ಕೂಡ್ಲಿಗಿ:ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಅನಿರುದ್ಧ ಪಿ. ಶ್ರವಣ್ ಅವರು ಬೇಟಿ.!

0
191

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಇಮಡಾಪುರ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 50ರ ಅಂಡರ್ ಪಾಸ್ ನಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಹಾಗೂ ಹೆದ್ದಾರಿ ಪಕ್ಕದಲ್ಲಿ ಅರ್ಧಕ್ಕೆ ನಿಲ್ಲಿಸಿರುವ ಸರ್ವಿಸ್ ರಸ್ತೆ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ
ಜಿಲ್ಲಾಧಿಕಾರಿ ಅನಿರುದ್ಧ ಪಿ.ಶ್ರವಣ್ ಅವರಿಗೆ
ಮನವಿ ಮಾಡಿಕೊಂಡರು. ನಂತರ ಮಳೆಯಿಂದ ಕುಸಿದು ಬಿದ್ದ ಮನೆಗಳ ಹಾಗೂ ನಷ್ಟವಾದ ಬೆಳೆಗಳ ಪರಿಶೀಲಿಸಿದರು. ಎಂ.ಬಿ. ಅಯ್ಯನಹಳ್ಳಿಯ ಮೋಕ್ಷನಾಥ ಸ್ವಾಮಿಯವರ ಮೂರು ಎಕರೆ ಜಮೀನಿನಲ್ಲಿ ಮೊಳಕೆಯೊಡೆದು ಮೆಕ್ಕೆಜೋಳ ಹಾಗೂ ತಿಪ್ಪೇರುದ್ರಪ್ಪ ಅವರ ರಾಗಿ ಹಾಗೂ ಸ್ಥಳಕ್ಕೆ ಬೇರೆ ಗ್ರಾಮಗಳಿಂದ ತಂದಿದ್ದ ಶೇಂಗಾ, ರಾಗಿ ಬೆಳೆಗಳನ್ನು ಪರಿಶೀಲಿಸಿದ ಅವರು, ರೈತರಿಂದ ಬೆಳೆಗೆ ಹಾಕಿರುವ ಬಂಡವಾಳದ ಕುರಿತು ಮಾಹಿತಿ ಪಡೆದರು.

ನಂತರ ಮಾತನಾಡಿದ ಅವರು ಸರ್ಕಾರದಿಂದ ನಷ್ಟವಾದ ಎಲ್ಲ ರೈತರಿಗೂ ಪರಿಹಾರ ನೀಡಲಾಗುವುದು ಜತೆಗೆ ಬೆಳೆ ವಿಮೆ ಸೌಲಭ್ಯಕ್ಕೆ ಒಳ ಪಡೆಸಲಾಗುವುದು ಎಂದರು, ಈ ಸಂದರ್ಭದಲ್ಲಿ ರೈತ ಮೋಕ್ಷನಾಥ ಮಾತನಾಡಿ, ಪ್ರತಿ ವರ್ಷ ಬೆಳೆ ವಿಮೆ ನೋಂದಾಯಿಸುತ್ತಿದ್ದೇವು ಬೆಳೆ ನಷ್ಟವಾದ ಒಮ್ಮೆಯೂ ಬೆಳೆ ವಿಮೆ ಸಿಕ್ಕಿಲ್ಲ, ಈ ಬಾರಿ ಬೆಳೆ ವಿಮೆ ಮಾಡಿಸಿಲ್ಲ ಎಂದರು. ಬೆಳೆ ವಿಮೆ ಸಿಕ್ಕಿಲ್ಲ ಎಂದ ಮಾತ್ರಕ್ಕೆ ಬೆಳೆ ವಿಮೆ ಮಾಡಿಸದೆ ಇರುವುದು ತಪ್ಪು, ಪ್ರತಿವರ್ಷ ರೈತರು ತಪ್ಪದೆ ಬೆಳೆ ವಿಮೆ ಮಾಡಿಸಬೇಕಿದೆ ಇಂತಹ ಸಂದರ್ಭಗಳಲ್ಲಿ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ರೈತರಿಗೆ ತಿಳಿಸಿದರು,
ನಂತರ ಪ್ರತಿಯೊಬ್ಬರು ಲಸಿಕೆ ಪಡೆಯುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ಟಿ.ಜಗದೀಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಎಂ ಬಸಣ್ಣ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ವಾಮದೇವ, ತೋಟಾಗಾರಿಕ ನಿರ್ದೇಶಕ ನೀಲಪ್ಪ. ಕಂದಾಯ ನಿರೀಕ್ಷಕ ಮುರುಳಿ. ಜಿಲ್ಲಾ ಪಂಚಾಯ್ತಿ ಎಂಜಿನಿಯರ್ ಮಲ್ಲಿಕಾರ್ಜುನ, ಡಿಡಿಎ ಮಂಜುಳಾ, ಗುಡೇಕೋಟೆ ಕೃಷಿ ಅಧಿಕಾರಿ ಪುಷ್ಕಾ ಹಳಾವನರ್‌. ಪವಿತ್ರಾ, ಗ್ರಾಮ ಲೆಕ್ಕಿಗರಾದ ಮರುಳಸಿದ್ದಪ್ಪ ಇದ್ದರು.

ವರದಿ:-ಮಂಜುನಾಥ್. ಹೆಚ್

LEAVE A REPLY

Please enter your comment!
Please enter your name here