ಗಜಲ್

0
116

ನೋಟದೊಳಗೆ ನೋಟ ಬೆರೆಸಿ ಒಲವು ಮೂಡಿತು
ಸವಿಮಾತಿನಲಿ ಜೇನು ಹರಿದು ಒಲವು ಮೂಡಿತು

ಘಳಿಗೆಗೊಮ್ಮೆ ಕೊರಳು ಕೊಂಕಿಸೆನ್ನ ಸೆಳೆಯುವೆ
ಚಲಿಸುವ ಕಡೆಗಣ್ಣ ನೋಟಕೆ ಒಲವು ಮೂಡಿತು

ನೀಲಿಯ ಸೀರೆಯ ತುಂಬ ಹೂ ಗೊಂಚಲ ಚಿತ್ರ ಪರಿಷೆ
ಮಧುರ ದನಿ ಮನ ತಣಿಸಿ ಒಲವು ಮೂಡಿತು

ಆಳ ನಿಲುಕದ ಆಂತರ್ಯ ಗಂಭೀರೆ ಮಂದಾರವದನೆ
ಎದುರಿನ ಮೊಗದಿ ನಗು ತರಿಸಿ ಒಲವು ಮೂಡಿತು

ಬಗೆಬಗೆಯಲಿ ಕಾಡುವೆ ಏಕೆ “ಚಿಜ್ಜ್ಯೋತಿ”ಯೆ
ನಿನ್ನ ಗೈರುಕೂಡ ನೆನಪು ಸ್ಪುರಿಸಿ ಒಲವು ಮೂಡಿತು.

ಜ್ಯೋತಿ ಬಿ ದೇವಣಗಾವ.

LEAVE A REPLY

Please enter your comment!
Please enter your name here