ದ್ರಾವಿಡರ ಕಣ್ಣನ್ನ್ ಮತ್ತು ಡಾ.ಶ್ರೀನಿವಾಸ್ ಎನ್. ಟಿ.ಅವರ ಜೀವನ ಕಥನ..       

0
122

ಲೇಖನ: ಡಾ.‌ಸಿದ್ದೇಶ ಕಾತ್ರಿಕೆಹಟ್ಟಿ.

ಕೂಡ್ಲಿಗಿ ತಾಲೂಕಿನ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಅವರು ಈ ಭಾಗದ ಶಾಸಕರಾಗಿ ಆಯ್ಕೆಯಾದ ನಂತರ ನಾಡಿನ ಅನೇಕ ಗಣ್ಯ ಮಾನ್ಯರು  ಅವರನ್ನು ಸನ್ಮಾನಿಸಿ ಶುಭಾಶಯಗಳನ್ನು ನಿತ್ಯ ಸಲ್ಲಿಸುತ್ತಿದ್ದಾರೆ‌. ಡಾ. ಶ್ರೀನಿವಾಸ್ ಎನ್. ಟಿ. ಅವರ  ಸ್ನೇಹಿತರು , ಒಡನಾಡಿಗಳು , ಹಿತೈಷಿಗಳು, ಗುರುಗಳು,  ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸಂಬಂಧಿಕರು ಹಾಗೂ ತನ್ನ  ತಂದೆಯಾದ ಮಾಜಿ ಶಾಸಕರು ದಿವಂಗತ  ಎನ್. ಟಿ. ಬೊಮ್ಮಣ್ಣನವರ  ಅಭಿಮಾನಿಗಳು ಹೀಗೆ ನಿತ್ಯ ಒಂದಲ್ಲಾ ಒಂದು ರೂಪದಲ್ಲಿ ಶುಭಾಶಯಗಳನ್ನು ಕೋರಿ ತಮಗೂ ಒಳಿತಾಗಲಿ ಮುಂದುವರೆಯಿರಿ ಎಂದೂ  ಆಶೀರ್ವಾದ ಮಾಡಿದರು. 
 

ಇತ್ತೀಚೆಗೆ ಮಾನ್ಯಶಾಸಕರಾದ  ಡಾ.‌ಶ್ರೀನಿವಾಸ್ ಎನ್. ಟಿ. ಅವರನ್ನು ಕನ್ಯಾಕುಮಾರಿ ಕಣ್ಣನ್ನ್ ಅವರು ಭೇಟಿ ಮಾಡಿ ಶುಭಾಶಯಗಳನ್ನು ಕೋರಿದರು. ಅಷ್ಟೇ ಅವರು ಒಬ್ಬರಿಗೆ ಒಬ್ಬರು ಪ್ರೀತಿಯಿಂದ ಅಪ್ಪಿಕೊಂಡು ಸಂಡೂರಿನ ಎಸ್ ಆರ್ ಎಸ್  ರೆಸಿಡೆನ್ಸಿಯಲ್ ಜೂನೀಯರ್  ಪಿಯು ಕಾಲೇಜು ನಲ್ಲಿ ಓದುವ ವೇಳೆ ಕಷ್ಟ ಸುಖ ಮತ್ತು ತುಂಟಾಟಗಳನ್ನು ಹಾಗೇ ಒಮ್ಮೆ  ನೆನಪಿಸಿಕೊಂಡು ಖುಷಿ ಪಟ್ಟರು.  ಪಿಯು ಕಾಲೇಜು ನಲ್ಲಿ  ಓದುವ ಸಂದರ್ಭದಲ್ಲಿ  ಕೆಲವು ಸವಿನೆನಪುಗಳಿವೆ. ‌ 

