ಬೆಸ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಗೊಳಿಸಬೇಕೆಂದು ಡಿಪ್ಲೋಮಾ ವಿದ್ಯಾರ್ಥಿಗಳಿಂದ ಕಾಲೇಜುಗಳ ಮುಂದೆ ಧರಣಿ:ಎಐಡಿಎಸ್‌ಓ

0
110

ಬಳ್ಳಾರಿ. ಜುಲೈ.23.ಇಂದು ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ಹಾಗೂ ವಿದ್ಯಾರ್ಥಿಗಳ ಹೋರಾಟ ಸಮಿತಿಯಿಂದ ಡಿಪ್ಲೊಮಾ ೧,೩&೫ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಗೊಳಿಸಬೇಕೆಂದು ಬಳ್ಳಾರಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಹಾನಗಲ್ ಶ್ರೀ ಕುಮಾರಸ್ವಾಮಿ ಪಾಲಿಟೆಕ್ನಿಕ್ ಕಾಲೇಜು, ಸಂಜಯ್ ಗಾಂಧಿ ಪಾಲಿಟೆಕ್ನಿಕ್ ಕಾಲೇಜು ಮತ್ತು ಸಿರುಗುಪ್ಪ ತಾಲೂಕಿನ ಸಿರುಗುಪ್ಪ ಎಜುಕೇಷನ್ ಪಾಲಿಟೆಕ್ನಿಕ್ ಕಾಲೇಜು, ಜಿಲ್ಲೆಯಾದ್ಯಂತ ಇನ್ನಿತರೆ ಡಿಪ್ಲೊಮಾ ಕಾಲೇಜುಗಳ ಮುಂದೆ ಧರಣಿ ಮಾಡಿ ಮಾನ್ಯ ಪ್ರಾಂಶುಪಾಲರ ಮುಖಂತರ ಮಾನ್ಯ ಡಿಟಿಯು ಬೋರ್ಡ್ಗೆ ಮನವಿ ಕಳುಹಿಸಲಾಯಿತು.

