ಕಾನಾಹೊಸಹಳ್ಳಿಯಲ್ಲಿ “ತಂಬಾಕು ನಿಯಂತ್ರಣ ಮತ್ತು ವಿಶ್ವ ಮದುಮೇಹ ದಿನ” ರೋಗಗಳ ಜನ ಜಾಗೃತಿ ಕಾರ್ಯಕ್ರಮ.!

0
642

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಾಹೊಸಹಳ್ಳಿ ಎಸ್.ಕೆ.ಡಿ.ಡಿ.ವಿ ಶಾಲೆ ಆವರಣದಲ್ಲಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಬಳ್ಳಾರಿ ಜಿಲ್ಲೆ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ ಜಿಲ್ಲಾ ಆಸಾಂಕ್ರಾಮಿಕ ರೋಗಗಳ /ಸರ್ವೇಕ್ಷಣ ಘಟಕ ಬಳ್ಳಾರಿ ಸಮುದಾಯ ಅರೋಗ್ಯ ಕೇಂದ್ರ ಆಸ್ಪತ್ರೆ ಚಿಕ್ಕ ಜೋಗಿಹಳ್ಳಿ (ಎನ್ ಪಿ ಸಿ ಡಿ ಸಿ ಎಸ್ ) (ಎನ್. ಟಿ ಸಿ ಪಿ )ಜಿಲ್ಲಾ ತಂಬಾಕು ನಿಯಂತ್ರಣ ಕೋಶರವರ ವತಿಯಿಂದ “ವಿಶ್ವ ಮದುಮೇಹ ದಿನ ” ಮತ್ತು “ಗುಲಾಬಿ ಆಂದೋಲನ ದಿನ ” ದಡಿಯಲ್ಲಿ ಆಸಾಂಕ್ರಾಮಿಕ ರೋಗಗಳ ಜನ ಜಾಗೃತಿ ಕಾರ್ಯಕ್ರಮ ಮತ್ತು ತಪಾಸಣೆ ಶಿಬಿರ ಕಾರ್ಯಕ್ರಮವು ಅಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಕಾನಹೊಸಹಳ್ಳಿ ಪೊಲೀಸ್ ಠಾಣೆಯ ಶ್ರೀ ಚನ್ನಪ್ಪನವರು, ತಂಬಾಕು ಮತ್ತು ಗುಟ್ಕಾ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಆಗುವ ದುಷ್ಪರಿಣಾಮಗಳ ಕುರಿತು ಸವಿಸ್ತಾರವಾಗಿ ಮಾತನಾಡಿದರು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು ಹಾಗೂ ಅತಿಥಿಗಳಾಗಿ ವೈದ್ಯರು ಶಿವುಪ್ರಕಾಶ್, ಪೊಲೀಸ್ ಇಲಾಖೆ ಶರಣಪ್ಪ NCD ಸಿಬ್ಬಂದಿ ಕರಿಯಣ್ಣ, ಅಂಜಿನಪ್ಪ, ಪ್ರವೀಣ್, ರವಿಕುಮಾರ್ ICTC ಸಿಬ್ಬಂದಿ ಸಿದ್ದೇಶ್ವರ, ಪ್ರಸಾದ್, ಅರೋಗ್ಯ ಸಿಬ್ಬಂದಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಈ ವಿಷಯ ಬಗ್ಗೆ ಚರ್ಚಿಸಲಾಯಿತು. “ವಿಶ್ವ ಮದುಮೇಹ ದಿನ & ಗುಲಾಬಿ ಆಂದೋಲನ ದಿನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. “ಅರೋಗ್ಯ ತಪಾಸಣೆ ಶಿಬಿರವನ್ನು ಎಲ್ಲ ಸಿಬ್ಬಂದಿಗಳಿಗೆ ಮತ್ತು ಶಾಲೆಯ ಮಕ್ಕಳಿಗೆ, ಹಾಗೂ ಸಾರ್ವಜನಿಕರಿಗೆ ತಪಾಸಣೆ ಮಾಡಲಾಯಿತು.

LEAVE A REPLY

Please enter your comment!
Please enter your name here