ಕಣ್ಣನ್ನ್  ಕನ್ಯಾಕುಮಾರಿ ಮೂಲದವರು.‌ ಕಣ್ಣನ್ನ್ ಅವರು ಶಿಕ್ಷಣ ಪಡೆಯಲು ತೊಂಬತ್ತರ ಕಾಲಘಟ್ಟದಲ್ಲಿ  ಕೆಂದ್ರ ಸರಕಾರದಿಂದ ದೊರೆತ  ರಾಷ್ಟ್ರೀಯ ಫೆಲೋಶಿಪ್ ಸಹಾಯದಿಂದ  ತಮಿಳುನಾಡಿನಿಂದ ಕರ್ನಾಟಕದ  ಸಂಡೂರಿಗೆ ಶಿಕ್ಷಣ ಪಡೆಯಲು ವಲಸೆ ಬಂದಿದ್ದಾರೆ.  ಕಣ್ಣನ್ನ್ ಅವರು 1992-93 ರಲ್ಲಿ ಎರಡು ವರ್ಷಗಳ ಕಾಲ ಸಂಡೂರಿನ ಎಸ್ ಆರ್ ಎಸ್ ರೆಸಿಡೆನ್ಸಿಯಲ್ ಜೂನೀಯರ್  ಪಿಯು ಕಾಲೇಜು ನಲ್ಲಿ  ಕಣ್ಣನ್ನ್ ಹಾಗೂ ಡಾ. ಶ್ರೀನಿವಾಸ್ ಎನ್. ಟಿ. ಅವರು  ವಾಲ್ಮೀಕಿ ಭವನ ವಸತಿ ನಿಲಯದಲ್ಲಿ ಉಳಿದುಕೊಳ್ಳುತ್ತಾರೆ.  ಪಿಯು ವಿದ್ಯಾಭ್ಯಾಸ ವೇಳೆ  ಸಹಪಾಠಿಗಳಾಗಿ ಒಟ್ಟಿಗೆ  ಶಿಕ್ಷಣ ಪಡೆಯುವ ವೇಳೆ ಇವರ ಮಧ್ಯೆ ತೀವ್ರವಾಗಿ ಸ್ನೇಹದ ತಿರುವು ಪಡೆದುಕೊಂಡಿದೆ. 

ಕಣ್ಣನ್ನ್ ಮತ್ತು ಶ್ರೀನಿವಾಸ್ ಅವರು  ಪ್ರತಿಭಾವಂತ ವಿದ್ಯಾರ್ಥಿಗಳಾಗಿದ್ದರು.  ಇಬ್ಬರ ಮಧ್ಯೆಯೂ ಮಧುರ ಕ್ಷಣಗಳಿವೆ.  ಇಬ್ಬರೂ ಪಿಯು ಸಹಪಾಠಿಗಳಾಗಿರುವುದರಿಂದ  ಓದು, ಆಟ ಮತ್ತು ಪಾಠಗಳ ನಡುವೆ ಒಟ್ಟೊಟ್ಟಿಗೆ ನಡೆಯುತಿತ್ತು.  ತಮ್ಮ  ಬಿಡುವಿನ ಸಮಯವನ್ನು ಕ್ರೀಡೆ ಮತ್ತು ಪ್ರವಾಸಕ್ಕೆ ಮೀಸಲು ಇಟ್ಟಿದ್ದರು.  ಇವರು ಹೆಚ್ಚು ಕ್ರಿಯಾಶೀಲರಾಗಿ ಚಟುವಟಿಕೆಗಳಿಂದ ಕೂಡಿರುತ್ತಿದ್ದರು.   ವಾಲಿಬಾಲ್  ಇಬ್ಬರಿಗೂ ನೆಚ್ಚಿನ ಕ್ರೀಡೆಯಾಗಿತ್ತು.  ಗುಣ ಮತ್ತು ಸ್ವಭಾವ ಭಿನ್ನವಾಗಿತ್ತು.   ಒಬ್ಬರನ್ನೂ  ಒಬ್ಬರು ಬಿಟ್ಟು ಇರದ ಸ್ನೇಹ ಇವರದಾಗಿತ್ತು. ತುಂಗಭದ್ರ ,ಹಂಪಿ, ಸಂಡೂರು ಪ್ರದೇಶದಲ್ಲಿ ರಮಣಿಯ  ತಾಣಗಳನ್ನು ವೀಕ್ಷಿಸಿ ಸಂತಸಪಡುತ್ತಿದ್ದರು.  

