ಅಂತಿಮ ವರ್ಷದ ಪದವಿಯ ಹೆಚ್ಚಿಸಿರುವ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಲು AIDSO ಮನವಿ.

0
126

ಬಳ್ಳಾರಿ:ಸೆ15:-ಬಳ್ಳಾರಿ ನಗರದಲ್ಲಿ ಇಂದು AIDSO ವತಿಯಿಂದ ಸರಳಾದೇವಿ ಕಾಲೇಜಿನ ಅಂತಿಮ ವರ್ಷದ ಪದವಿಯ ಹೆಚ್ಚಿಸಿರುವ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಬೇಕೆಂದು ಮಾನ್ಯ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಲಾಯಿತು.

ಶ್ರೀಮತಿ ಸರಳಾದೇವಿ ಸತಿಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು(ಸ್ವಾಯತ್ತ)ದಲ್ಲಿ ಈ ಕಾಲೇಜಿನಲ್ಲಿ ಓದುವ ಬಹುತೇಕ ವಿದ್ಯಾರ್ಥಿಗಳು ಸುತ್ತಮುತ್ತಲಿನ ಹಳ್ಳಿಗಳಿಂದ ಹಾಗೂ ಬಡ ಕೂಲಿ ಕಾರ್ಮಿಕರು ಮತ್ತು ರೈತರ ಮಕ್ಕಳು. ಈಗಿನ ಕೊರೋನ ಪರಿಸ್ಥಿತಿಯಿಂದಾಗಿ ಹಲವು ರೀತಿಯ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಂಪೂರ್ಣ ಶುಲ್ಕವನ್ನು ಸರ್ಕಾರವೇ ಭರಿಸಬೇಕು. ಕಾಲೇಜಿನ ಸುತ್ತೋಲೆಯಲ್ಲಿ ವಿನಾಯಿತಿ ಶುಲ್ಕ ಕಟ್ಟಲು ಅರ್ಹ ವಿದ್ಯಾರ್ಥಿಗಳು ಕೇವಲ 150 ರೂ.ಗಳನ್ನು ಮಾತ್ರ ಕಟ್ಟಬೇಕೆಂದು ಸ್ಪಷ್ಟವಾಗಿದೆ. ಆದರೆ ಕಾಲೇಜಿನ ಅಂತರ್ಜಾಲ ತಾಣದಲ್ಲಿ ಬಹುತೇಕ ವಿದ್ಯಾರ್ಥಿಗಳಿಗೆ 1350 ರಿಂದ 1550 ರೂ.ಗಳನ್ನು ಕಟ್ಟುವ ಚಲನ್ ಸೃಜನೆಯಾಗುತ್ತಿದೆ. ಮೊದಲೇ ಆತಂಕದಲ್ಲಿರುವ ವಿದ್ಯಾರ್ಥಿಗಳಿಗೆ ಇಷ್ಟೊಂದು ದೊಡ್ಡ ಮೊತ್ತವನ್ನು ಪರೀಕ್ಷಾ ಶುಲ್ಕವಾಗಿ ಕಟ್ಟಬೇಕೆಂಬುದು ಆಘಾತವಾಗಿದೆ. ಹಾಗೂ ಅಂತಿಮ ವರ್ಷದ ಪ್ರಮಾಣ ಪತ್ರ ಶುಲ್ಕವನ್ನು 200 ರೂ.ಗಳನ್ನು ವಿದ್ಯಾರ್ಥಿಗಳು ಕಟ್ಟಬೇಕೆಂದು ಇದೆ. ಆದರೆ ನಮ್ಮ VSKUBಯ ಪ್ರಮಾಣ ಪತ್ರ ಶುಲ್ಕ 150 ರೂ.ಗಳನ್ನು ಮಾತ್ರ ಕಟ್ಟಿಸಿಕೊಂಡಿದೆ. ಆದ್ದರಿಂದ ಈ ಎಲ್ಲಾ ಸಮಸ್ಯೆಗಳನ್ನು ಪರಿಗಣಿಸಿ ಈ ಕೂಡಲೇ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಬೇಕೆಂದು ಎಐಡಿಎಸ್‌ಓ ಸಂಘಟನಾಕಾರರು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಕಾಲೇಜಿನ ಪ್ರಾಂಶುಪಾಲರಾದ ಫ್ರೋ.ಹೇಮಣ್ಣರವರು ವಿದ್ಯಾರ್ಥಿಗಳು ಹಿತದೃಷ್ಟಿಯಿಂದ ಹೆಚ್ಚಿಸಿರುವ ಶುಲ್ಕದಲ್ಲಿ ಶೇ.50 ಮಾತ್ರ ಕಡಿಮೆ ಮಾಡಲಾಗುವುದು ಎಂದು ಭರವಸೆ ನಿಡಿದರು.

ಈ ಸಂದರ್ಭದಲ್ಲಿ AIDSO ಜಿಲ್ಲಾ ಸೆಕ್ರೆಟರಿಯಟ್ ಸದಸ್ಯರಾದ ಕೆ.ಈರಣ್ಣ, ಸಿದ್ದು ಹಾಗೂ ಇನ್ನಿತರೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬೇಡಿಕೆಗಳು :
◆ವಿನಾಯಿತಿ ಶುಲ್ಕ ಪಾವತಿಸಬೇಕಾದ ವಿದ್ಯಾರ್ಥಿಗಳಿಂದ ಸಂಪೂರ್ಣ ಶುಲ್ಕ ಪಡೆಯಬೇಡಿ.
◆ಅಂತಿಮ ವರ್ಷದ ಪ್ರಮಾಣ ಪತ್ರ ಶುಲ್ಕವನ್ನು 150 ರೂ.ಗಳನ್ನು ಮಾತ್ರ ಕಟ್ಟಿಸಿಕೊಳ್ಳಿ.

ವರದಿ:-ಮಹೇಶ್

LEAVE A REPLY

Please enter your comment!
Please enter your name here