ಹೋರಾಟಕ್ಕೆ ಸಜ್ಜಾದ ಸರಕಾರಿ ನೌಕರರು..!!

0
892

ಸಂಡೂರು:ಅ:12:- ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ..

1 ) ನೂತನ ಪಿಂಚಣಿ ಯೋಜನೆ ರದ್ದು ಪಡಿಸಿ ಹಳೆ ಪಿಂಚಣಿ ಮರು ಜಾರಿ ಮಾಡುವುದು

2) ವೇತನ ತಾರತಮ್ಯ ಸರಿಪಡಿಸಲು 7ನೆಯ ವೇತನ ಆಯೋಗ ರಚನೆ ಮಾಡುವುದು

3) ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಕ್ರಮ ವಹಿಸುವುದು

4) ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಉಪನ್ಯಾಸಕರ ವರ್ಗಾವಣೆ ಕಾಯ್ದೆ ಜಾರಿ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಪದವೀಧರ ಶಿಕ್ಷಕರ,ಮುಖ್ಯ ಶಿಕ್ಷಕರ ವೇತನ ತಾರತಮ್ಯ ಹಾಗೂ ಗ್ರಾಮೀಣ ಕೃಪಾಂಕ ಸಹಿತ ಮತ್ತು ಕೃಪಾಂಕ ರಹಿತ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯಿಸಿ ರಾಜ್ಯ ಸಂಘದ ನಿರ್ದೇಶನದಂತೆ ನಮ್ಮ ಸಂಡೂರು ತಾಲೂಕಿನಲ್ಲಿಯೂ ಕೂಡ ಸರಕಾರದ ಗಮನ ಸೆಳೆಯಲು ನವಂಬರ ಮಾಹೆಯಲ್ಲಿ ಶಾಸಕರು ವಿಧಾನ ಪರಿಷತ್ ಸದಸ್ಯರು ಮತ್ತು ಸಂಸದರಿಗೆ ಮನವಿಯನ್ನು ಸಲ್ಲಿಸುವುದು,

ಡಿಸೆಂಬರ್ ತಿಂಗಳಲ್ಲಿ ತಹಶೀಲ್ದಾರರು ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದು, 2022 ಜನೆವರಿ ತಿಂಗಳಲ್ಲಿ ಎಲ್ಲ ಸರಕಾರಿ ನೌಕರರ ಮೂಲಕ 3 ಮೂರು ದಿನಗಳ ಕಾಲ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವುದು ಆದಾಗ್ಯೂ ನಮ್ಮ ಬೇಡಿಕೆಗಳಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ರಾಜ್ಯ ಸಂಘದ ನಿರ್ದೇಶನ ಆಧರಿಸಿ ಎಲ್ಲ ವೃಂದ ಸಂಘಗಳ ಸಭೆಗಳನ್ನು ಏರ್ಪಡಿಸಿ ರಾಜ್ಯ ಸಂಘದ ರಾ ಶ್ರೀ ಸಿ ಎಸ್ ಷಡಕ್ಷರಿ ರವರ ನಿರ್ದೇಶನದಂತೆ ನಿರ್ಣಾಯಕ ಹೋರಾಟಗಳನ್ನು ನಮ್ಮ ನೌಕರ ಸಂಘದ ಎಲ್ಲ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ವೃಂದ ಸಂಘಗಳ ಎಲ್ಲ ಹಂತದ ಪ್ರತಿನಿಧಿಗಳು ಸಮಸ್ತ ನೌಕರರು ಸೇರಿಕೊಂಡು ಹಂತ ಹಂತವಾಗಿ ಸರಕಾರಿ ನೌಕರರ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹೋರಾಟ ಮಾಡಲಾಗುವುದು ಎಂದು ಸಂಡೂರು ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಚೌಕಳಿ ಪರಶುರಾಮರವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಶ್ರೀಮತಿ ಉಲ್ಲೇಶಿ ಗೌರವ ಅಧ್ಯಕ್ಷರಾದ ಸಿದ್ದಣ್ಣ ಯಾಳವಾರ ರಾಜ್ಯ ಪರಿಷತ್ ಸದಸ್ಯರಾದ ಈಶ್ವರಪ್ಪ ಖಜಾಂಚಿ ಗಳಾದ ಶಿವಕುಮಾರ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here