 ಒಬ್ಬರಿಗೆ ಒಬ್ಬರೂ ಬಿಟ್ಟು ಇರದ ಸ್ನೇಹ ಅವರದಾಗಿತ್ತು.‌  ಇಬ್ಬರ ಸ್ನೇಹದಲ್ಲಿ  ಕೆಲವೊಮ್ಮೆ ಸಣ್ಣ ಪುಟ್ಟ ವಿಚಾರಕ್ಕಾಗಿ ಜಗಳ ನಡೆಯುತಿತ್ತು. ಕೆಲವೊಮ್ಮೆ  ದೊಡ್ಡ ತಿರುವು ಪಡೆದುಕೊಳ್ಳುತ್ತಿರಲಿಲ್ಲ. ಕೆಲವೊಮ್ಮೆ ತಾವೇ ತಮಗೆ  ಸಮಾಧಾನ ಮಾಡಿಕೊಂಡು  ಆಟ ಪಾಠದಲ್ಲಿ ಎಂದಿನಂತೆ ತೊಡಗಿಸಿಕೊಳ್ಳುತ್ತಿದ್ದರು. ಅವರ ನಡುವೆ  ಚೇಷ್ಠೆ, ಹಾಸ್ಯ, ತಮಾಷೆ, ತುಂಟಾಟ ಇತ್ತು. ಬೆಳಗಿನ ಜಾವ ಸಿಟ್ಟು ಇದ್ದರೇ ಸಂಜೆ ಕಡೆ ಪ್ರೀತಿ ಮೂಡುತಿತ್ತು.  

ಕಣ್ಣನ್ನ್ ಮತ್ತು ಶ್ರೀನಿವಾಸ್ ಎನ್ ಟಿ ಅವರಲ್ಲಿ ದ್ರಾವಿಡ ಮೂಲದ ಭಾಷೆಗಳ ನಂಟು ಇದೆ. ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾಗಳನ್ನು ರಜಾ ದಿನಗಳಲ್ಲಿ ಬಿಡುವು ಇಲ್ಲದಂತೆ ನೋಡುತ್ತಿದ್ದರು. ಇಬ್ಬರಿಗೂ ಸಿನಿಮಾ ನೋಡುವ ಗೀಳು ಇತ್ತು. ಸಿನಿಮಾದಲ್ಲಿ ಬರುವ ಕಥಾನಾಯಕರ ಸಾಹಸ , ಖಳನಾಯಕರ ದರ್ಪ ಮತ್ತು ದೌರ್ಜನ್ಯ, ಹಾಸ್ಯ ಕಲಾವಿದರ ಚೇಷ್ಠೆ ಇತ್ಯಾದಿಯಾಗಿ ಗಮನಿಸಲು ಮತ್ತೆ ಮತ್ತೆ ಸಿನಿಮಾ ನೋಡುತ್ತಿದ್ದರು. 

 ಹಾಗೆಯೇ ಸಿನಿಮಾ ಪಾತ್ರಗಳ  ಹಾವ – ಭಾವಗಳನ್ನು ಅನುಕರಣೆ ಮಾಡುತ್ತಿದ್ದರು.  ಬೆಳಿಗ್ಗೆಯಿಂದ ಸಂಜೆ ವರೆಗೂ ಸಿನಿಮಾ ನೋಡುವ ಹುಚ್ಚು ಇತ್ತು. ಕಥೆಯ ಸಂಭಾಷಣೆಯ ಕೆಲವು ತುಣುಕುಗಳನ್ನು ಮೈಗೂಡಿಸಿಕೊಂಡು ಸ್ಮೃತಿ ಪಠಲದಲ್ಲಿ ತಂದುಕೊಂಡು ಮೆಲಕು ಹಾಕುತ್ತಿದ್ದರು.  ಕನ್ನಡ , ತೆಲುಗು ಮತ್ತು ತಮಿಳು ಸಿನಿಮಾಗಳನ್ನು ಹೊಸಪೇಟೆ ಚಿತ್ರಮಂದಿರಗಳಲ್ಲಿ ವೀಕ್ಷಣೆ ಮಾಡುತ್ತಿರುವುದನ್ನು ಇಬ್ಬರೂ ಹಂಚಿಕೊಂಡರು. 

