ಕಾನಹೊಸಹಳ್ಳಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ- ಪದಾಧಿಕಾರಿಗಳ ಸಭೆ.!

0
155

ವಿಜಯನಗರ:ಅ:11:- ಕೂಡ್ಲಿಗಿ ತಾಲ್ಲೂಕಿನ ಕಾನಹೊಸಹಳ್ಳಿ ಕೆ.ಎಂ.ಎಸ್ ಕಾಲೇಜಿನ ಆವರಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ. ಹೊಸಹಳ್ಳಿ ಹೋಬಳಿ ವತಿಯಿಂದ ಗ್ರಾಮ ಶಾಖೆಗಳ ಸಾಮಾನ್ಯ ಸಭೆ ಜರಗಿತು, ಪತ್ರಕರ್ತ ಹಾಗೂ ದಲಿತ ಹೋರಾಟಗಾರ ಸಿದ್ದಾಪುರ ಡಿ.ಎಂ.ಈಶ್ವರಪ್ಪ ಮಾತನಾಡಿ, ಕರೋನ ಹೆಮ್ಮಾರಿ ವ್ಯಾಪಕವಾಗಿ ಹರಡಿ ತುಂಬಾ ಜನಗಳನ್ನು ಬಲಿತೆಗೆದುಕೊಂಡಿದೆ. ಇದರಿಂದಾಗಿ ಬಹಳಷ್ಟು ಕುಟುಂಬಗಳು ಸಂಕಷ್ಟಕ್ಕೀಡಾಗಿದ್ದಾರೆ. ಮೂರನೇ ಅಲೆಯ ಮುಂಜಾಗ್ರತೆ ಕ್ರಮವಾಗಿ ಆರೋಗ್ಯ ಇಲಾಖೆವಯವರು, ಮನೆಮನೆಗೆ ತೆರಳಿ ಕೋವಿಡ್ ವ್ಯಾಕ್ಸಿನ್ ಲಸಿಕೆಯನ್ನು ಹಾಕುತ್ತಿದ್ದಾರೆ. ಪ್ರತಿಯೊಬ್ಬರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು. ಅಭಿವೃದ್ಧಿಗೆ ಶಿಕ್ಷಣ ಸಂಘಟನೆ ಅತ್ಯವಶ್ಯ,ದಲಿತ ಸಂಘಟನೆ ಬಲಗೊಳಿಸಬೇಕಿದ್ದು ಅದಕ್ಕಾಗಿ ಯುವ ಪೀಳಿಗೆ ಮೊದಲು ಡಾ.ಬಿ. ಆರ್.ಅಂಬೇಡ್ಕರ್ ಕುರಿತು ಅಧ್ಯಯನ ಮಾಡಬೇಕು. ಪ್ರತಿಯೊಬ್ನರು ಅವರ ಆದರ್ಶಗಳನ್ನು ಮೈಗೂಡಿಸಿ ಕೊಳ್ಳಬೇಕಿದೆ ಅಂದಾಗ ಮಾತ್ರ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಲು ಸಾಧ್ಯ ಎಂದರು.

