ಸಾಮಾಜಿಕ ಅರಿವು ಅಸ್ಪøಶ್ಯತೆ ನಿವಾರಣೆ ; ಬೀದಿನಾಟಕ

0
238

ಧಾರವಾಡ:ಜ.11: ಕನ್ನಡ ಮತ್ತು ಸಂಸ್ಕøತಿ ಇಲಾಖೆ, ದಲಿತ ಸಂಘರ್ಷ ಸಮಿತಿಯ ಸಹಕಾರದೊಂದಿಗೆ ಜೈ ಭೀಮ ನಗರದಲ್ಲಿ ಇಂದು (ಜ.11) ಸಾಮಾಜಿಕ ಅರಿವು ಮತ್ತು ಅಸ್ಪøಶ್ಯತಾ ನಿವಾರಣೆ ಕುರಿತು ಬೀದಿ ನಾಟಕವನ್ನು ಪ್ರದರ್ಶನ ಏರ್ಪಡಿಸಿತ್ತು.

ರಾಜ್ಯ ಚಲವಾದಿ ಮಹಾಸಭಾದ ಉಪಾಧ್ಯಕ್ಷ ಶಿವಾನಂದ ನೀಲಣ್ಣವರ ಮಾತನಾಡಿ, ಡಾ|| ಅಂಬೇಡ್ಕರವರ ಕೊಡುಗೆ ಈ ನಾಡಿಗೆ ಅಪಾರವಾಗಿದೆ. ಸಂವಿಧಾನವನ್ನು ಕೊಟ್ಟು ನಮನ್ನೆಲ್ಲ ರಕ್ಷಿಸಿದಂತಹವರು. ಸಾಮಾಜಿಕ ಅಸ್ಪøಶ್ಯತೆಯ ನಿವಾರಣೆಗೆ ಸಂವಿಧಾನ ನೀಡಿದಂತಹ ಕಾನೂನುಗಳನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು. ಜಾಗೃತಿಯನ್ನು ಎಲ್ಲರಲ್ಲಿಯೂ ಮೂಡಿಸಬೇಕು. ಸ್ವಾತಂತ್ರ್ಯ, ಶಿಕ್ಷಣ, ಕಾನೂನುಗಳ ಅರಿವು ಮೂಡಿಸಲು ನಾಟಕಗಳು ಪೂರಕ ಎಂದರು.

ಮುಖ್ಯ ಅತಿಥಿಗಳಾಗಿ ಸುಭಾಷ ಪವಾರ, ಮಾರುತಿ ಪ್ರಭಾಕರ ಆಗಮಿಸಿದ್ದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವಿದ ಸಂಜು ಕುಂದಗೋಳ, ಸಂಚಾಲಕ ವಿಜಯ ದೊಡಮನಿ, ಕುಮಾರ ಮುದಕಣ್ಣವರ, ಸುರೇಶ ನವಲೂರ ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here