ದ್ರಾವಿಡರು ಮೂಲತಃ ಕಪ್ಪು ಜನಾಂಗದವರು. ಅವೈದಿಕ ಸಂಸ್ಕೃತಿಯ ಹಿನ್ನೆಲೆ ಉಳ್ಳವರು. ಇಬ್ಬರೂ ಕಪ್ಪು ಕುಲದವರು ಎಂದೂ ಹೇಳಿಕೊಂಡರು.  ತೆಲುಗಿನಲ್ಲಿ ನಲಕುಲಮು (ಕಪ್ಪು ಕುಲ )  ವಿಚಾರ ಬರುತ್ತದೆ. ‌ಕೆಲ ಒಮ್ಮೊಮ್ಮೆ  ನಮ್ಮ ನಡುವೆಯೂ ಏನೂ ನಡೆದಿಲ್ಲ  ಅನ್ನುವ ರೀತಿಯಲ್ಲಿ ಎಲ್ಲವನ್ನೂ ಮರೆತು ಬೆರೆಯುತ್ತಿದ್ದರು.  ಕಣ್ಣನ್ನ್ ಅವರು 1992-93 ರಲ್ಲಿ ಶ್ರೀನಿವಾಸ್ ಎನ್. ಟಿ. ಅವರ ಸಹೋದರಿಯರಾದ ಸುವರ್ಣ ಹಾಗೂ ಗಂಗಮ್ಮ ಅವರ  ವಿವಾಹದಲ್ಲಿ  ಪಾಲ್ಗೊಂಡ ಸವಿನೆನಪುಗಳಿವೆ.‌  

ಶ್ರೀನಿವಾಸ್ ಎನ್. ಟಿ. ಅವರು ಕೆಲವು ವಿಚಾರದಲ್ಲಿ ಸರಿ- ತಪ್ಪುಗಳನ್ನು ಗುರುತಿಸಿ ತೀರ್ಮಾನ ತಕೊಳ್ಳುವುದರಲ್ಲಿ  ನಾಯಕತ್ವ ವಹಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುವುದರ ಬಗ್ಗೆ  ಕಣ್ಣನ್ನ್ ಅವರು ಮೆಚ್ಚಿಕೊಂಡರು.  ಶ್ರೀನಿವಾಸ್ ಎನ್. ಟಿ. ಅವರ  ಸಹಾಯ ಮನೋಭಾವ ಹಾಗೂ  ಗುಣ ಸ್ವಭಾವವನ್ನು  ಮೆಚ್ಚಿದ ಕಣ್ಣನ್ನ್ ಅವರು  ಸಂತಸ  ವ್ಯಕ್ತಪಡಿಸಿ ಕೊಂಡಾಡಿದರು.

ಪಿಯು ನಂತರ ಇಬ್ಬರೂ ಉನ್ನತ ಶಿಕ್ಷಣ ಪಡೆದರು. ಶ್ರೀನಿವಾಸ್ ಎನ್. ಟಿ. ಅವರು ವೈದ್ಯಕೀಯ ಕ್ಷೇತ್ರದಲ್ಲಿ ಪದವಿ ಪಡೆದರು. ಕಣ್ಣನ್ನ್ ಅವರು ಇಂಜಿನಿಯರಿಂಗ್ ಪದವಿ ಪಡೆದರು.  ‌ ಶ್ರೀನಿವಾಸ್ ಎನ್. ಟಿ. ಅವರು ವಿಜಯ ನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ನರಸಿಂಹಗಿರಿನಲ್ಲಿ ಜನಿಸಿದರು. ಆದರೆ  ಉನ್ನತ ಶಿಕ್ಷಣಕ್ಕಾಗಿ  ಮೈಸೂರು – ದೆಹಲಿ ಪ್ರದೇಶಗಳ ಕಡೆ ತೆರಳಿ  ವೈದ್ಯಕೀಯ ಕ್ಷೇತ್ರದಲ್ಲಿ ಪದವಿಗಳನ್ನು ಗಳಿಸಿ ತುಮಕೂರು ನಗರದಲ್ಲಿ  ನೆಲೆ ನಿಂತು ಅಕ್ಷರ ಫೌಂಡೇಶನ್‌ ಸಂಸ್ಥೆಯನ್ನು ಕಟ್ಟಿ ಯಶಸ್ವಿಯಾದರು.‌  ಡಾ. ಶ್ರೀನಿವಾಸ್ ಎನ್. ಟಿ. ಅವರು  ತಮ್ಮ ಜೀವನದ ಹದಿನೈದು ವರ್ಷಗಳ ವೈದ್ಯಕೀಯ ಲೋಕದ ಬದುಕಿನ ಪಯಣದಲ್ಲಿ ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ಬಡ ಜನರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ನಡೆಸಿಕೊಟ್ಟು ಜನತೆಯಿಂದ ಬಡವರ ಕಣ್ಣಪ್ಪ ಎಂದೂ ಹೆಸರು ಪಡೆದುಕೊಂಡರು.  

