ಸಂಡೂರು ಜೆಡಿಎಸ್ ಕಛೇರಿಯಲ್ಲಿ ಶ್ರೀ ಭಕ್ತ ಕನಕದಾಸರ 532ನೇ ಜಯಂತ್ಯೋತ್ಸವ ಆಚರಣೆ.

0
145

ಸಂಡೂರು:ನ:22:-ಸಂಡೂರು ಪಟ್ಟಣದ, ಜೆಡಿಎಸ್ ಪಕ್ಷದ ಸಂಡೂರು ವಿಧಾನಸಭಾಕ್ಷೇತ್ರದ ಅಧ್ಯಕ್ಷರಾದ ಶ್ರೀ ಎನ್.ಸೋಮಪ್ಪ ಕುರೆಕುಪ್ಪ ಹಾಗೂ ಸಮಸ್ತ ಜೆಡಿಎಸ್ ನ ಪದಾಧಿಕಾರಿಗಳು ಸೇರಿ ಸಂತ ಶ್ರೇಷ್ಠ ಕವಿ ಶ್ರೀ ಭಕ್ತ ಕನಕದಾಸರ 532ನೇ ಜಯಂತ್ಯೋತ್ಸವವನ್ನ ಪಕ್ಷದ ಕಛೇರಿಯಲ್ಲಿ ಆಚರಿಸಲಾಯಿತು

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಎನ್ ಸೋಮಪ್ಪ ಅವರು ಮಾತನಾಡಿ ಕುಲ ಕುಲವೆಂದು ಬಡಿದಾಡದಿರಿ.. ಎಂದು ಕನಕದಾಸರು ನೀಡಿದ ಸಂದೇಶ ಇಂದಿಗೂ ಪ್ರಸ್ತುತ. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಲಾಗಿದೆ. ಆದರೆ ನಮ್ಮ ಮನಸ್ಥಿತಿಗಳು ಬದಲಾವಣೆಯಾಗಬೇಕು, ಕನಕದಾಸರು ದೇವರು ಭಕ್ತಿಗೆ ಮಾತ್ರ ಒಲಿಯುತ್ತಾನೆ ಹೊರತು ಜಾತಿಗಲ್ಲ ಎಂಬುದನ್ನು ತೋರಿಸಿದ್ದಾರೆ. ಅದೇ ರೀತಿ ಓಬವ್ವ ಸ್ತ್ರೀ ಶಕ್ತಿ ಹಾಗೂ ಧೈರ್ಯಕ್ಕೆ ಪ್ರತಿರೂಪವಾಗಿದ್ದಾರೆ ಅವರ ಆದರ್ಶಗಳು ಎಲ್ಲರೂ ಪಾಲಿಸೋಣ ಎಂದು ತಿಳಿಸಿದರು.

ಕನಕದಾಸರು 16 ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯ ಹಾದಿ ತೋರಿದವರು. ಹುಟ್ಟಿನಲ್ಲಿ ಕೆಳ ವರ್ಗದಲ್ಲಿದ್ದರೂ, ನಂತರ ಜ್ಞಾನ ಸಂಪಾದಿಸಿ ಮನ ಪರಿವರ್ತನೆಗೊಂಡು ಭಕ್ತಿ ಮಾರ್ಗದಲ್ಲಿ ಸಾಗಿ ಸಮಾಜ ಸುಧಾರಣೆಗೆ ಪ್ರೇರಣೆಯಾದರು ಕನಕದಾಸರು ಎಲ್ಲಾ ಜನ ಸಮುದಾಯಗಳಿಗೂ ಸೇರಿದ ಮಹಾನ್ ಪುರುಷರಾಗಿದ್ದಾರೆ ಎಂದು ಹೇಳಿದರು.

ತದನಂತರ ಚೋರನೂರು ಹೋಬಳಿಯ ಒಬಳಾಪುರ ರಮೇಶ್, ಶೆಲಿಯಪ್ಪಹಳ್ಳಿಯ ಮಂಜು,ಅಂಜಿನಿ, ಬಸವರಾಜ, ಹಾಗೂ ಅನೇಕ ಯುವಕರು ಪಕ್ಷದ ಸಿದ್ದಾಂತಗಳನ್ನ ಮೆಚ್ಚಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನ ತೊರೆದು ಅಧ್ಯಕ್ಷರಾದ ಎನ್. ಸೋಮಪ್ಪ ಹಾಗೂ ಪಕ್ಷದ ಪದಾಧಿಕಾರಿಗಳ ಮತ್ತು ಕೆ.ಪ್ರಹ್ಲಾದ್ ನಲ್ಲಬಂಡೆ. ತಾಲೂಕು ವಿಧ್ಯಾರ್ಥಿ ಘಟಕದ ಅಧ್ಯಕ್ಷರು ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು

ಈ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ಕಮತೂರ್ ಮಲ್ಲೇಶ್, ಪ್ರದಾನ ಕಾರ್ಯದರ್ಶಿ ಸೈಯದ್ ಹುಸೇನ್ ಪೀರಾ ದೊಡ್ಡಮನೆ,
ತಾಲೂಕು ನಗರ ಘಟಕ ಯುವ ಅಧ್ಯಕ್ಷರು ಶಫಿ ಸಂಡೂರು,ರೆಹಮತ್ ತಾಲೂಕು ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿಗಳು ಕೃಷ್ಣಾನಗರ,ಸಂಡೂರು ಹೊಬಳಿ ಕಾರ್ಮಿಕ ಘಟಕದ ಕಾರ್ಯಧ್ಯಕ್ಷರಾದ ಖಾಜಹುಸೇನ್, ಹಿರಿಯ ಪದಾಧಿಕಾರಿಗಳಾದ ಕೃಷ್ಣೋಜಿ ರಾವ್, ತಿಮ್ಮೆಗೌಡ್ರು ಕೃಷ್ಣಾ ನಗರ, ಎನ್. ಮಹೇಂದ್ರ ಕುರೆಕುಪ್ಪ ಹಾಗೂ ಎಲ್ಲಾ ಹಿರಿಯ – ಕಿರಿಯ ಪದಾಧಿಕಾರಿಗಳು ಮತ್ತು ಯುವ ಮುಖಂಡರುಗಳು ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು..

LEAVE A REPLY

Please enter your comment!
Please enter your name here