ಅನಾಥ ಮಗುವಿಗೆ ಆಸರೆಯಾಗಿ ರಕ್ಷಣೆ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ

0
458

ಸಂಡೂರು:ಮೇ:29:- ತಾಲೂಕಿನ ಲಿಂಗದಳ್ಳಿ ಗ್ರಾಮದಲ್ಲಿನ ಹಳ್ಳದ ದಂಡೆಯಲ್ಲಿ ಆಗ ತಾನೇ ಹುಟ್ಟಿದ ತಕ್ಷಣ ಮಗುವನ್ನು ಬಿಸಾಕಿ ಹೋಗಿದ್ದ ಮಗುವನ್ನು ಗ್ರಾಮದವರ ಗಮನಕ್ಕೆ ಬಂದ ಹಿನ್ನೆಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಒಪ್ಪಿಸಿದ್ದಾರೆ

ಇಲಾಖೆಯ ಅಧಿಕಾರಿ ಸಿಡಿಪಿಓ ಪ್ರೇಮ್ ಮೂರ್ತಿ ಅವರು ಲಿಂಗದಹಳ್ಳಿ ಗ್ರಾಮಕ್ಕೆ ಮೇಲ್ವಿರಕಾರದ ಭಜಂತ್ರೀ ಯವರೊಂದಿಗೆ ಬೇಟಿ ನೀಡಿ ಪರಿಶೀಲಿಸಿ ವಿಚಾರಿಸಿದಾಗ ಊರಿನ ವ್ಯಕ್ತಿಗಳು ಬಯಲು ಬಹಿರ್ದೆಸೆಗೆ ಹೋಗಿದ್ದಾಗ ಊರಿನ ಹಳ್ಳದ ಪಕ್ಕದಲ್ಲಿ ಮಗುವೊಂದನ್ನು ಬಿಟ್ಟು ಹೋಗಿರುವುದನ್ನು ಕಂಡ ಸ್ಥಳೀಯರಾದ ಸಿದ್ದಪ್ಪ & ಹೊನ್ನೂರಪ್ಪ ಅವರು ಅನಾಥ ಮಗುವನ್ನು ಮನೆಗೆ ಎತ್ತಿಕೊಂಡು ಬಂದಿದ್ದರು.

ಮೇಲ್ವಿಚಾರಕರು ಮತ್ತು ಅಂಗನವಾಡಿ ಶಿಕ್ಷಕಿ ಗಂಗಮ್ಮ ಹಾಗೂ ಸಹಾಯಕಿ ಮಂಜಮ್ಮ ಇವರು ಸೇರಿ ಮಗುವನ್ನು ಸಂಡೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆದೋಯ್ದು ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ ನಂತರ ಸಿಡಿಪಿಒ ಪ್ರೇಮಾಮೂರ್ತಿ ಇವರು ಬಳ್ಳಾರಿ ಬಾಲಮಂದಿರದವರ ಸ್ವಾದಿನಕ್ಕೆ ಮಗುವನ್ನು ಕಳಿಸಿಕೊಟ್ಟರು

ಎಂಎಂ.ಭಜಂತ್ರಿ ಮೇಲ್ವಿಚಾರಕರು, ಗಂಗಮ್ಮ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಮಂಜಮ್ಮ ಬಳ್ಳಾರಿ ಬಾಲಮಂದಿರಕ್ಕೆ ಹೋಗಿ ಮಗುವನ್ನು ಒಪ್ಪಿಸಿದ್ದಾರೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here