ಕಣ್ಣನ್ನ್ ಅವರು ಊಟಿ ನಲ್ಲಿ ಎಲೆಕ್ಟ್ರಾನಿಕ್ ಡಿಪ್ಲೊಮಾ ಇಂಜಿನಿಯರ್ ಪದವಿ ಮುಗಿಸಿ  ಚೆನ್ನೈ ಮೂಲದ ಬಿಜಿಲಿ  ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು.‌  ಬಿಜಿಲಿ ಮೀಟರ್ ಕಾರ್ಖಾನೆಯಲ್ಲಿ  ಮೊದಲು ಕೆಲಸ ಮಾಡಿದ ಅನುಭವ ಕಣ್ಣನ್ನ್ ಅವರಿಗೆ ಇದೆ.  ಒಂಬತ್ತು ವರ್ಷಗಳ ಕಾಲ ಕೆಲಸ ಮಾಡಿದ ಅನುಭ ಇದೆ.  ವಿಂಟ್ ಪಾರ್ಮ್ ನಲ್ಲಿ ಕೆಲಸ ಮಾಡಿದರು. ಆ ಮೂಲಕ 
ಹದಿನೇಳು  ವರ್ಷ ಕಾಲ ಕೆಲಸ ಮಾಡಿದ ಅನುಭವ ಇದೆ. ಉದ್ಯೋಗ ಮತ್ತು ದುಡಿಮೆ ಜೊತೆಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ  ಬಿಬಿಎ, ಎಂಬಿಎ ಕೋಸ್೯ ಶಿಕ್ಷಣವನ್ನು ಮದ್ರಾಸ್ ವಿಶ್ವವಿದ್ಯಾಲಯ ದೂರಶಿಕ್ಷಣ ಕೇಂದ್ರ ಮೂಲಕ ಪಡೆದುಕೊಂಡರು. ಕೆಲವು ವರ್ಷಗಳ ಕಾಲ  ವಿಂಡ್ ಮಿಲ್ ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಆನಂತರ ಸಿವಿಲ್  ಇಂಜಿನಿಯರ್ ಆಗಿ ಕೆಲಸ ಮಾಡಿದರು. 

ಆಂಧ್ರಪ್ರದೇಶ , ಕರ್ನಾಟಕ ಹಾಗೂ ಪಶ್ಚಿಮ ಬಂಗಾಳ ಕಡೆ ತೆರಳಿದ ಕಣ್ಣನ್ನ್ ಅವರು  ಮೀಟರ್ ಸರ್ವೀಸ್ ಇಂಜಿನಿಯರ್ ಆಗಿ  ಕೆಲಸ ನಿರ್ವಹಿಸಿದ್ದಾರೆ. ಪ್ರಸ್ತುತ ಕಣ್ಣನ್ನ್ ಅವರು ಕರ್ನಾಟಕದಲ್ಲಿ ನೆಲೆನಿಂತಿದ್ದಾರೆ.  2011ರಲ್ಲಿ ತುಮಕೂರು ಅಕ್ಷರ ಫೌಂಡೇಶನ್ ಗೆ ಕಣ್ಣನ್ನ್ ಅವರು ಭೇಟಿ ನೀಡಿದಾಗ ಡಾ.‌ಶ್ರೀನಿವಾಸ್ ಎನ್. ಟಿ. ಅವರು ಕಣ್ಣನ್ನ್ ಅವರ ಕಣ್ಣನ್ನು ತಪಾಸಣೆ ಮಾಡಿ ಕಣ್ಣಡಕ ಕೊಟ್ಟಿರುವುದನ್ನು ಖುಷಿಯಿಂದ ಹಂಚಿಕೊಂಡರು. 

