ಡೆಂಗ್ಯೂ ಬಗ್ಗೆ ನಿರ್ಲಕ್ಷ್ಯ ಬೇಡ, ಡೆಂಗ್ಯೂ ನಿಯಂತ್ರಣ ಎಲ್ಲರ ಜವಾಬ್ದಾರಿಯಾಗಿದೆ ತಹಶಿಲ್ದಾರ್ ಹೆಚ್.ಜೆ ರಶ್ಮಿ.ಕರೆ

0
186

ಸಂಡೂರು:ಜುಲೈ.28. ಸಂಡೂರು ತಾಲೂಕಿನ ಆರೋಗ್ಯಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಡೆಂಗ್ಯೂ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯವರಿಗೆ ಡೆಂಗ್ಯೂ ನಿಯಂತ್ರಣ ಮಾಡಲು ಪ್ರತಿಯೊಬ್ಬರೂ ಶ್ರಮಿಸಬೇಕು, ಜನರಿಗೆ ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯ ನಿರಂತರ ಮಾಡಿದಲ್ಲಿ ರೋಗ ನಿಯಂತ್ರಣ ಮಾಡುವುದು ಸುಲಭ ಎಂದು ಮಾನ್ಯ ತಹಶಿಲ್ದಾರರಾದ ಹೆಚ್.ಜೆ ರಶ್ಮಿ ತಿಳಿಸಿದರು,

ಕೋವಿಡ್ ನಂತಹ ಮಾರಕ ರೋಗವನ್ನು ತಡೆಗಟ್ಟಲು ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಕೈಜೋಡಿಸಿದ ಹಾಗೆ ಡೆಂಗ್ಯೂ ನಿಯಂತ್ರಣಕ್ಕೂ ಕೈಜೋಡಿಸಿ ಎಂದು ಸೂಚಿಸಿದರು, ಲಾರ್ವಾ ಕಂಡು ಬಂದ ಸ್ಥಳಗಳನ್ನು ಗುರುತಿಸಿ ವಿಲೇವಾರಿ ಮಾಡದಿದ್ದರೆ ತಿಳಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆಗೆ ತಿಳಿಸಿದರು,

ತಾಲೂಕು ಆರೋಗ್ಯಾಧಿಕಾರಿ ಡಾ.ಕುಶಾಲ್ ರಾಜ್ ಮಾತನಾಡಿ ಡೆಂಗ್ಯೂ ಲಕ್ಷಣಗಳು, ಪರೀಕ್ಷೆ, ವರ್ಗಿಕರಣ,ಚಿಕಿತ್ಸೆ, ನಿಯಂತ್ರಣ ಕುರಿತು ಮಾಹಿತಿ ನೀಡಿದರು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಕಾರ್ಯಕ್ರಮ ನಡೆಸಿಕೊಟ್ಟರು ಇತರೆ ಇಲಾಖೆಯಿಂದ ಡೆಂಗ್ಯೂ ನಿಯಂತ್ರಣ ಕ್ರಮಗಳ ಕುರಿತು ವಿವರಿಸಿದರು,

ಈ ಕಾರ್ಯಕ್ರಮದಲ್ಲಿ ಮಾನ್ಯ ತಹಶಿಲ್ದಾರರಾದ ಹೆಚ್.ಜೆ ರಶ್ಮಿ, ತಾಲೂಕು ಆರೋಗ್ಯಾಧಿಕಾರಿ ಕುಶಾಲ್ ರಾಜ್, ತಾಲೂಕು ಮಟ್ಟದ ಕೃಷಿ ಇಲಾಖೆಯ ಮಂಜುನಾಥ ರೆಡ್ಡಿ, ಸಿ.ಡಿ.ಪಿ.ಒ ಪ್ರೇಮ್ ಕುಮಾರ್, ಬಿ.ಇ.ಒ ಹೆಚ್ ರಂಗಪ್ಪ, ತಾ.ಪಂ ಯಿಂದ ಬಿ.ಎಮ್ ಲೋಕೇಶ್ ಬಾಬು, ಡಾ.ಭರತ್ ಕುಮಾರ್,ಡಾ.ಹರೀಶ್, ಡಾ.ನವೀನ್ ಕುಮಾರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಎಮ್.ಟಿ.ಎಸ್ ಸಾಗರ್ ಕುಮಾರ್, ಬಂಡೇಗೌಡ, ರೀಟಾ, ವಿಜಯಲಕ್ಷ್ಮಿ, ಪದ್ಮಾವತಿ, ರೇಣುಕಾ, ವಿನೋದ್ ಕುಮಾರ್ ಆಶಾ ಕಾರ್ಯಕರ್ತೆ ಜಲಜಾಕ್ಷಿ, ಅಶ್ವಿನಿ,ಯೋಗೀಶ್ವರಿ, ಸರೊಜ, ಸುಭದ್ರಮ್ಮ ಇತರರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here