್ಲಾ ಖನಿಜ ನಿಧಿಯಿಂದ ಕೈಗೊಂಡ ಕಾರ್ಯಕ್ರಮಗಳ ಪೂರ್ಣ ಪರಿಶೀಲನೆ ಮತ್ತು ಇನ್ನೂ ಯಾವ ಕೆಲಸಗಳನ್ನು ಮಾಡಬೇಕು ಎನ್ನುವ ಬಗ್ಗೆ ಸ್ಥಳಗಳ ಪರಿಶೀಲನೆ ಮಾಡಿದ್ದೇವೆ ಎಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ತಿಳಿಸಿದರು.

ಅವರು ತಾಲೂಕಿನ ಸುಶೀಲಾನಗರ ಗ್ರಾಮದ ಹತ್ತಿರ ನಿರ್ಮಾಣವಾಗುತ್ತಿರುವ ಶಾಲೆಯ ಪರಿಶೀಲನೆ ನಡೆಸಿ ಮುಂದಿನ ದಿನಗಳಲ್ಲಿ ಉತ್ತಮ ಶಿಕ್ಷಣದ ವ್ಯವಸ್ಥೆ , ಆರೋಗ್ಯದ ವ್ಯವಸ್ಥೇ ಹಾಗೂ ಗಣಿ ಪ್ರದೇಶಗಳಿಂದ ಸಂಪರ್ಕಿಸುವ ಎಲ್ಲಾ ರಸ್ತೆಗಳ ಅಭಿವೃದ್ದಿ ಮತ್ತು ಪೂರ್ಣ ಪ್ರಮಾಣದಲ್ಲಿ ಶಿಕ್ಷಣ, ಆರೋಗ್ಯ, ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತಹ ಕಾರ್ಯ ಮಾಡಲಾಗುವುದು,

ಈಗಾಗಲೇ ಶಾಲೆಗಳು ನಿರ್ಮಾಣ ಹಂತದಲ್ಲಿವೆ, ಅಸ್ಪತ್ರೆಗಳ ನಿರ್ಮಾಣಕ್ಕೆ, ಪಟ್ಟಣದಲ್ಲಿ ಮಿನಿ ವಿಧಾನ ಸೌಧ, ಮೆಟ್ರಿಕಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಸ್ಪತ್ರೆಯ ನಿರ್ಮಾಣ ಬೈಪಾಸ್ ರಸ್ತೆಗಳ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಂಡೂರು ತಾಲೂಕಿನಾದ್ಯಂತ ಕೈಗೊಳ್ಳಲಾಗುವುದು ಎಂದು ಎಲ್ಲಾ ವಿವರಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಈ.ತುಕರಾಂ ಅವರು ಮಾತನಾಡಿ ತಾಲೂಕಿನ ಜನತೆ ಗಣಿಯಿಂದ ನಷ್ಟಕ್ಕೆ ಗುರಿಯಾಗಿದ್ದು ಇವರಿಗೆ ಅತಿ ಹೆಚ್ಚು ಹಣ ಬಳಕೆ ಮಾಡಲಾಗುವುದು, ಅದಕ್ಕೆ ಪೂರಕ ಎನ್ನುವಂತೆ ತಾಲೂಕಿನ 175 ಪ್ರಾಥಮಿಕ ಶಾಲೆಗಳಿಗೆ ಬೇಕಾದ ಎಲ್ಲಾ ರೀತಿಯ ಹೈಟೆಕ್ ತರಗತಿಗಳನ್ನು ನಿರ್ಮಿಸಲಾಗುವುದು,ಅಲ್ಲದೆ ಮಿನಿ ವಿಧಾನಸೌಧವನ್ನು 5.28 ಎಕರೆ ಪ್ರದೇಶದಲ್ಲಿ ಎಲ್ಲಾ ಕಛೇರಿಗಳು ಒಂದೇ ಸೂರಿನಡಿಯಲ್ಲಿ ಬರುವಂತಹ ಕಟ್ಟಡ ಇದಾಗಿದೆ, ಪ್ರಮುಖವಾಗಿ ಇದರಲ್ಲಿ ಕೆ.ಎಸ್.ಅರ್.ಟಿ.ಸಿ ಸಿಬ್ಬಂದಿಗಳ ಕೊಠಡಿಗಳ ನಿರ್ಮಾಣ, ಮಾಡಲಾಗುವುದು ಒಟ್ಟು 20 ಇಲಾಖೆಗಳು ಒಂದೇ ಕಡೆ ಬಂದು ಸಾರ್ವಜನಿಕರಿಗೆ ಅನುಕೂಲವಾಗಲಿದೆ,