ಕಣ್ಣನ್ನ್ ಅವರು  ಚಿತ್ರದುರ್ಗದಲ್ಲಿ ನೆಲೆ ನಿಂತು ಕೆಲಸ ಮಾಡುವ ವೇಳೆ ತಮ್ಮಣ್ಣ ಎನ್ ಟಿ ಅವರ ಸಹಾಯದಿಂದ ಒಂದು ಬಾಡಿಗೆ ಮನೆ ಇಡಿದು ತಮ್ಮ ಕೆಲಸ ಕಾರ್ಯನಿಮಿತ್ತವಾಗಿ ಆಫೀಸ್ ಗೆ ಬಳಸಿಕೊಂಡ ಸಹಾಯವನ್ನು ನೆನಪಿಸಿಕೊಂಡರು.

ಜಗಳೂರು ಭಾಗದಲ್ಲಿ ಕಣ್ಣನ್ನ್ ಅವರು ವಿಂಡ್ ಮಿಲ್ ಸರ್ವೀಸ್ ಇಂಜಿನಿಯರ್ ಆಗಿ ಹಾಗೂ ಕೂಡ್ಲಿಗಿ ಪಟ್ಟಣದಲ್ಲಿ ವಿಂಡ್ ಮಿಲ್ ಕ್ವಾಲಿಟಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಕಣ್ಣನ್ನ್ ಅವರು ಪ್ರೀತಿಯಿಂದ ನೆನಪುಮಾಡಿಕೊಂಡು ಕರ್ನಾಟಕದ ಜನತೆಯ ಪ್ರೀತಿ ಮತ್ತು ಅಭಿಮಾನ ಬಗ್ಗೆ  ಹೆಮ್ಮೆ ಪಟ್ಟರು.  

ನಾನು ನನ್ನ ಜೀವನದಲ್ಲಿ ಇಂಜಿನಿಯರ್ ಆಗಿ ಎತ್ತರಕ್ಕೆ ಬೆಳೆದೆ. ಆದರೆ ನನ್ನ ಬಾಲ್ಯದ ಗೆಳೆಯ  ಡಾ.‌ಶ್ರೀನಿವಾಸ್ ಎನ್. ಟಿ. ಅವರು ಮೂಲತಃ ವೈದ್ಯರಾಗಿ ಕರ್ನಾಟಕದ ಸರಕಾರದಲ್ಲಿ ಶಾಸಕರಾಗಿ ಕೆಲಸ ಮಾಡುತ್ತಿರುವುದು ‌ನನಗೆ ತುಂಬಾ ಖುಷಿ ತಂದಿದೆ ಎಂದರು. ನಾನು ಎಲ್ಲೇ ಇದ್ದರೂ ಮಾನ್ಯ ಶಾಸಕರಾದ ಡಾ.  ಶ್ರೀನಿವಾಸ್ ಎನ್. ಟಿ. ಅವರ ಕೆಲಸ ಕಾರ್ಯಗಳಿಗೆ ನನ್ನದೇ ಆದ ನೆಲೆಯಲ್ಲಿ ಸಹಕಾರ ಮಾಡುವ ಮೂಲಕ ಅವರ ಪರವಾಗಿ  ನಿಲ್ಲುವೇ  ಎಂಬ ಮಾತನ್ನು  ಹಂಚಿಕೊಂಡರು. ‌

LEAVE A REPLY

Please enter your comment!
Please enter your name here