ತಾಳೂರು ಗ್ರಾಪಂ ಕಾರ್ಯಾಲಯದಲ್ಲಿ ಮೆದುಳು ಜ್ವರ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ,

0
550

ಸಂಡೂರು:ಎ:02:-ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮತ್ತು ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಸಂಡೂರು ಇವರ ಸಹಯೋಗದಲ್ಲಿ ತಾಲೂಕಿನ ತಾಳೂರು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಮೆದುಳು ಜ್ವರ ಕುರಿತು ಗ್ರಾಮ ಪಂಚಾಯತಿ ಅಧಿಕಾರಿಗಳು, ಸದಸ್ಯರು, ಮತ್ತು ಸಮುದಾಯವರಿಗೆ ಅಡ್ವಕೇಸಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು,

ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಮೆದುಳು ನಿಯಂತ್ರಣಕ್ಕೆ ಸಮುದಾಯದ ಸಹಭಾಗಿತ್ವ ಅತೀ ಮುಖ್ಯವಾದದ್ದು, ಮೆದುಳು ಜ್ವರ ಹದಿನಾಲ್ಕು ವರ್ಷದೊಳಗಿನ ಮಕ್ಕಳಲ್ಲಿ ಮಾತ್ರ ಕಂಡು ಬರುವಂತಹ ಕಾಯಿಲೆ, ಹಂದಿಗಳಲ್ಲಿ ಮತ್ತು ಬಿಳಿ ಹಕ್ಕಿಗಳಲ್ಲಿ ಇರುವ ಫ್ಲಾವಿ ವೈರಸ್‌ ನಿಂದ ಕ್ಯುಲೆಕ್ಸ್ ವಿಷ್ಣುವಿ ಪ್ರಬೇಧದ ಸೊಳ್ಳೆಗಳು ಕಚ್ಚಿ ಅದೇ ಸೊಳ್ಳೆಗಳು ಮಕ್ಕಳಿಗೆ ಕಚ್ಚಿದನಂತರ ರೋಗ ಲಕ್ಷಣಗಳು ಅವಧಿ ನಂತರ ವಿಪರೀತ, ಜ್ವರ, ತಲೆ ನೋವು, ವಾಂತಿ, ಬಾಯಲ್ಲಿ ನೊರೆ, ಕತ್ತು ಸೆಳೆತ, ಅಪಸ್ಮಾರ ಸ್ಥಿತಿ ತಲುಪು ಲಕ್ಷಗಳು ಮೆದುಳು ಜ್ವರದ ಮುಖ್ಯ ಲಕ್ಷಣಗಳಾಗಿವೆ, ಇದನ್ನು ಜಪಾನೀಸ್ ಎನ್ಸೆಫಾಲೈಟಿಸ್ ಎಂದು ಸಹಾ ಕರೆಯುವರು, ಮೆದುಳು ಜ್ವರ ಮಾರಣಾಂತಿಕ, ಇದು ನೇರವಾಗಿ ಮೆದುಳಿಗೆ ಸೋಂಕು ತಗುಲುವುದರಿಂದ ಬೇಗನೆ ಚಿಕಿತ್ಸೆ ದೊರೆಯದಿದ್ದರೆ ಮರಣ ಸಂಭವಿಸಬಹುದು,ಅಥವಾ ಅಂಗವಿಕಲತೆ ಆಗಬಹುದು, ಇದು ಮನುಷ್ಯರಿಂದ ಮನುಷ್ಯರಿಗೆ ಸೊಂಕು ಹರಡದು, ಮೆದುಳು ಜ್ವರ ಬರದಂತೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಒಂಬತ್ತನೇ ತಿಂಗಳಿಗೆ ಮೊದಲ ಡೋಸ್ ಹದಿನಾರು ತಿಂಗಳಿಗೆ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುತ್ತಿದೆ, ಲಸಿಕೆ ಪಡೆಯದ ಮಕ್ಕಳಿಗೆ ರೋಗ ಕಾಣಿಕೊಳ್ಳುವ ಸಂಭವ ಇರುತ್ತದೆ, ಅದಕಾರಣ ಎಲ್ಲಾ ಮಕ್ಕಳಿಗೂ ಮೆದುಳು ಜ್ವರದ ಲಸಿಕೆಯನ್ನು ಕಡ್ಡಾವಾಗಿ ಹಾಕಿಸಬೇಕು, ಮತ್ತು ಸ್ವಯಂ ರಕ್ಷಣೆ ಮಾಡಿಕೊಳ್ಳು ಸುಲಭ ಮಾರ್ಗಗಳಾದ ಸೊಳ್ಳೆ ಕಡಿತದಿಂದ ರಕ್ಷಿಸಿ ಕೊಳ್ಳುವುದು, ರಾತ್ರಿ ಮಲಗುವಾಗ ಕಡ್ಡಾಯವಾಗಿ ಸೊಳ್ಳೆ ಪರದೆಗಳನ್ನು ಕಟ್ಟಿ ಕೊಳ್ಳುವುದು, ಕ್ರೀಮ್ , ಕಾಯಿಲ್ ಗಳನ್ನು ಬಳಸುವುದು ಮುಖ್ಯವಾಗಿದ್ದು, ಮಕ್ಕಳಿಗೆ ಜ್ವರ ಕಂಡುಬಂದಾಗ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಬೇಕು, ಗ್ರಾಮ ಪಂಚಾಯತಿ ಕಡೆಯಿಂದ ಗ್ರಾಮದಲ್ಲಿರುವ ಹಂದಿಗಳನ್ನು ಗ್ರಾಮದಿಂದ ಮೂರು ಕಿ.ಮೀ ದೂರದಲ್ಲಿ ಸಾಕಲು ಸೂಚಿಸುವುದು, ಬಿಳಿ ಹಕ್ಕಿ,ಬಾತುಕೊಳಿ, ಪಾರಿವಾಳಗಳನ್ನು ಮನೆಯ ಹತ್ತಿರ ಸಾಕದಂತೆ ಜಾಗ್ರತೆ ವಹಿಸುವುದು, ಜನನಿಬಿಡ ಪ್ರದೇಶದಲ್ಲಿ ಮೆದುಳು ಜ್ವರ ಕುರಿತು ಜಾಗೃತಿ ಪೋಸ್ಟರ್ ಗಳನ್ನು ಅಳವಡಿಸುವುದು, ಕರಪತ್ರಗಳನ್ನು ಪ್ರಿಂಟ್ ಮಾಡಿಸಿ ಹಂಚುವುದು, ಚರಂಡಿ ಸರಾಗವಾಗಿ ಹರಿದು ಹೋಗುವಂತೆ ಮಾಡುವುದು, ಸೊಳ್ಳೆ ಉತ್ಪತ್ತಿಯಾಗುವುದನ್ನು ತಡೆಯುವುದು, ಬತ್ತದ ಗದ್ದೆಗಳನ್ನು ಗ್ರಾಮದ ಹತ್ತಿರ ಇರದಂತೆ ನೋಡಿಕೊಳ್ಳುವುದು, ಸೊಳ್ಳೆ ಸಾಂದ್ರತೆ ನೋಡಿ ಧೂಮಿಕರಣ ಮಾಡಿಸುವುದು, ತಗ್ಗು ಗುಂಡಿಗಳಲ್ಲಿ ನೀರು ನಿಲ್ಲದಂತೆ ಮಣ್ಣಿನಿಂದ ಮುಚ್ಚುವುದು, ಅಥವಾ ಮುಚ್ಚಲು ಸಾಧ್ಯವಾಗದ ಸ್ಥಳದಲ್ಲಿ ವೇಸ್ಟ್ ಆಯಿಲ್ ಹಾಕುವುದು ಮಾಡಿದಲ್ಲಿ ಸೊಳ್ಳೆ ನಿಯಂತ್ರಣ ಸಾಧ್ಯವಿದೆ, ಸಮುದಾಯ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸುವುದು, ಮಕ್ಕಳಿಗೆ ಲಸಿಕೆ ಕೊಡಿಸುವುದು ಎಲ್ಲರ ಕರ್ತವ್ಯವಾಗಬೇಕು ಎಂದು ತಿಳಿಸಿದರು,

ಈ ಸಂದರ್ಭ ಗ್ರಾಮದ ಪಂಚಾಯತಿ ಸದಸ್ಯರಾದ ಆಶಾಭಿ, ಶ್ರೀದೇವಿ, ಸಾವಿತ್ರಮ್ಮ, ಗ್ರಾಮದ ಮುಖಂಡರಾದ ಚಾಂದ್ ಬಾಷ, ರಾಘವೇಂದ್ರ ವಿ, ಪಂಪಾಪತಿ, ಭೀಮಲಿಂಗಪ್ಪ,ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರೋಗ್ಯ ನಿರೀಕ್ಷಾಧಿಕಾರಿ ಬಸವರಾಜ, ಆಶಾ ಕಾರ್ಯಕರ್ತೆ ಹಂಪಮ್ಮ, ಮಂಗಳಾ, ಎಲ್ಲಮ್ಮ, ಅಂಗನವಾಡಿ ಕಾರ್ಯಕರ್ತೆ ಅರುಣಾ, ಮಂಗಳಾ, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here