ಹೊಸದರೋಜಿ ಗ್ರಾಮದಲ್ಲಿ ಕ್ಷಯರೋಗದ ಜನಾಂದೋಲನ ಕಾರ್ಯಕ್ರಮ

0
155

ಸಂಡೂರು:ಆಗಸ್ಟ್ 05: ಹೊಸದರೋಜಿ: ಕ್ಷಯರೋಗ ಮುಕ್ತ ಗ್ರಾಮ ಮಾಡಲು ಸಮೀಕ್ಷೆಗೆ ಕೈಜೋಡಿಸಿ ಗ್ರಾಮ ಪಂಚಾಯತಿ ಸದಸ್ಯೆ ಶ್ರೀಮತಿ ಅಂಜಿನಮ್ಮ, ಕ್ಷಯರೋಗ ಸಮೀಕ್ಷೆ ಕುರಿತು ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡುತ್ತ..
ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಆರೋಗ್ಯದ ಬಗ್ಗೆ ಅರಿವು ನೀಡುವ ಕಾರ್ಯವಾಗಬೇಕು,ಜನರು ಸ್ವಚ್ಛತೆ ಗಮನ ಹರಿಸುವ ಹಾಗೆ ಆಗಬೇಕು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಇಂದಿನಿಂದ ಹತ್ತು ದಿನಗಳ ತಾಲೂಕಿನ ಆಯ್ದ ಗ್ರಾಮಗಳಲ್ಲಿ ಕ್ಷಯರೋಗದ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ, ಸ್ಲಮ್, ಹೆಚ್ಚು ಜನಸಂಖ್ಯೆ ವಾಸಿಸುವ, ಕಾರ್ಖಾನೆಗಳಲ್ಲಿ ಕೆಲಸಮಾಡುವ,ಹಾಗೂ ಈಗಾಗಲೇ ಕ್ಷಯರೋಗದಿಂದ ಚಿಕಿತ್ಸೆ ಪಡೆದ ರೋಗಿಗಳ ಮನೆಗಳ ಸುತ್ತಮುತ್ತ ವಾಸಿಸುವ ಜನಸಂಖ್ಯೆ,ಕೋವಿಡ್ ನಿಂದ ವಾಸಿಯಾಗಿ ಬಂದು ಕೆಮ್ಮು ಕಡಿಮೆಯಾಗದಿರುವ ವ್ಯಕ್ತಿಗಳನ್ನು ಸಮೀಕ್ಷೆಯನ್ನು ಮಾಡಿ ತಪಾಸಣೆಗೆ ಒಳಪಡಿಸಿ ದೃಡಪಟ್ಟರೆ ಚಿಕಿತ್ಸೆ ಪ್ರಾರಂಭಿಸಲಾಗುವುದು,

2025 ರ ವೇಳೆಗೆ ಕ್ಷಯರೋಗ ಮುಕ್ತ ದೇಶ ನಿರ್ಮಾಣದ ಕಡೆ ಹೆಚ್ಚು ಒತ್ತು ಕೊಟ್ಟು ಬೇಗನೇ ಪತ್ತೆಹಚ್ಚುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ, ಕ್ಷಯರೋಗಕ್ಕೆ ಕಾರಣವಾಗುವ ಮೈಕೋಬ್ಯಾಕ್ಟೇರಿಂ ಟ್ಯುಬೆರ್ ಕ್ಯೂಲೈ ಬ್ಯಾಕ್ಟೀರಿಯಾವು ರೋಗಿ ಕೆಮ್ಮಿದಾಗ ತುಂತುರು ಹನಿಗಳ ಮುಖಾಂತರ ಒಬ್ಬರಿಂದೊಬ್ಬರಿಗೆ ಹರಡುತ್ತದೆ, ಮಾನವನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ರೋಗದ ಲಕ್ಷಣಗಳು ಕಾಣಿಸಿಕೊಂಡು ಕೆಮ್ಮು, ಜ್ವರ, ತೂಕ ಕಡಿಮೆಯಾಗುವುದು, ಹಸಿವೆಯಾಗದಿರುವುದು, ಕೆಮ್ಮಿದಾಗ ಕಫದಲ್ಲಿ ರಕ್ತ ಬೀಳುವುದು

ಇಂತಹ ಲಕ್ಷಣಗಳ ಕಂಡು ಬಂದು ರೋಗ ಉಲ್ಬಣವಾಗುವುದು,ಶ್ವಾಸಕೋಶದ ಕ್ಷಯ ಮತ್ತು ದೇಹದ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳುವ ಶ್ವಾಸಕೋಶೇತರ ಕ್ಷಯವೆಂದು ವಿಂಗಡಿಸಿ ಕ್ಷಯರೋಗಕ್ಕೆ ಆರರಿಂದ ಎಂಟು ತಿಂಗಳ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಸಂಪೂರ್ಣ ಗುಣಮುಖವಾಗುವುದು,

ಒಂದು ವೇಳೆ ಡ್ರಗ್ ರೆಜಿಸ್ಟೆನ್ಸ್ ಬಂದರೆ ಎಮ್.ಡಿ.ಆರ್, ಅಥವಾ ಎಕ್ಸ್.ಡಿ.ಆರ್ ಕ್ಷಯವಾಗಿ ಪರಿಣಮಿಸಬಹುದು ನಿರ್ಲಕ್ಷ ಮಾಡದೇ ಜನರು ಯಾವುದೇ ಲಕ್ಷಣಗಳು ಇದ್ದಲ್ಲಿ ತಕ್ಷಣ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ತಿಳಿಸಿದಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತದೆ, ದೃಢಪಟ್ಟರೆ ಪೂರ್ಣ ಚಿಕಿತ್ಸೆ ಮೇಲ್ವಿಚಾರಣೆಯಲ್ಲಿ, ಚಿಕಿತ್ಸಾ ಅವಧಿಯಲ್ಲಿ ಪೌಷ್ಟಿಕ ಆಹಾರಕ್ಕಾಗಿ ಡಿ.ಬಿ.ಟಿ ಮುಖಾಂತರ 500/- ರೂ ಗಳನ್ನು ರೋಗಿಯ ಬ್ಯಾಂಕ್ ಅಕೌಂಟ್ ಜಮೆ ಮಾಡಲಾಗುವುದು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು,

ಜಾಗೃತಿ ಜಾಥದಲ್ಲಿ ದರೋಜಿ ಗ್ರಾಮ ಪಂಚಾಯತಿ ಸದಸ್ಯೆ ಅಂಜಿನಮ್ಮಬಾಬಯ್ಯ,ತಾಲೂಕಿನ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,ಆರೋಗ್ಯ ನಿರೀಕ್ಷಣಾಧಿಕಾರಿ ಇಸ್ಮಾಯಿಲ್, ಸತ್ಯಮ್ಮ,ರೇಣುಕಾ, ಆಶಾ ಸುಲಭಗಾರರಾದ ಈರಮ್ಮ,ಆಶಾ ಕಾರ್ಯಕರ್ತೆ ಲತಾ, ಪದ್ಮಾವತಿ, ಸ್ತ್ರೀ ಶಕ್ತಿ ಗುಂಪಿನ ಮಹಿಳೆಯರಾದ ಮೀನಾಕ್ಷಮ್ಮ,ಮಲ್ಲಮ್ಮ, ಕೊಲ್ಲಾರಮ್ಮ,ಕೋಮಲ,ಸಂತೋಷಗೌಡ ಇತರರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here