ಸಂಡೂರು ತಾಲೂಕಿನ ಕಾಂಗ್ರೆಸ್/ಬಿಜೆಪಿ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ..!!

0
313

ಸಂಡೂರು:ನ:17:ಸಂಡೂರು ತಾಲೂಕಿನಲ್ಲಿ ದಿನಾಂಕ 17/11/2021ರಂದು ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಎನ್.ಸೋಮಪ್ಪ ಕುರೆಕುಪ್ಪರವರು ತಾಲೂಕಿನ ಹಲವು ಹಳ್ಳಿಗಳಲ್ಲಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ,

ಜೆಡಿಎಸ್ ಪಕ್ಷದ ಕ್ರೀಡಾ ವಿಭಾಗದ ತಾಲೂಕು ಅಧ್ಯಕ್ಷರಾದ ಶಿವಶಂಕರ್ ರವರ ಸಹೋದರ ಅಂಜಿನಪ್ಪ ಟಿ.ಎಸ್.ಹಾಗೂ ಪ್ರಭಾವತಿ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಅವರನ್ನ ಅಶಿರ್ವದಿಸಿ ಹಾರೈಸಿದ ವಧು-ವರರಿಗೆ ಶುಭಕೋರಿದರು

ಚೋರನೂರು ಗ್ರಾಮದ ಮುಲ್ಲಸಾಬ್ ಬಂಡೆಯ ಮೆಹಾಬುಬ್ ಸುಭಾನ್ ದರ್ಗಕಟ್ಟೆ ಹತ್ತಿರ ಮುಸ್ಲಿಂ ಬಾಂಧವರನ್ನುದ್ದೇಶಿಸಿ ಕುಶಲೋಪರಿ ವಿಚಾರಿಸಿ ರೈತರನ್ನ ಯುವಕರನ್ನ ಪ್ರೀತಿ ವಿಶ್ವಾಸದಿಂದ ಮಾತನಾಡಿಸಿ ಪಕ್ಷಕ್ಕೆ ಬೆಂಬಲಿಸಿ ಈ ಬಾರಿ ಜನತಾ ಸರ್ಕಾರ ರಚನೆಗೆ ಸಹಕರಿಸುವಂತೆ ಮನವಿ ಮಾಡಿದರು ಹಾಗೂ ಗ್ರಾಮದ ಹಿರಿಯರಾದ ಸುಭಾನ್ ಸಾಬ್ ,ಬಡೆಸಾಬ್ , ವಜೀರ್ ಬಾಯ್ (ಎಲೆಕ್ಟ್ರಿಕಲ್ ಕಾಂಟ್ರ್ಯಾಕ್ಟರ್ ), ಸುಭಾನ್ ಸಾಬ್, ಕಾಸಿಂಪೀರಾ ಸಾಬ್, ಹೊನ್ನೂರ್ ವಲಿ, ಸುಭಾನ್ ಸಾಬ್, ಅನ್ವರ್, ಮಹಬೂಬ್, ರಫೀ, ಅಲಿಬಾಷ,ಮುಂತಾದವರು ಭಾಗವಹಿಸಿದ್ದರು

ಚೋರನೂರು ಗ್ರಾಮದ ಗ್ರಾಮದೇವತೆಯಾದ ಶ್ರೀ ಮಾರೆಮ್ಮದೇವಿಯ ಪಟ ಸವಾಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ,ದೇವಿಯ ಅಶಿರ್ವಾದದಿಂದ ಪಟ ಸವಾಲ್ ನ್ನು ಜೆಡಿಎಸ್ ಸಂಡೂರು ವಿಧಾನಸಭಾಕ್ಷೇತ್ರದ ಅಧ್ಯಕ್ಷರಾದ ಶ್ರೀ ಎನ್. ಸೋಮಪ್ಪ ಕುರೆಕುಪ್ಪರವರಿಗೆ ದೊರೆಯಿತು

ಹಾಗೇ ಸಮಯದಲ್ಲಿ ಗ್ರಾಮದ ಹಿರಿಯ ಮುಖಂಡರಾದ ಗವಿಸಿದ್ದಪ್ಪರ ಹೊನ್ನಿ, ದೊಡ್ಮನೆ ನಾಗರಾಜ,ದೊಡ್ಮನೆ ರಾಜ, ಕೆ.ಒಬಳೇಶ್ , JCB ಶಿವರಾಮ್, ಗಾದ್ರೇಪ್ಪನವರ ರಾಜಪ್ಪ, ಸಿದ್ದಪ್ಪ,ಆದಿಮನೆ ಹುಲೇಪ್ಪ ,ಮಾರೇಶಿ, ಕಿಳ್ಳೆ ಹುಲೇಪ್ಪ,ಬಿ.ಶಿವು, ಪರಶುರಾಮ ಮುಂತಾದ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

ತದನಂತರ ಚೋರನೂರುನ ಕಾಂಗ್ರೇಸ್ ನ ಹಿರಿಯ ಮುಖಂಡರಾದ ದಿವಂಗತ ಶ್ರೀ.ಚೋರನೂರು ಅನಂದಪ್ಪರವರ ಮನೆಗೆ ಭೇಟಿ ನೀಡಿ ಅವರ ಕುಟುಂಬದವರ ಕುಶಲೋಪರಿ ವಿಚಾರಿಸಿ ಮನೆಯಲ್ಲಿ ಹಿರಿಯರ ಆಶಿರ್ವಾದ ಪಡೆದರು

ಈ ಸಂದರ್ಭದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸೈಯದ್ ಹುಸೇನ್ ಪೀರಾ ದೊಡ್ಡಮನೆ,ಅ.ಸಂ.ಅಧ್ಯಕ್ಷರಾದ ಕೆ.ಎಂ ಯೂಸೂಫ್,ತಾಲೂಕು ಯುವ ಅಧ್ಯಕ್ಷರಾದ ಚೋರನೂರುನ ಖಾದರ್ ಬಾಷ , ಮಾಹಿತಿ ತಂತ್ರಜ್ಞಾನದ ಮತ್ತು ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಎ.ವೈ.ಅಮಿತ್ ದೊರೆ (ಚೋರನೂರು), ತಾಲೂಕು ಉಪಾಧ್ಯಕ್ಷರಾದ ಮಹೇಂದ್ರ ಕುರೆಕುಪ್ಪ , ಬಸವರಾಜ ವೈ ಟಿ ಜಿ, ಜಾಫರ್,ಹಾಗೂ ಹಿರಿಯ ಮುಖಂಡರು ಮತ್ತು ಯುವ ಮುಖಂಡರುಗಳು ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here