ಈ ಸಂದರ್ಭದಲ್ಲಿ ಧರಣಿ ಉದ್ದೇಶಿಸಿ ಎಐಡಿಎಸ್‌ಓ ಜಿಲ್ಲಾ ಉಪಾಧ್ಯಕ್ಷರಾದ ಜೆ.ಸೌಮ್ಯ ಅವರು ಮಾತನಾಡುತ್ತಾ ರಾಜ್ಯದಲ್ಲಿ ಕೊರೋನ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿ, ಲಾಕ್ ಡೌನ್ ಆಗಿದ್ದ ಸಮಯದಲ್ಲಿ, ಹಿಂದಿನ ಸೆಮಿಸ್ಟರ್‌ನ ಪರೀಕ್ಷೆಗಳನ್ನು ನಡೆಸದೆಯೆ ಎಲ್ಲಾ ವಿದ್ಯಾರ್ಥಿಗಳನ್ನು ಮುಂದಿನ ಸೆಮಿಸ್ಟರ್‌ಗೆ ಕಳುಹಿಸಲಾಯಿತು ಮತ್ತು ಕಳೆದ ೨ ತಿಂಗಳಿನಿ0ದ ಆನ್‌ಲೈನ್ ತರಗತಿಗಳು ಸಹ ನಡೆಯುತ್ತಿವೆ. ಸೆಮಿಸ್ಟರ್ ಪರೀಕ್ಷೆ ಕುರಿತು ಸರ್ಕಾರ ಯಾವುದೇ ನಿರ್ದಿಷ್ಟ ನಿರ್ಧಾರ ಕೈಗೊಂಡಿಲ್ಲವೆ0ದು ಹಾಗೂ ಈಗ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವುದೇ ಮುಖ್ಯ ಆದ್ಯತೆ ಎಂದು ಹೇಳಿದ್ದಾಗಲೂ ಅನೇಕ ವಿಶ್ವವಿದ್ಯಾಲಯಗಳು ಪರೀಕ್ಷೆ ವೇಳಾಪಟ್ಟಿ ಬಿಡುಗಡೆ ಮಾಡಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ಈಗ ಹಠಾತ್ತನೆ ಹಿಂದಿನ ಸೆಮಿಸ್ಟರಿನ ಪರೀಕ್ಷೆಯನ್ನು ಜುಲೈ ಕೊನೆಯ ವಾರದಿಂದ ಆಗಸ್ಟ್ ಮೊದಲ ವಾರದಲ್ಲಿ ಮುಗಿಸಿ ನಂತರ ಸೆಪ್ಟಂಬರ್ ಒಳಗೆ ಪ್ರಸ್ತುತ ಸೆಮಿಸ್ಟರ್ ಪರೀಕ್ಷೆಯನ್ನು ಮುಗಿಸುವುದು ವಿದ್ಯಾರ್ಥಿಗಳ ಮೇಲೆ ಅತೀವ ಒತ್ತಡ ಹೇರಿದಂತಾಗುತ್ತದೆ. ಅಲ್ಲದೆ ಡಿಪ್ಲೋಮಾ ವಿದ್ಯಾರ್ಥಿಗಳಲ್ಲಿ ಅನೇಕರಿಗೆ ೧೮ ವರ್ಷ ತುಂಬಿರದ ಹಿನ್ನಲೆಯಲ್ಲಿ ಲಸಿಕೆಯನ್ನೂ ಪಡೆಯುವಂತಿಲ್ಲ. ಲಸಿಕೆ ಇಲ್ಲದೇ ವಿದ್ಯಾರ್ಥಿಗಳು ಆಫ್ ಲೈನ್ ತರಗತಿಗಳು/ ಪರೀಕ್ಷೆಗೆ ಹಾಜರಾಗುವುದು ಅಪಾಯಕಾರಿ. ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದುಗೊಳಿಸಿದಂತೆಯೇ ಡಿಪ್ಲೋಮಾ ವಿದ್ಯಾರ್ಥಿಗಳ ಸೆಮಿಸ್ಟರ್ ಪರೀಕ್ಷಗಳನ್ನು ರದ್ದುಗೊಳಿಸದಿದ್ದಲ್ಲಿ ತಾರತಮ್ಯವಾಗುತ್ತದೆ. ಅಂತಿಮ ವರ್ಷದ ಡಿಪ್ಲೋಮಾ ವಿದ್ಯಾರ್ಥಿಗಳು ಆಗ ಎರಡು ಸೆಮಿಸ್ಟರ್ ಪರೀಕ್ಷಗಳು ಮತ್ತು ಸಿಇಟಿ ಸೇರಿ ಮೂರು ಪರೀಕ್ಷೆಯನ್ನೂ ಬರೆಯಬೇಕಾಗುತ್ತದೆ.. ಈ ಬಗೆಗೆ ರಾಜ್ಯ ಸಮಿತಿ ನಡೆಸಿದ ಬೃಹತ್ ಗೂಗಲ್ ಸಮೀಕ್ಷೆಯಲ್ಲಿ ರಾಜ್ಯದ ೪೬ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶೇ. ೯೦.೭ ರಷ್ಟು ವಿದ್ಯಾರ್ಥಿಗಳು ಅಂದರೆ, ೪೬ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಿಂದಿನ ಸೆಮಿಸ್ಟರಿನ ಪರೀಕ್ಷೆಗಳನ್ನು ಕೈಬಿಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದ್ದರಿಂದ ಸರ್ಕಾರ ಈ ಕೂಡಲೇ ವಿದ್ಯಾರ್ಥಿಗಳ ಪರವಾದ ನಿರ್ಧಾರ ಬರಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ರವಿಕಿರಣ್.ಜೆ.ಪಿ ಅವರು ಮಾತನಾಡುತ್ತಾ ಮುಂದಿನ ಸೆಮಿಸ್ಟರ್ ಅನ್ನು ಓದಬೇಕು, ಕಲಿಯಬೇಕು ಅಂದರೆ, ಹಿಂದಿನ ಸೆಮಿಸ್ಟರ್ ಪಾಠಗಳನ್ನು ಅರ್ಥ ಮಾಡಿಕೊಂಡಿರಬೇಕು. ಇಲ್ಲದಿದ್ದರೆ ಮುಂದಿನ ಸೆಮಿಸ್ಟರ್ ಕಲಿಯಲು ಸಾಧ್ಯವಿಲ್ಲ. ಹಾಗಾಗಿ, ನಾವು ಮುಂದಿನ ಸೆಮಿಸ್ಟರ್ ನಲ್ಲಿ ಇರುವಾಗ, ಹಿಂದಿನ ಸೆಮಿಸ್ಟರ್ ನ ಪರೀಕ್ಷೆ ನಡೆಸಿಲ್ಲ ಎಂಬ ಒಂದೇ ಕಾರಣಕ್ಕೆ ಅದು ಶಿಕ್ಷಣದ ಗುಣಮಟ್ಟಕ್ಕೆ ಯಾವುದೇ ರೀತಿ ಮಾರಕ ಆಗುವುದಿಲ್ಲ. ಬದಲಿಗೆ, ಪ್ರಸಕ್ತ ಸೆಮಿಸ್ಟರ್ ನ ಬೋಧನೆ, ಕಲಿಕೆಯನ್ನು ಅಚ್ಚುಕಟ್ಟಾಗಿ ಮಾಡಿ, ಕೋವಿಡ್ ೩ ನೆ ಅಲೆ ಬರುವುದರ ಮುನ್ನ ಎಲ್ಲ ಸಿದ್ಧತೆಯೊಂದಿಗೆ ಪರೀಕ್ಷೆ ನಡೆಸುವುದರಿಂದ, ಗುಣಮಟ್ಟದ ಕಲಿಕೆ ಹಾಗೂ ಜ್ಞಾನಾರ್ಜನೆ ಖಾತ್ರಿಯಾಗುತ್ತಿದೆ. ಇಂದಿನ ಗಂಭೀರ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು, ಪೋಷಕರು ಹಾಗೂ ರಾಜ್ಯದ ಜನತೆಯ ಜೀವವನ್ನು ಕಾಪಾಡುವ ನಿಟ್ಟಿನಲ್ಲಿ ಹಿಂದಿನ ಪರೀಕ್ಷೆಯನ್ನು ಕೈ ಬಿಡುವುದು ವಿವೇಚನಾಯುಕ್ತ ನಿರ್ಧಾರವಾಗುತ್ತದೆ. ಇದು ಹಿಂದಿನ ಸೆಮಿಸ್ಟರ್ ಪರೀಕ್ಷೆಯನ್ನು ನಡೆಸದೆಯೇ ಮುಂದಿನ ಸೆಮಿಸ್ಟರ್ ಗೆ ಕಳುಹಿಸಿರುವ ನಿಮ್ಮ ಸರ್ಕಾರದ ನಿರ್ಧಾರಕ್ಕೆ ಪೂರಕವಾಗಿ ಇರುತ್ತದೆ.

