ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ರಾಷ್ಟçಮಟ್ಟದ ಪ್ರಶಸಿ

0
114

ಹುಬ್ಬಳ್ಳಿ : ಏ.11: ಇಂಧನ ಉಳಿತಾಯ, ಅನಿಲ ಸಂರಕ್ಷಣೆಯ ಹಾಗೂ ಪರಿಸರದ ಕುರಿತು ಜಾಗೃತಿ ಮೂಡಿಸುವ ದೃಷ್ಟಿಯಿಂದ ದೇಶದಾದ್ಯಂತ ಏ.11 ರಿಂದ ಏ.30 ರವರೆಗೆ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯ, ಸಂರಕ್ಷಣಾ, ಕ್ಷಮತಾ ಮಹೋತ್ಸವ (ಸಕ್ಷಮ-2022) ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ.
ಅಧಿಕ ಇಂಧನ ಉಳಿತಾಯ, ಹಾಗೂ ಕಾರ್ಯಕ್ಷಮತೆ ಸಾಧಿಸಿದ ಸಾರಿಗೆ ಸಂಸ್ಥೆಗಳಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಏಪ್ರೀಲ್-2020 ರಿಂದ ಮಾರ್ಚ್-2021 ರವರೆಗೆ ಗ್ರಾಮೀಣ ಪ್ರದೇಶದಲ್ಲಿ 3000 ವಾಹನಗಳನ್ನು ಕಾರ್ಯಾಚರಣೆ ಮಾಡುವದರ ಮೂಲಕ ಅತಿ ಹೆಚ್ಚಿಗೆ ಇಂಧನ ಉಳಿತಾಯದಲ್ಲಿ ಕಾರ್ಯಕ್ಷಮತೆ ಸಾಧಿಸಿರುವ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದಡಿಯಲ್ಲಿ ಕಾರ್ಯ ನಿರ್ವಹಿಸುವ ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಸ್ಥೆಯು (Peಣಡಿoಟeum ಅoಟಿseಡಿvಚಿಣioಟಿ ಖeseಚಿಡಿಛಿh ಂssoಛಿiಚಿಣioಟಿ) ನೀಡುವ ರಾಷ್ಟçಮಟ್ಟದ ಪ್ರಶಸ್ತಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಆಯ್ಕೆಯಾಗುವುದರ ಮೂಲಕ ಗ್ರಾಮೀಣ ವಿಭಾಗದ ಕಾರ್ಯಾಚರಣೆಯಲ್ಲಿ ದೇಶದ ಎಲ್ಲಾ ಸಾರಿಗೆ ಸಂಸ್ಥೆಗಳಲ್ಲಿಯೇ ಹೆಚ್ಚಿನ ಸಾಧನೆ ಮಾಡಿ ಪ್ರಥಮ ಸ್ಥಾನ ಗಳಿಸಿಕೊಂಡಿದೆ.
ನವದೆಹಲಿಯ ಭಾರತ ಹೆಬಿಟೆಟ್ ಕೇಂದ್ರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಏ.11 ರಂದು ಪೆಟ್ರೋಲಿಯಮ್ ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಹಾಗೂ ಪೆಟ್ರೋಲಿಯಮ್ ಸಂರಕ್ಷಣಾ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾದ ಪಂಕಜ್ ಜೈನ್ ಹಾಗೂ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಮತ್ತು ಪೆಟ್ರೋಲಿಯಂ ಸಂರಕ್ಷಣಾ ಸಂಸ್ಥೆಯ ಹಿರಿಯ ಅಧಿಕಾರಿಗಳು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಗುರುದತ್ತ ಹೆಗಡೆರವರಿಗೆ ಪ್ರಶಸ್ತಿಯನ್ನು ಪ್ರಧಾನ ಮಾಡಿದರು. ವಾ.ಕ.ರ.ಸಾ.ಸಂಸ್ಥೆಯ ಮುಖ್ಯ ಯಾಂತ್ರಿಕ ಅಭಿಯಂತರರಾದ ಎಂ. ರಮೇಶ ಹಾಗೂ ಮುಖ್ಯ ಸಂಚಾರ ವ್ಯವಸ್ಥಾಪಕರಾದ ರಾಜೇಶ ಹುದ್ದಾರ್‌ರವರು ಉಪಸ್ಥಿತರಿದ್ದರು. ಪ್ರಶಸ್ತಿಯು ಪ್ರಶಸ್ತಿ ಫಲಕ ಹಾಗೂ ರೂಪಾಯಿ 04 ಲಕ್ಷ ಮೊತ್ತವನ್ನು ಒಳಗೊಂಡಿರುತ್ತದೆ.
ಪ್ರಶಸ್ತಿಯನ್ನು ಪಡೆಯುವಲ್ಲಿ ಸಂಸ್ಥೆಯ ಚಾಲನಾ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ, ವಿಭಾಗದ ಅಧಿಕಾರಿಗಳು ಹಾಗೂ ಕೇಂದ್ರ ಕಛೇರಿಯ ಹಿರಿಯ ಅಧಿಕಾರಿಗಳ ಪರಿಶ್ರಮ ಇರುತ್ತದೆ. ಅದರಲ್ಲೂ ಚಾಲಕರು ಮತ್ತು ತಾಂತ್ರಿಕ ಸಿಬ್ಬಂದಿಗಳ ಪರಿಶ್ರಮ ಅಧಿಕವಾಗಿರುತ್ತದೆ. ಆದ್ದರಿಂದ ಸಂಸ್ಥೆಯ ಎಲ್ಲ ಚಾಲನಾ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ ಮತ್ತು ಈ ನಿಟ್ಟಿನಲ್ಲಿ ಶ್ರಮವಹಿಸಿ ಸಂಸ್ಥೆಗೆ ಪ್ರಶಸ್ತಿ ಬರಲು ಕಾರಣರಾದ ಘಟಕ ವ್ಯವಸ್ಥಾಪಕರು, ಎಲ್ಲ ಅಧಿಕಾರಿಗಳನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಗುರುದತ್ತ ಹೆಗಡೆಯವರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here