200 ಬೆಡ್ ನೂತನ ಅಸ್ಪತ್ರೆಯನ್ನು ನಿರ್ಮಿಸಲು 10 ಎಕರೆ ಜಾಗವನ್ನು ಹುಡುಕುತ್ತಿದ್ದು ಶೀಘ್ರದಲ್ಲಿಯೇ ಯೋಜನೆ ರೂಪಿಸಲಾಗುವುದು, ತಾಲೂಕಿನ ಕೃಷಿ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಪೂರ್ಣ ರೀತಿಯ ತರಬೇತಿ ಕೇಂದ್ರಗಳು, ಮತ್ತು ಅದಕ್ಕೆ ಬೇಕಾದ ಎಲ್ಲಾ ರೀತಿಯ ತಂತ್ರಜ್ಞಾನ ಅಳವಡಿಕೆಯ ತರಬೇತಿ ಕೇಂದ್ರ ಮತ್ತು ಕಚೇರಿಗಳನ್ನು ಶೀಘ್ರ ಪ್ರಕ್ರಿಯೆ ಪ್ರಾರಂಭಿಸಲಾಗುವುದು, ಇದಕ್ಕೆ ಬೇಕಾದ ನೀಲ ನಕ್ಷೆಯನ್ನು ಸಿದ್ದಪಡಿಸಲಾಗಿದೆ,

ಈಗಾಗಲೇ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಎಲ್.ಕೆ.ಜಿ.ಯಿಂದ ಸ್ನಾತಕೋತ್ತರ ಪದವಿಯ ವರೆಗೆ ಶಿಕ್ಷಣ ಸಿಗುವ ವ್ಯವಸ್ಥೆ ಹಣ ಬಿಡುಗಡೆ ಮಾಡಲಾಗಿದೆ, ಈ ಎಲ್ಲಾ ರೀತಿಯ ಅನುದಾನವನ್ನು ಡಿ.ಎಂ.ಎಫ್ ನಿಧಿಯಿಂದ ಬಳಸಲಾಗುವುದು,ಈಗಿರುವ ಪ್ರಸ್ತುತ ಅಸ್ಪತ್ರೆಯನ್ನು ತಾಯಿ ಮಗು ಅಸ್ಪತ್ರೆಯಾಗಿ ಪರಿವರ್ತಿಸಲಾಗುವುದು,

ಸಿ.ಎಸ್.ಅರ್ ಅನುದಾನವನ್ನು ವೈದ್ಯರ ನೇಮಕ ಮತ್ತು ತಾಲೂಕಿನಲ್ಲಿ ಶಿಕ್ಷಕರ ಕೊರತೆಯಾಗದಂತೆ ವಿಶೇಷವಾಗಿ ಅತಿಥಿ ಶಿಕ್ಷಕರನ್ನು ನೇಮಿಸುವ ಕಾರ್ಯವನ್ನು ಸಹ ಮಾಡಲಾಗುವುದು, ಸಂಡೂರು ನಾರಿಹಳ್ಳಿ ಪ್ರದೇಶದ ಸ್ವಚ್ಚತೆಗೆ ಬೇಕಾದ 10 ಕೋಟಿ ಹಣವನ್ನು ಉಪಯೋಗಿಸಿ ಅಭಿವೃದ್ದಿ ಮಾಡಲಾಗುವುದು, ಅದ್ದರಿಂದ ಪ್ರತಿಯೊಬ್ಬರೂ ಸಹ ನಂಜುಂಡಪ್ಪ ವರದಿಯ ಅನ್ವಯ ಸಂಡೂರು ಹಿಂದುಳಿದ ತಾಲೂಕು ಎನ್ನುವ ಹಣೆಪಟ್ಟಿಯನ್ನು ತೆಗೆದು ಹಾಕಿ ಮಾದರಿ ತಾಲೂಕನ್ನಾಗಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯಾನಿರ್ವಾಹಕ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here