ಚಿಕ್ಕಕೆರೆಯಾಗಿನಹಳ್ಳಿ ಕೆರೆ ಒತ್ತುವರಿ ತೆರವುಗೊಳಿಸಲು ಅಡ್ಡಿಯಾದ ರೈತರ ಮನವೊಲಿಸಿದ ಸಂಡೂರು ತಹಶೀಲ್ದಾರ್ ಹೆಚ್.ಜೆ.ರಶ್ಮೀ.

0
212

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಚಿಕ್ಕಕೆರೆಯಾಗಿನಹಳ್ಳಿಯಲ್ಲಿ ಗ್ರಾಮದ
ಸರ್ವೆ ನಂಬರ್:-113ರ ಪೈಕಿ,ವಿಸ್ತೀರ್ಣ:-249.10 ಎಕರೆ ವಿಸ್ತೀರ್ಣದಲ್ಲಿ,
ಒತ್ತುವರಿ ತೆರವಿಗೆ ತೆರಳಿದ್ದ ಅಧಿಕಾರಿಗಳಿಗೆ ರೈತರು ಮತ್ತು ಸ್ಥಳೀಯರು ತಡೆಯೊಡ್ಡಿದ ಘಟನೆ ಭಾನುವಾರ ಜರುಗಿದೆ.
ತಹಶೀಲ್ದಾರ್ ಹೆಚ್.ಜೇ ರಶ್ಮಿ , ಹಾಗೂ ಸಣ್ಣ ನೀರಾವರಿ ಇಲಾಖೆಯ ಎಇಇ ರಾಮಾಂಜಿನಪ್ಪ,ಕಂದಾಯ ನಿರೀಕ್ಷಕ ಯರ್ರಿಸ್ವಾಮಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಾದ ಮದ್ದಾನಪ್ಪ.ಡಿ. ಅಧಿಕಾರಿಗಳು 12.07.2021 ರಂದು ಸೋಮವಾರ ಚಿಕ್ಕ ಕೆರೆಯಾಗಿನಹಳ್ಳಿ ಗ್ರಾಮದ ಕೆರೆ ಒತ್ತುವರಿ ಪ್ರದೇಶಕ್ಕೆ ತೆರಳಿ ರೈತರ ಮನವೊಲಿಸುವಲ್ಲಿ ಯಶಸ್ವಿಯಾದರು.

ಹೈಕೋರ್ಟ್ ನಿರ್ದೇಶನದಂತೆ ತಾಲೂಕಿನ ಎಲ್ಲಾ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲಾತ್ತಿದ್ದು ಚಿಕ್ಕ ಕೆರೆಯಾಗಿನಹಳ್ಳಿ ಗ್ರಾಮದ ಕೆರೆ ಒತ್ತುವರಿ ಸಂಬಂಧ ಈ ಕೆಲಸವನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ ಅವರ ಕೆಲಸಕ್ಕೆ ಅಡ್ಡಿ ಪಡಿಸಬೇಡಿ, ಕೆರೆಗಳ ಅಭಿವೃದ್ಧಿಯಾದರೆ ನೀರಿನ ಸಂಗ್ರಹ ಪ್ರಮಾಣವು ಹೆಚ್ಚಾಗಲಿದೆ ರೈತರು ಬೇಸಿಗೆ ಕಾಲದಲ್ಲಿ ಕೂಡ ಬೆಳೆಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಹೇಳಿ ಅವರ ಮನ ಒಲಿಸಿದರು.

ತಾಲೂಕಿನಲ್ಲಿ ಈಗಾಗಲೇ 40 ಕೆರೆಗಳ ಸರ್ವೆ ಕಾರ್ಯ ಮುಗಿದಿದೆ ಯಾವ್ಯಾವ ಕೆರೆಯಲ್ಲಿ ಎಷ್ಟು ಎಷ್ಟು ಪ್ರದೇಶ ಒತ್ತುವರಿಯಾಗಿದೆ ಎಂಬ ವರದಿ ಬರಬೇಕಿದೆ ದರೋಜಿ ಕೆರೆ ಹೆಸರು ಮಾತ್ರ ಬಾಕಿ ಉಳಿದಿದೆ ಇಷ್ಟರಲ್ಲಿ ಅದನ್ನು ಮಾಡಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.

ಸಣ್ಣ ನೀರಾವರಿ ಇಲಾಖೆಯ ಎಇಇ ರಾಮಾಂಜಿನಪ್ಪ ಪತ್ರಕರ್ತರೊಂದಿಗೆ ಮಾತನಾಡಿ, ಚೋರನೂರು-ಸೋವೇನಹಳ್ಳಿ ಹಾಗೂ ಚಿಕ್ಕಕೆರೆಯಾಗಿನಹಳ್ಳಿ ಕೆರೆಗಳ ಸರಹದ್ದಿನಲ್ಲಿ ಸರಹದ್ದನ್ನು ಭದ್ರಪಡಿಸಿಕೊಳ್ಳಾಲಾಗುವುದು. ಕೆರೆ ಒತ್ತುವರಿ ಮಾಡಿದ ರೈತರಿಗೆ ಒತ್ತುವರಿ ತೆರವುಗೊಳಿಸಲು ನೋಟೀಸು ನೀಡುತ್ತಿದ್ದೇವೆ, ಒತ್ತುವರಿ ತೆರವುಗೊಳಿಸದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಸಂಧರ್ಭದಲ್ಲಿ ಕೂಡ್ಲಿಗಿ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಭರತ್ ಕುಮಾರ್, ಎಇ ಪರಮೇಶ್ವರಪ್ಪ ಕಂದಾಯ ನಿರೀಕ್ಷಕ ಎರಿಸ್ವಾಮಿ,ಗ್ರಾಮ ಲೆಕ್ಕಾಧಿಕಾರಿ ಮದ್ದಾನಪ್ಪ.ಡಿ.ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಗ್ರಾಮಸ್ಥರು ಇದ್ದರು.

LEAVE A REPLY

Please enter your comment!
Please enter your name here