ಇದರೊಂದಿಗೆ, ಈಗಾಗಲೇ ಹಲವು ಸ್ವಾಯತ್ತ ಕಾಲೇಜುಗಳು ಹಾಗೂ ಖಾಸಗಿ ವಿಶ್ವವಿದ್ಯಾಲಯಗಳು ಅವರದೇ ವಿಶಿಷ್ಟ ಮೌಲ್ಯಮಾಪನ ಮಾನದಂಡದೊAದಿಗೆ ವಿದ್ಯಾರ್ಥಿಗಳನ್ನು ಮುಂದಿನ ಸೆಮಿಸ್ಟರ್ ಗೆ ತೇರ್ಗಡೆಗೊಳಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ ಸರ್ಕಾರಿ ಅನುದಾನಿತ ವಿಶ್ವವಿದ್ಯಾಲಯಗಳ/ಮಂಡಳಿಗಳ ವಿದ್ಯಾರ್ಥಿಗಳಿಗೆ ಮಾತ್ರ ಹಿಂದಿನ ಸೆಮಿಸ್ಟರ್ ಪರೀಕ್ಷೆ ನಡೆಸುವುದು ಅತ್ಯಂತ ತಾರತಮ್ಯ ನೀತಿಯಾಗುತ್ತದೆ.

ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಬಗ್ಗೆ ಅತೀವ ಕಾಳಜಿ ಇರುವ ನೀವು ಮೇಲಿನ ಎಲ್ಲಾ ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸುತ್ತೀರಿ ಎಂಬ ವಿಶ್ವಾಸ ವಿದ್ಯಾರ್ಥಿಗಳಲ್ಲಿ ಇದೆ. ವಿದ್ಯಾರ್ಥಿಗಳ, ಉಪನ್ಯಾಸಕರ ಹಾಗೂ ಪೋಷಕರ ಆರೋಗ್ಯವನ್ನೇ ಪ್ರಮುಖವೆಂದು ಪರಿಗಣಿಸಿರುವ ಸರ್ಕಾರಕ್ಕೆ, ಮುಂದೆ ಒಂದೇ ತಿಂಗಳಿನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸದಂತೆ ತಾವು ಸರ್ಕಾರವನ್ನು ಒತ್ತಾಯಿಸುವಿರೆಂದು ಆಶಿಸುತ್ತೇವೆ.

ಪ್ರಸಕ್ತ ಸಾಲಿನ ಪರೀಕ್ಷೆಗಳ ಕುರಿತು ಯುಜಿಸಿ ಮಾರ್ಗಸೂಚಿಗಳು, ದಿನಾಂಕ – ೧೬ ಜುಲೈ ೨೦೨೧

ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದು ‘ ಕಡ್ಡಾಯ ‘ ಹಾಗೂ ಮದ್ಯಂತರ ವರ್ಷದ ಅಂದರೆ, ಮೊದಲ ಮತ್ತು ಎರಡನೇ ವರ್ಷದ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ ಎಂದು ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ) ಮಾರ್ಗಸೂಚಿ ನೀಡಿದೆ. ಕಳೆದ ಬಾರಿ ತಜ್ಞರ ತಂಡ ನೀಡಿದಂತಹ ಸಲಹೆಯಂತೆ ಈ ಬಾರಿಯೂ ‘ ಶೇ.೫೦ರಷ್ಟು ಅಂಕಗಳನ್ನು ವಿವಿಗಳು ಅಳವಡಿಸಿಕೊಳ್ಳುವ ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಮತ್ತು ಉಳಿದ ಶೇ.೫೦ರಷ್ಟು ಅಂಕಗಳನ್ನು ವಿದ್ಯಾರ್ಥಿಗಳ ಹಿಂದಿನ ಸೆಮಿಸ್ಟರ್ ನ ನಿರ್ವಹಣೆಯ ಆಧಾರದ ಮೇಲೆ ಕೊಡಬಹುದು”

ವೇಳಾಪಟ್ಟಿಯ ಪ್ರಕಾರ, ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಆಗಸ್ಟ್ ೩೧ರ ಒಳಗಾಗಿ ಅಂತಿಮ ವರ್ಷದ/ ಸೆಮಿಸ್ಟರ್ ನ ಪರೀಕ್ಷೆಗಳನ್ನು ಆಫ್ ಲೈನ್/ ಆನ್ ಲೈನ್ ಅಥವಾ ಸಂಯೋಜಿತ ವಿಧಾನದ ಮೂಲಕ ಮುಗಿಸಿಕೊಳ್ಳಬೇಕು

ಮುಂದುವರೆದು, ಮಧ್ಯಂತರ ಸೆಮಿಸ್ಟರ್/ ವರ್ಷದ ವಿದ್ಯಾರ್ಥಿಗಳನ್ನು ಆಂತರಿಕ ಮೌಲ್ಯಮಾಪನ ಅಥವಾ ಹಿಂದಿನ ಸೆಮಿಸ್ಟರ್ ಪರೀಕ್ಷೆಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುವುದು ಈ ಮಾರ್ಗಸೂಚಿಗಳು ಂIಅಖಿಇ ಗು ಅನ್ವಯವಾಗುತ್ತದೆ. ಹಾಗಾಗಿ ಗಿಖಿU ಮತ್ತು ಆಖಿಇ ಸಹ ಈ ಮಾರ್ಗಸೂಚಿಗಳನ್ನು ವಿದ್ಯಾರ್ಥಿಗಳ ಹಿತಾಸಕ್ತಿಗಾಗಿ ಅನುಸರಿಸಬೇಕು!

