ಬೆಳೆ ವಿಮಾ ಯೋಜನೆಯಡಿಯಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಲು ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ್ ರೆಡ್ಡಿ ಕರೆ

0
123

ಸಂಡೂರು ;ಜು:31.2021-22ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ಮುಸುಕಿನ ಜೋಳ, ತೊಗರಿ, ಸೂರ್ಯಕಾಂತಿ, ಹತ್ತಿ, ಟೊಮೊಟೋ, ಈರುಳ್ಳಿ, ಮೆಣಸಿನಕಾಯಿ ಈ ಬೆಳೆಗಳಿಗೆ ವಿಮಾ ಯೋಜನೆಗಾಗಿ ರೈತರು ತಮ್ಮ ಹೆಸರನ್ನು ನೊಂದಾಯಿಸಲು ಜುಲೈ 31 ಕೊನೆಯ ದಿನವಾಗಿದೆ.

ಭತ್ತ,ರಾಗಿ, ಸಜ್ಜೆ, ನವಣೆ, ಶೇಂಗಾ, ಮಳೆ ಆಶ್ರಿತ ಬೆಳೆಗಳಿಗೆ ಈ ವಿಮಾಯೋಜನೆಗಳಿಗೆ ರೈತರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಆಗಸ್ಟ್ 16 ಕೊನೆಯ ದಿನವಾಗಿದೆ.ರೈತರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಬೆಳೆಯನ್ನು ವಿಮಾ ಯೋಜನೆಯಡಿಯಲ್ಲಿ ನೊಂದಾಯಿಸಬೇಕು ಎಂದು ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ ರೆಡ್ಡಿಯವರು ತಿಳಿಸಿದರು.

ತಾಲೂಕಿನ ಅಂತಾಪುರ,ಯು.ರಾಜಾಪುರ, ತುಮಟಿ ಗ್ರಾಮದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿ ಬೆಳೆ ವಿಮೆಯ ಸದುಪಯೋಗ ಮಾಡಿಕೊಳ್ಳಲು ಮನವಿ ಮಾಡಿದರಲ್ಲದೇ ಹೆಚ್ಚಿನ ಮಾಹಿತಿಗಾಗಿ ರೈತರು ಸಂಡೂರು ಕೃಷಿ ಅಧಿಕಾರಿ, ಚೋರನೂರು, ತೋರಣಗಲ್ಲು ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಲು ಕೋರಿದರು.

ಬೆಳೆಗಳ ವಿಮಾ ಯೊಜನೆ: ಮೆಕ್ಕೆಜೋಳ ಮಳೆ ಆಶ್ರಿತ 405 ನೀರಾವರಿ 478, ಜೋಳ ಮಳೆ ಆಶ್ರಿತ 275 ನೀರಾವರಿ 324, ಸಜ್ಜೆ ಮಳೆ ಆಶ್ರಿತ 235 ನೀರಾವರಿ 308, ನವಣೆ ಮಳೆ ಆಶ್ರಿತ 219, ತೊಗರಿ ಮಳೆ ಆಶ್ರಿತ 324 ನೀರಾವರಿ 372, ರಾಗಿ 308 ಮಳೆ ಆಶ್ರಿತ ನೀರಾವರಿ 340, ಸೂರ್ಯಕಾಂತಿ ಮಳೆ ಆಶ್ರಿತ 283 ನೀರಾವರಿ 340, ಶೇಂಗಾ ಮಳೆ ಆಶ್ರಿತ 372 ನೀರಾವರಿ 461.
ವಾಣಿಜ್ಯ ಬೆಳೆ : ಹತ್ತಿ ಮಳೆ ಆಶ್ರಿತ 870 ನೀರಾವರಿ 1356, ಈರುಳ್ಳಿ ಮಳೆ ಆಶ್ರಿತ 1416 ನೀರಾವರಿ 1518, ಕೆಂಪು ಮೆಣಸಿನಕಾಯಿ ಮಳೆ ಆಶ್ರಿತ 1457 ನೀರಾವರಿ 1943, ಟೊಮೊಟೋ 2388 (ನೀರಾವರಿ) ಭತ್ತ 696 ಈ ಎಲ್ಲಾ ಬೆಳೆಗಳಿಗೆ 1 ಎಕರೆಗೆ ಮಾತ್ರವಿರುತ್ತದೆ ಎಂದು ಸಂಜೆವಾಣಿ ವರದಿಗಾರರ ಜೊತೆ ಮಾತನಾಡುತ್ತಾ ಕೃಷಿ ಅಧಿಕಾರಿಗಳು ತಿಳಿಸಿದರು. ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆಗೆ ಶೇ. 5 ರಷ್ಟು ವಿಮಾ ಕೃಷಿ ಬೆಳೆಗೆ, ಶೇ 2 ರಷ್ಟು ಬೆಳೆ ಇರುವುದು ಎಂದು ತಿಳಿಸಿದರು. ಗ್ರಾಮೀಣ ಭಾಗದ ರೈತ ಬಾಂಧವರು ವಿಮಾ ಬೆಳೆಯ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here