ಬಿ.ಜಿ.ಕೆರೆಯಲ್ಲಿ ಕಲಾತಾರೆ ಕರೋಕೆ ಗಾಯನ ಸ್ಟುಡಿಯೋದ 1 ವರ್ಷದ ಸವಿ ನೆನಪಿನ ಕಾರ್ಯಕ್ರಮ.

0
149

ಚಿತ್ರದುರ್ಗ:ಸೆ:18:-ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಬಿ.ಜಿ.ಕೆರೆ ಕಲಾತಾರೆ ಕರೋಕೆ ಗಾಯನ ಸ್ಟುಡಿಯೋದ ಒಂದು ವರ್ಷದ ಸವಿ ನೆನಪಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಸಂಗೀತ ಶಿಕ್ಷಕರಾದ ಕೆ.ಓ. ಶಿವಣ್ಣ ಸಂಗೀತ ಅಳಿವು ಉಳಿವಿನ ಬಗ್ಗೆ ಮಾತನಾಡಿದರು, ಹಾಗೂ ರಂಗಭೂಮಿ ಸಂಗೀತ ನಿರ್ದೇಶಕರಾದ ರಾಮಲಿಂಗಪ್ಪ, ಮೊಳಕಾಲ್ಮೂರು ರಕ್ಷಣಾ ವೇದಿಕೆ ಅಧ್ಯಕ್ಷರಾದ ಸೂರಮ್ಮನಹಳ್ಳಿ ನಾಗರಾಜ್, ಉಪಾಧ್ಯಕ್ಷ ಅತಾವುಲ್ಲಾಖಾನ್, ಗಾಯಕರಾದ ಶಿವು ಕೋನಸಾಗರ, ಯರ್ರಿಸ್ವಾಮಿ ಹಿರೇಕೆರೆಹಳ್ಳಿ, ಯರ್ರಿಸ್ವಾಮಿ ಕೋನಸಾಗರ, ನಾಗಭೂಷಣ ಉಡೆವು, ಡಿಪಿ. ಬಸವರಾಜ್, ರಮೇಶಗೌಡ, ಸಿ.ಓ. ನಾಗೇಶ್ ಮುತ್ತಿಗಾರಹಳ್ಳಿ, ಪತ್ತೆಸಾಬ್, ಸತೀಶ್, ನೆರಲಗುಂಟೆ ಎಂ.ಬಿ. ಬೋರಣ್ಣ, ಕಾತಪ್ಪನಹಟ್ಟಿ ಲೆಜೇಂಡ್ ಬೋರಣ್ಣ, ಗೋಂಚಿಗಾರ ರುದ್ರಮುನಿ ತಳಕು, ಗಾಯಕಿ ನಾಗವೀಣಾ ಹಿರಿಯೂರು ಮುಂತಾದವರು ಹಾಜರಿದ್ದರು, ರಂಗಭೂಮಿ ಕಲಾವಿದರು ಮತ್ತು ಗಾಢವಾಗಿ ಸಂಗೀತಾ ಪರಿಷತ್ತು ಮೊಳಕಾಲ್ಮೂರು ಘಟಕದ ಅಧ್ಯಕ್ಷರಾದ ಬಿ.ಜಿ. ಕೆರೆ ಉಪ್ಪಿ ಕಾರ್ಯಕ್ರಮ ನಿರೂಪಣೆ ಮಾಡಿದರು.

LEAVE A REPLY

Please enter your comment!
Please enter your name here