ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ “ಮಾತಾಡ್ ಮಾತಾಡ್ ಕನ್ನಡ” ಕಾರ್ಯಕ್ರಮ.

0
265

ಸಂಡೂರು/ತೋರಣಗಲ್ಲು:ಅ:28:- ಸರಕಾರದ ಆದೇಶದಂತೆ ಇಂದು ಸರ್ಕಾರಿ ಕಛೇರಿಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಪ್ತಾಹವನ್ನು ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಆಚರಿಸಿ “ಮಾತಾಡ್ ಮಾತಾಡ್ ಕನ್ನಡ” ಕಾರ್ಯಕ್ರಮದ ಅಂಗವಾಗಿ ಮೊದಲಿಗೆ ನಾಡಗೀತೆ ಮೂಲಕ ಪ್ರಾರಂಭ ಮಾಡಿ ಎಲ್ಲರೂ ಕನ್ನಡ ಮಾತನಾಡೋಣ, ಅಕ್ಕ ಪಕ್ಕದವರಿಗೂ ಕನ್ನಡ ಕಲಿಸೋಣ, ಆಡಳಿತ,ವ್ಯವಹಾರ, ನಾಡು,ನುಡಿ ಕನ್ನಡಮಯ ವಾಗುವಂತೆ ಸಂಕಲ್ಪ ಮಾಡೋಣವೆಂದು ಪ್ರತಿಜ್ಞೆ ಕೈಗೊಳ್ಳಲಾಯಿತು,

ಪ್ರತಿಜ್ಞೆಯನ್ನು ಫಾರ್ಮಸಿ ಅಧಿಕಾರಿ ಮಂಜುನಾಥ್ ಬೋಧಿಸಿದರು ನಂತರ, ಮೂರು ಕನ್ನಡ ಗೀತೆಗಳಲ್ಲಿ ಮೊದಲಿಗೆ ಬಾರಿಸು ಕನ್ನಡ ಡಿಂಡಿಮವಾ, ನಂತರ ಜೋಗದ ಸಿರಿ ಬೆಳಕಿನಲ್ಲಿ, ಹಾಗೂ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟ ಬೇಕು ಗೀತೆಗಳನ್ನು ಹಾಡಲಾಯಿತು, ಕೊನೆಯಲ್ಲಿ ಸಿರಿ ಗನ್ನಡಂ ಗೆಲ್ಗೆ,ಸಿರಿ ಗನ್ನಡಂ ಬಾಳ್ಗೆ ಘೋಷಣೆಯನ್ನು ಹೇಳಲಾಯಿತು,

ಡಾ.ವೆಂಕಟೇಶ್ವರ ರಾವ್, ಡಾ.ದೀಪಾ ಪಾಟೀಲ್,ಡಾ.ಆಯೆಶಾ, ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಸೂಪರಿಡೆಂಟ್, ಹರೀಶ್, ಆರೋಗ್ಯ ಸುರಕ್ಷಾಧಿಕಾರಿ ಶಕೀಲ್ ಅಹಮ್ಮದ್, ಮಂಜುನಾಥ್, ಶಶಿಧರ, ಲಕ್ಷ್ಮಿ, ಹುಲಿಗೆಮ್ಮ,ಶೃತಿ, ನಿಜಾಮುದ್ದಿನ್, ಕೀರ್ತನಾ, ಚಲುವರಾಜ, ಶಿವಕುಮಾರ್, ಶ್ರೀನಿವಾಸ, ಶಿವರಾಜ, ತಿಪ್ಪೇಸ್ವಾಮಿ,ಸಾರ್ವಜನಿಕರು, ಆಟೋಚಾಲಕರು,ನಾಗರೀಕರು ಮತ್ತು ಲಸಿಕೆಗಾಗಿ ಬಂದವರು, ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here