ಶ್ರೀರಂಗಪಟ್ಟಣ ದಸರಾ ಉದ್ಘಾಟನೆಗೆ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳಿಗೆ ಅಧಿಕೃತ ಆಹ್ವಾನ

0
100

ಮಂಡ್ಯ..ಅ.06 – ಇದೇ 9 ರಿಂದ ಆರಂಭವಾಗುವ ಶೀರಂಗ ಪಟ್ಟಣ ದಸರಾವನ್ನು ಉದ್ಘಾಟಿಸುವಂತೆ ಆದಿ ಚುಂಚನಗಿರಿ ಶ್ರೀಶ್ರೀಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಕೆ.ಸಿ. ನಾರಾಯಣ ಗೌಡರವರು ಇಂದು ಅಧಿಕೃತವಾಗಿ ಆಹ್ವಾನ ನೀಡಿದರು.

ಇಂದು ನಾಗಮಂಗಲದ ಆದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಸಚಿವರು ಶಾಲು ಹೊದಿಸಿ, ಫಲ ತಾಂಬೂಲ ನೀಡಿ ಗೌರವಿಸಿದರು. ಆನೆಯ ಕಲಾಕೃತಿಯ ಸ್ಮರಣಿಕೆ ನೀಡಿ ದಸರಾ ಉದ್ಘಾಟನೆಗೆ ಶ್ರೀಗಳನ್ನು ಆಹ್ವಾನಿಸಿದರು.

ಸ್ವಾಮೀಜಿಯವರಿಗೆ ದಸರಾ ಆಹ್ವಾನ ಪತ್ರಿಕೆ ನೀಡಿ, ಶ್ರೀಗಳಿಂದ ಶ್ರೀರಂಗಪಟ್ಟಣ ದಸರಾ ಪೋಸ್ಟರ್ ನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ನಾಡಿನ ಸಂಸ್ಕೃತಿಯ ಸಂಕೇತವಾಗಿರುವಂತಹ ದಸರಾವು ನಮ್ಮ ಶ್ರೀರಂಗಪಟ್ಟಣದಲ್ಲಿ ನಡೆಯುತ್ತದೆ. ಮೈಸೂರು ದಸರಾದ ರೀತಿಯಲ್ಲಿ ಮುಂಚೆ ಮೂಲವಾಗಿ ಪ್ರಾರಂಭವಾಗಿದ್ದು ನಮ್ಮ ಶ್ರೀರಂಗಪಟ್ಟಣದಲ್ಲಿ.
ಇದೇ 9 ರಂದು ಉದ್ಘಾಟನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ನಮ್ಮ ಹಿರಿಯರು ಅತ್ಯುತ್ತಮವಾದ ಸಂಸ್ಕೃತಿಯನ್ನು ನಮ್ಮ ನಾಡಿಗೆ ಬಿಟ್ಟು ಹೋಗಿದ್ದಾರೆ, ಆ ಸಂಸ್ಕೃತಿಯನ್ನು ಮುಂದಿನ ಪರಂಪರೆಗೆ ಬಡಿಸಿ-ಉಣಿಸಿ, ಆಚರಿಸಿಕೊಂಡು- ಉಳಿಸಿಕೊಂಡು ಹೋಗುವಂತದ್ದು ನಮ್ಮ ಪರಂಪರಾಗತ ಸಂಸ್ಕೃತಿ ಎಂದರು.

ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ನಾಡಿನ ಭಕ್ತಾದಿಗಳು, ಸಮಸ್ತ ಸಾರ್ವಜನಿಕರು ಆಗಮಿಸಿ ಸರ್ಕಾರ ಮತ್ತು ಜಿಲ್ಲಾಡಳಿತ ಹಮ್ಮಿಕೊಂಡಿರುವ ಕ್ರೀಡೆ ಮತ್ತು ಇತರೆ ಮನೋರಂಜನ ಕಾರ್ಯಕ್ರಮಗಳನ್ನು ನೋಡಿ ಆನಂದಿಸಿ ಎಂದರು.

ನಂತರ ಮಾತನಾಡಿದ ಸಚಿವರು ಮೈಸೂರು ದಸರಾದ ಮೂಲ ನೆಲೆ ಶ್ರೀರಂಗಪಟ್ಟಣ, ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕೊರೋನಾದಿಂದ ಶ್ರೀರಂಗಪಟ್ಟಣ ದಸರಾವನ್ನು ಸರಿಯಾಗಿ ಆಚರಿಸಲು ಆಗಿರಲಿಲ್ಲ, ಆದರೆ ಈ ಬಾರಿ ಅರ್ಥಪೂರ್ಣವಾಗಿ ಮತ್ತು ಸಾಂಪ್ರದಾಯಿಕವಾಗಿ ದಸರಾವನ್ನು ಆಚರಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ತಾವುಗಳು ಆಗಮಿಸಿ ಈ ಬಾರಿಯ ದಸರಾವನ್ನು ಉದ್ಘಾಟಿಸಿ, ಜಂಬೂಸವಾರಿಗೆ ಚಾಲನೆ ನೀಡಿ ಎಂದು ಶ್ರೀ ಗಳನ್ನು ಅಧಿಕೃತವಾಗಿ ಆಹ್ವಾನಿಸಿದರು.

ಮಹಾಮಾರಿ ಕರೋನ ಕಾರಣದಿಂದ ನಾವು ಈಗಾಗಲೇ ಸಾಕಷ್ಟು ಸಾವು-ನೋವುಗಳನ್ನು ಅನುಭವಿಸಿದ್ದೇವೆ, ಇದು ಮತ್ತೆ ಮಹಾಮಾರಿ ಆಗಮಿಸದಿರಲಿ ಎಂಬ ಉದ್ದೇಶದಿಂದ ವಿಶ್ವಕ್ಕೆ ಒಳಿತಾಗಲಿ ಎಂಬ ಮನದಾಸೆಯಿಂದ ಶ್ರೀ ನಿರ್ಮಲಾನಂದ ಸ್ವಾಮಿಗಳ ದಸರಾವನ್ನು ಉದ್ಘಾಟಿಸಲಿದ್ದಾರೆ ಎಂದರು.

ನಾಡಹಬ್ಬ-ನಾಡ ದೇವತೆಯ ಆಶೀರ್ವಾದದಿಂದ ಈಗ ತಾನೆ ಅಧಿಕಾರಿವಹಿಸಿಕೊಂಡಿರುವ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬೇರೆ ರಾಜ್ಯಗಳಿಂತಲೂ ಉತ್ತಮವಾಗಿ ರಾಜ್ಯವನ್ನ ಕೊಂಡೊಯ್ಯಲಿ ಅಂತ ಹರಿಸುತ್ತೆನೆ ಎಂದರು.

ಈ ಸಂದರ್ಭದಲ್ಲಿ ನಾಗಮಂಗಲ ಶಾಸಕರಾದ ಸುರೇಶ್ ಗೌಡ, ಜಿಲ್ಲಾಧಿಕಾರಿ ಎಸ್. ಅಶ್ವತಿ, ಪಾಂಡವಪುರ ಉಪವಿಭಾಗಧಿಕಾರಿ ಶಿವನಂದಮೂರ್ತಿ, ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾ ಎನ್ ರವೀಂದ್ರ, ನಾಗಮಂಗಲ ತಹಶೀಲ್ದಾರ್ ಕುಂ ಇ್ ಅಹಮ್ಮದ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here