ಈ ಹಿನ್ನಲೆಯಲ್ಲಿ ಪರೀಕ್ಷೆ ನಡೆಸುವುದು, ನೈತಿಕವಾಗಿ ಹಾಗೂ ಕಾನೂನಾತ್ಮಕವಾಗಿ ವಿದ್ಯಾರ್ಥಿ ವಿರೋಧಿಯಾಗುತ್ತದೆ! ಎಂದು ಹೇಳಿದರು.

ಬೇಡಿಕೆಗಳು :

೧.ಹಿಂದಿನ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವ ನಿರ್ಧಾರವನ್ನು ಕೈಬಿಡಿ. ಪ್ರಸಕ್ತ ಸೆಮಿಸ್ಟರ್ ನ ಪರೀಕ್ಷೆಯನ್ನು ಅಚ್ಚುಕಟ್ಟಾಗಿ ನಡೆಸಿ.

೨.ಪಿಯು ವಿದ್ಯಾರ್ಥಿಗಳ ಪರೀಕ್ಷೆ ರದ್ದುಗೊಳಿಸಿದಂತೆ ಡಿಪ್ಲೊಮಾ ವಿದ್ಯಾರ್ಥಿಗಳ ಆಡ್ ಸೆಮೆಸ್ಟರ್ ಪರೀಕ್ಷೆಯನ್ನು ರದ್ದುಗೊಳಿಸಿ. ಆಂತರಿಕ ಮೌಲ್ಯಮಾಪನ ಅಥವಾ ಇನ್ನಾವುದಾದರು ವೈಜ್ಞಾನಿಕ ಮಾನದಂಡದ ಮೂಲಕ ಮೌಲ್ಯಮಾಪನ ಮಾಡಿ.

೩.ಶಿಕ್ಷಣ ತಜ್ಞರು, ಉಪನ್ಯಾಸಕರು, ಪೋಷಕರು ಹಾಗೂ ವಿದ್ಯಾರ್ಥಿಗಳೊಡನೆ ಪ್ರಜಾತಾಂತ್ರಿಕ ಚರ್ಚೆಗಳನ್ನು ನಡೆಸಿ. ಶೈಕ್ಷಣಿಕ ವೇಳಾಪಟ್ಟಿ, ಪರೀಕ್ಷೆ, ಮೌಲ್ಯಮಾಪನ ಇವುಗಳ ಬಗ್ಗೆ ಒಂದು ವೈಜ್ಞಾನಿಕ -ಪ್ರಜಾತಾಂತ್ರಿಕ ನೀತಿಯನ್ನು ರೂಪಿಸಿ.

೪.ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಲಸಿಕೆ ನೀಡುವ ಮುನ್ನ ಆಫ್ ಲೈನ್ ತರಗತಿಗಳನ್ನು ಪ್ರಾರಂಭಿಸಬೇಡಿ.

೫.ಯುಜಿಸಿ ಹಾಗೂ ಸುಪ್ರೀಂ ಕೋರ್ಟ್ ಮಾರ್ಗಸೂಚಿ ಅನುಸರಿಸಿ!

ಈ ಸಂದರ್ಭದಲ್ಲಿ ಎಐಡಿಎಸ್‌ಓ ಜಿಲ್ಲಾ ಉಪಾಧ್ಯಕ್ಷರಾದ ಜೆ.ಸೌಮ್ಯ, ಜಿಲ್ಲಾ ಕಾರ್ಯದರ್ಶಿ ರವಿಕಿರಣ್.ಜೆ.ಪಿ, ಜಿಲ್ಲಾ ಸೆಕ್ರೆಟರಿಯಟ್ ಸದಸ್ಯರಾದ ಕಂಬಳಿ ಮಂಜುನಾಥ, ಸಿದ್ದು, ನಿಹರಿಕಾ ಮತ್ತು ವಿದ್ಯಾರ್ಥಿಗಳ ಹೋರಾಟ ಸಮಿತಿ ಸದಸ್ಯರು ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು

ವರದಿ:-ಮಹೇಶ್

LEAVE A REPLY

Please enter your comment!
Please enter your name here