ಸಭೆಯ ಅಧ್ಯಕ್ಷತೆಯನ್ನು ಶಿಕ್ಷಕ ಗುರುಮೂರ್ತಿ ವಹಿಸಿದ್ದರು, ಪ್ರಾಸ್ತಾವಿಕವಾಗಿ ಪತ್ರಕರ್ತ ಹಾಗೂ ದಲಿತ ಮುಖಂಡರಾದ ಡಿ.ಎಂ. ಈಶ್ವರಪ್ಪ ಸಿದ್ದಾಪುರ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಇತ್ತೀಚಿಗೆ ಎರಡು ವರ್ಷಗಳಿಂದ ಕೋವಿಡ್ 19 ಕರೋನ ಹೆಮ್ಮಾರಿ ವ್ಯಾಪಕವಾಗಿ ಹರಡಿ ಸುಮಾರು ಜನಗಳನ್ನು ಬಲಿತೆಗೆದುಕೊಂಡಿದ್ದು ಜನರು ಸಂಕಷ್ಟಕ್ಕೀಡಾಗಿದ್ದಾರೆ. ವಿಜಯನಗರ ಜಿಲ್ಲಾ ಸಂಚಾಲಕ ಎಸ್.ದುರುಗೇಶ್ ಮಾತನಾಡಿ, ಶಾಲೆಗಳಲ್ಲಿ, ವಿದ್ಯಾರ್ಥಿನಿಲಯಗಳಲ್ಲಿ ಎಸ್.ಸಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿದೆ. ಪೋಷಕರು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸ್ವಲ್ಪ ಕಾಳಜಿವಹಿಸಬೇಕಾಗಿದೆ, ದಲಿತರೆಂದರೆ ಎಸ್ಸಿ ಹಾಗೂ ಎಸ್ಟಿ ಮಾತ್ರವಲ್ಲ. ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ, ಆರ್ಥಿಕವಾಗಿ ಶೋಷಣೆಗೆ ಒಳಗಾದವರೆಲ್ಲರೂ ದಲಿತರಾಗಿದ್ದಾರೆ, ದಲಿತ ಸಂಘರ್ಷ ಸಮಿತಿ ಶಾಖೆಯಲ್ಲಿ ಶೋಷಣೆ ಗೊಳಗಾದರೆಲ್ಲರನ್ನು ಸೇರ್ಪಡೆ ಮಾಡಿಕೊಂಡು ಸಂಘಟಿಸಬೇಕೆಂದರು.

ಸಂಘಟನೆಗಳ ಪದಾಧಿಕಾರಿಗಳು ಗ್ರಾಮದಲ್ಲಿನ ದಲಿತರ ಕುಂದುಕೊರತೆಗಳ ಕುರಿತು, ಮೂಲಭೂತ ಸೌಕರ್ಯಗಳ ಕುರಿತು ವಿಚಾರಣೆ ಮಾಡಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು. ಕಾಲೇಜಿನ ಕಾರ್ಯದರ್ಶಿ ಹರ್ಷವರ್ಧನ್, ಬಣವಿಕಲ್ಲು ಸಂಘಟನಾ ಸಂಚಾಲಕ ಹಾಗೂ ಪತ್ರಕರ್ತ ಚೌಡೇಶ್, ನಡವಲ ಮನೆ ನಾಗರಾಜ್ ಸಭೆಯಲ್ಲಿ ಮಾತನಾಡಿದರು. ಕಲ್ಲಹಳ್ಳಿ ತಿಪ್ಪೇಸ್ವಾಮಿ ಸ್ವಾಗತಿಸಿದರು,
ತಿಪ್ಪೆಹಳ್ಳಿ ಮಾರೇಶ್ ವಂದಸಿದರು. ಜಿಲ್ಲಾ ಸಂಘಟನಾ ಸಂಚಾಲಕ ಟಿ.ಗಂಗಾಧರ, ತಾಲೂಕು ಸಂಘಟನಾ ಸಂಚಾಲಕ ಮಾಕನಡಕು ಕುಮಾರ, ಕಾನಮಡುಗು ದುರ್ಗೇಶ್, ಹೊಸಹಳ್ಳಿ ಬೋರಪ್ಪ, ಹನುಮಂತಪ್ಪ, ಶಶಿಕುಮಾರ, ನೀರಗಂಟಿ ಸುರೇಶ್, ತಿಪ್ಪೇಸ್ವಾಮಿ, ಪತ್ರಕರ್ತ ಮಂಜುನಾಥ ಹೂಡೇಂ, ಮುಖಂಡರಾದ ಬಸವರಾಜ, ಸೇರಿದಂತೆ ಹೊಸಹಳ್ಳಿ ಹೋಬಳಿ ದಲಿತ ಸಂಘರ್ಷ ಸಮಿತಿ ಗ್ರಾಮ ಘಟಕಗಳ ಪದಾಧಿಕಾರಿಗಳು. ಸದಸ್ಯರು, ದಲಿತ ಮುಖಂಡರು ಕೆಲ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ವರದಿ:-ಮಂಜುನಾಥ್ ಹೆಚ್

LEAVE A REPLY

Please enter your comment!
Please enter your name here